Home latest LIC Dhan Sanchay Policy : ಎಲ್ ಐಸಿಯ ಈ ಧನ್ ಸಂಚಯ್ ಉಳಿತಾಯ ಯೋಜನೆಯ...

LIC Dhan Sanchay Policy : ಎಲ್ ಐಸಿಯ ಈ ಧನ್ ಸಂಚಯ್ ಉಳಿತಾಯ ಯೋಜನೆಯ ಲಾಭ ಪಡೆಯಿರಿ | ಹೆಚ್ಚಿನ ಮಾಹಿತಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಬ್ಬರೂ ತಾವು ಗಳಿಸಿದ ಆದಾಯವನ್ನು ನಿಶ್ಚಿತ ಲಾಭದ ಜೊತೆಗೆ ಆರ್ಥಿಕ ಭದ್ರತೆ ನೀಡುವ ಯೋಜನೆಯನ್ನು ನೆಚ್ಚಿಕೊಳ್ಳುವುದು ಸಾಮಾನ್ಯ.

ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ, ಅಥವಾ ಹಣ ವಹಿವಾಟು ಮಾಡಲು ನೆರವಾಗುವ ದೃಷ್ಟಿಯಿಂದ ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್, ಇನ್ನಿತರ ಹಣಕಾಸು ಸಂಸ್ಥೆಗಳ ಮೂಲಕ ಆದಾಯವನ್ನು ಹೂಡಿಕೆ ಮಾಡಿ ಅಗತ್ಯಕ್ಕೆ ಅನುಗುಣವಾಗಿ ಹಣ ಪಡೆಯುವ , ರವಾನಿಸುವ ವ್ಯವಸ್ಥೆಯ ಸದುಪಯೋಗವನ್ನು ಅನೇಕ ಮಂದಿ ಬಳಸುತ್ತಿದ್ದಾರೆ.

ಎಲ್‌ಐಸಿ ಗ್ರಾಹಕರಿಗೆ ಅನೇಕ ಯೋಜನೆಗಳನ್ನು ನೀಡುತ್ತ ನೆರವಾಗುತ್ತಿದೆ. ಇದೀಗ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಧನ್ ಸಂಚಯ್ ಉಳಿತಾಯ ಯೋಜನೆ ಎಂಬ ಹೊಸ ವಿಮಾ ಪಾಲಿಸಿಯನ್ನು ಪ್ರಾರಂಭಿಸಿದ್ದು, ಎಲ್‌ಐಸಿ ಧನ್ ಸಂಚಯ್ ಪಾಲಿಸಿ ಅಡಿಯಲ್ಲಿ, ಪಾಲಿಸಿದಾರನ ಮರಣದ ನಂತರ, ಪಾಲಿಸಿಯ ಅವಧಿಯಲ್ಲಿ ಕುಟುಂಬವು ಹಣಕಾಸಿನ ನೆರವು ಪಡೆಯಲು ಸಾಧ್ಯವಾಗುತ್ತದೆ.

ಅಲ್ಲದೆ, ಪಾಲಿಸಿಯ ಮೆಚ್ಯೂರಿಟಿಯ ನಂತರ ಪಾವತಿಯ ಅವಧಿಯಲ್ಲಿ ಇದು ಖಾತರಿಯ ಆದಾಯವನ್ನು ನೀಡುತ್ತದೆ. 5 ರಿಂದ 15 ವರ್ಷಗಳ ಯೋಜನೆಯಲ್ಲಿ ಈ ನಿರ್ದಿಷ್ಟ ಪಾಲಿಸಿಯಲ್ಲಿ, ಯೋಜನೆಯ ಮುಕ್ತಾಯದ ದಿನಾಂಕದ ನಂತರ ಪಾವತಿಯ ಸಮಯದಲ್ಲಿ ಖಾತರಿಪಡಿಸಿದ ಪ್ರಯೋಜನದ ಜೊತೆಗೆ ಖಾತರಿಪಡಿಸಿದ ಟರ್ಮಿನಲ್ ಪ್ರಯೋಜನಗಳನ್ನು ಕೂಡ ನೀಡಲಾಗುತ್ತದೆ.

ಈ ಯೋಜನೆಯು 5 ವರ್ಷದಿಂದ ಗರಿಷ್ಠ 15 ವರ್ಷಗಳ ಕಾಲ ಗ್ರಾಹಕ ಹೂಡಿಕೆ ಮಾಡಿ, ಸ್ಥಿರ ಆದಾಯದ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಆದಾಯದ ಪ್ರಯೋಜನಗಳಲ್ಲಿ ಸಿಂಗಲ್ ಪ್ರೀಮಿಯಂ ಮಟ್ಟದ ಆದಾಯದ ಪ್ರಯೋಜನಗಳು ಮತ್ತು ಏಕ ಯೋಜನೆ ಕೂಡ ಒಳಗೊಂಡಿವೆ .

ಸಾಲದ ಲೋನ್ ಸೌಲಭ್ಯದ ಜೊತೆಗೆ ನೀವು ರೈಡರ್‌ಗಳನ್ನು ಸಹ ಖರೀದಿಸಬಹುದು.ಎಲ್‌ಐಸಿ ನಾಲ್ಕು ಆಯ್ಕೆಗಳನ್ನು ಪ್ರಾರಂಭಿಸಿದ್ದು,ಪ್ಲಾನ್ ಎ ಮತ್ತು ಬಿ ಅಡಿಯಲ್ಲಿ, ಮರಣದ ನಂತರ ರೂ 3,30,000 ಮೊತ್ತದ ವಿಮಾ ರಕ್ಷಣೆ ಲಭ್ಯವಿರುತ್ತದೆ. ಅಲ್ಲದೆ, ಪ್ಲಾನ್ C ಅಡಿಯಲ್ಲಿ ಕನಿಷ್ಠ 2,50,000 ರೂ.ಗಳ ವಿಮಾ ಮೊತ್ತದ ಕವರ್ ಮತ್ತು ಪ್ಲಾನ್ D ಯಲ್ಲಿ ಮರಣ ಹೊಂದಿದಲ್ಲಿ 22,00,000 ರೂ.

ಈ ಯೋಜನೆಗಳಿಗೆ ಗರಿಷ್ಠ ಪ್ರೀಮಿಯಂ ಮಿತಿಯನ್ನು ಸದ್ಯಕ್ಕೆ ನಿಗದಿಪಡಿಸಲಾಗಿಲ್ಲ.LIC ಧನ್ ಸಂಜಯ್ ಯೋಜನೆಯ ಪಾಲಿಸಿಯನ್ನು ಬಳಸಲು ಚಂದಾದಾರರ ಕನಿಷ್ಠ ವಯಸ್ಸು 3 ವರ್ಷಗಳಾಗಿದ್ದು, ಆದರೆ ಆಯ್ಕೆ A ಮತ್ತು ಆಯ್ಕೆ B ಗೆ 50 ವರ್ಷಗಳು, ಆಯ್ಕೆ C ಗಾಗಿ 65 ವರ್ಷಗಳು ಮತ್ತು ಆಯ್ಕೆ D ಗಾಗಿ ಗರಿಷ್ಠ 40 ವರ್ಷಗಳು.

ಅಂದರೆ, 3 ವರ್ಷದಿಂದ 40 ವರ್ಷ ವಯಸ್ಸಿನವರು ಇದರಲ್ಲಿ ಹೂಡಿಕೆ ಮಾಡಬಹುದು. LIC ಧನ್ ಸಂಚಯ್ ಪಾಲಿಸಿಯನ್ನು ಪಡೆಯಲು ಏಜೆಂಟ್‌ಗಳು / ಇತರ ಮಧ್ಯವರ್ತಿಗಳ ಮೂಲಕ ಆಫ್‌ಲೈನ್‌ನಲ್ಲಿ ಮತ್ತು ನೇರವಾಗಿ ಆನ್‌ಲೈನ್‌ನಲ್ಲಿ www.licindia.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಖರೀದಿಸಬಹುದಾಗಿದೆ.

ಆರ್ಥಿಕ ಭದ್ರತೆಯ ಜೊತೆಗೆ ಹಣಕಾಸಿನ ಬಿಕ್ಕಟನ್ನು ನಿವಾರಿಸಲು ಹೂಡಿಕೆ ಅವಶ್ಯಕವಾಗಿದ್ದು, LIC ಯಲ್ಲಿ ವಿವಿಧ ಯೋಜನಾ ಸೌಲಭಗಳಿದ್ದು ಅವಶ್ಯಕತೆ ಮತ್ತು ಅನಿವಾರ್ಯತೆಗೆ ಅನುಗುಣವಾಗಿ ಠೇವಣಿ ಮಾಡಿ ಯೋಜನೆಯ ಲಾಭ ಪಡೆಯಬಹುದಾಗಿದೆ.