Home latest ದಕ್ಷಿಣಕನ್ನಡದಾದ್ಯಂತ ಆಕ್ಟೀವ್ ಆದ ಲವ್ ಜಿಹಾದ್ | ಮತ್ತೆ ವಿಟ್ಲದಲ್ಲಿ ಹಿಂದೂ ಯುವತಿಯರನ್ನು ಗುಡ್ಡಕ್ಕೆ ಕರೆದೊಯ್ದ...

ದಕ್ಷಿಣಕನ್ನಡದಾದ್ಯಂತ ಆಕ್ಟೀವ್ ಆದ ಲವ್ ಜಿಹಾದ್ | ಮತ್ತೆ ವಿಟ್ಲದಲ್ಲಿ ಹಿಂದೂ ಯುವತಿಯರನ್ನು ಗುಡ್ಡಕ್ಕೆ ಕರೆದೊಯ್ದ ಪ್ರಕರಣ!

Hindu neighbor gifts plot of land

Hindu neighbour gifts land to Muslim journalist

ದಿನದಿಂದ ದಿನಕ್ಕೆ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಇನ್ನೂ ಈ ಆಘಾತಕಾರಿ ಸಂಗತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹೆಚ್ಚಳವಾಗಿದೆ. ಪುತ್ತೂರಿನ ಲವ್ ಜಿಹಾದ್ ಪ್ರಕರಣದ ಬೆನ್ನಲ್ಲೇ ಇದೀಗ ವಿಟ್ಲದ ಯುವತಿಗೆ ಬಲೆ ಬೀಸಿದ್ದಾರೆ.

ಅಪ್ರಾಪ್ತ ಹಿಂದೂ ಬಾಲಕಿಯೊಬ್ಬಳನ್ನು ಅನ್ಯಕೋಮಿನ ಇಬ್ಬರು ಯುವಕರು ಅಪಹರಿಸಿ ಅಳಕಮಜಲು ಸಮೀಪದ ನಿನ್ನಿಕಲ್ಲು ಗುಡ್ಡಕ್ಕೆ ಕರೆದುಕೊಂಡು ಹೋಗಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ವಿಟ್ಲ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರದ ವತಿಯಿಂದ ಕಬಕ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಕಂಪ್ಯೂಟರ್ ಶಿಕ್ಷಣ ಆಯೋಜಿಸಲಾಗಿತ್ತು. ಅಲ್ಲಿಗೆ ಸಂತ್ರಸ್ತ ಯುವತಿ ಎಂದಿನಂತೆ ಅಂದು ಕೂಡ ತೆರಳಿದ್ದಳು. ಆ ಸಂದರ್ಭದಲ್ಲಿ ಒಬ್ಬ ಅಪ್ರಾಪ್ತ ಬಾಲಕನ ಜೊತೆಗೆ ಇಬ್ಬರು ಯುವಕರು ಆ ಬಾಲಕಿಯನ್ನು ಮಾತಿನಿಂದ ಮರುಳು ಮಾಡಿ ಗ್ರಾಮ ಪಂಚಾಯತ್ ನ ಸಭಾಂಗಣದಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಆಕೆಯನ್ನು ಅಲ್ಲಿಂದ ಅಪಹರಿಸಿಕೊಂಡು ಇಡ್ಕಿದು ಗ್ರಾಮದ ನಿನ್ನಿಕಲ್ಲು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಈ ವಿಚಾರವನ್ನು ಯುವತಿ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಪೋಷಕರು ನಿನ್ನಿಕಲ್ಲು ಗುಡ್ಡ ಪ್ರದೇಶಕ್ಕೆ ತಮ್ಮ ಮಗಳನ್ನು ಹುಡುಕಿಕೊಂಡು ಹೋದಾಗ ಅಲ್ಲಿ ಇಬ್ಬರು ಯುವಕರು ಇರುವುದು ಕಂಡುಬಂದಿದೆ. ಯುವತಿಯ ಪೋಷಕರು ಅಲ್ಲಿಗೆ ಬರುತ್ತಿದ್ದಂತೆ ಆ ಇಬ್ಬರು ಯುವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಮಗಳನ್ನು ಹುಡುಕಿ ಮನೆಗೆ ಕರೆದುಕೊಂಡು ಹೋಗಿದ್ದೇವೆ, ಯಾವುದೋ ದುರುದ್ಧೇಶದಿಂದ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ನಿನ್ನೆ ಸಂಜೆ ನಿನ್ನಿಕಲ್ಲು ಗುಡ್ಡದಲ್ಲಿ ಇಬ್ಬರು ಮುಸ್ಲಿಂ ಯುವಕರು ಓರ್ವ ಮುಸ್ಲಿಂ ಯುವತಿ ಹಾಗೂ ಒಬ್ಬಳು ಅಪ್ರಾಪ್ತ ಯುವತಿ ಇವರೆಲ್ಲಾ ಜೊತೆಯಾಗಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದರು. ಬಳಿಕ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿ, ಸಾರ್ವಜನಿಕರು ಆ ನಾಲ್ವರನ್ನು ವಿಟ್ಲ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಗುಡ್ಡದಲ್ಲಿ ಪತ್ತೆಯಾದ ಮುಸ್ಲಿಂ ಯುವತಿ ಕಬಕದ ಮೀನು ವ್ಯಾಪಾರಿಯ ಪುತ್ರಿ ಎಂದು ಗುರುತಿಸಲಾಗಿದೆ. ಆಕೆ ಮುಸ್ಲಿಂ ಯುವಕರಿಗೆ ಹಿಂದೂ ಬಾಲಕಿಯನ್ನು ಪರಿಚಯಿಸಿ ಸ್ನೇಹ, ಸಲುಗೆ ಬೆಳೆಸಲು ಸೇತುವೆಯಾಗಿದ್ದಾಳೆ ಎಂದು ಹಿಂದೂತ್ವವಾದಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.