Home Interesting ಮದುವೆಗೆ ಬಂದು ವಧು-ವರರನ್ನು ಹರಸಿ ಹೋಗುವ ಬದಲು ಚಿನ್ನದ ಬ್ಯಾಗ್ ಅನ್ನೇ ಎತ್ತಾಕೊಂಡೋದ ಕಳ್ಳ

ಮದುವೆಗೆ ಬಂದು ವಧು-ವರರನ್ನು ಹರಸಿ ಹೋಗುವ ಬದಲು ಚಿನ್ನದ ಬ್ಯಾಗ್ ಅನ್ನೇ ಎತ್ತಾಕೊಂಡೋದ ಕಳ್ಳ

Hindu neighbor gifts plot of land

Hindu neighbour gifts land to Muslim journalist

ಗ್ವಾಲಿಯರ್: ಮದುವೆ ಅಂದ್ರೆ ಅತಿಥಿಗಳಿಗೆ ಸಂಭ್ರಮದ ಹಬ್ಬ. ಎಲ್ಲರೊಂದಿಗೆ ಬೆರೆದು ಸುಖ ಸಮಾಚಾರ ವಿಚಾರಿಸಿ ಮಧುಮಕ್ಕಳನ್ನು ಹಾರೈಸಿ ಹೋಗೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ಮದುವೆ ನೆಪದಲ್ಲಿ ಕಳ್ಳತನಕ್ಕೆ ಕೈ ಹಾಕಿದ್ದಾನೆ.

ಹೌದು. ಈ ಚಾಲಾಕಿ ಕಳ್ಳ ಮದುಮಕ್ಕಳಿಗೆ ಹಾರೈಸಲು ಬಂದು ಚಿನ್ನದ ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾನೆ.ಮದುವೆ ಮನೆಯಲ್ಲಿ ಫೋಟೋ ತೆಗೆಸಿಕೊಳ‍್ಳುವವನಂತೆ ಬಂದಿದ್ದ ಕಳ್ಳ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ ಹೊತ್ತುಕೊಂಡು ಅಮಾಯಕನಂತೆ ಮದುವೆ ಮನೆಯಿಂದ ಜಾಗ ಖಾಲಿ ಮಾಡಿದ್ದಾನೆ.

ಫೋಟೋ ತೆಗೆಸಿಕೊಳ್ಳಲು ಮಧು ಮಕ್ಕಳ ಬಳಿ ಬಂದಿದ್ದ ವ್ಯಕ್ತಿ ಮೆತ್ತಗೆ ವಧುವಿನ ಕುರ್ಚಿಯ ಹಿಂಬದಿಗೆ ಹೋಗಿ ಬ್ಯಾಗ್ ಎತ್ತಿಕೊಂಡು ಹೋಗಿದ್ದಾನೆ. ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳಿದ್ದ ಬ್ಯಾಗ್ ನಾಪತ್ತೆಯಾದ ಬಗ್ಗೆ ತಿಳಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.