Home News Belthangady: ಉಜಿರೆ ಕಾಲೇಜು ಹಿಂದೂ ಹುಡುಗಿಗೆ ಡ್ರಾಪ್ ಕೊಟ್ಟ ಮುಸ್ಲಿಂ ಚಾಲಕ, ಧರ್ಮಸ್ಥಳದಲ್ಲಿ ಹಲ್ಲೆ !

Belthangady: ಉಜಿರೆ ಕಾಲೇಜು ಹಿಂದೂ ಹುಡುಗಿಗೆ ಡ್ರಾಪ್ ಕೊಟ್ಟ ಮುಸ್ಲಿಂ ಚಾಲಕ, ಧರ್ಮಸ್ಥಳದಲ್ಲಿ ಹಲ್ಲೆ !

Moral policing in Belthangady

Hindu neighbor gifts plot of land

Hindu neighbour gifts land to Muslim journalist

Moral policing in Belthangady: ನೈತಿಕ ಪೊಲೀಸ್​ಗಿರಿಯಿಂದ ಆಗಾಗ ಸುದ್ದಿಯಾಗುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ‘ನೈತಿಕ ಪೊಲೀಸ್ ಗಿರಿ’ ಪ್ರಕರಣ ವರದಿಯಾಗಿದೆ. ಹಿಂದೂ ಯುವತಿಯನ್ನು ಆಟೋದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ(Moral policing in Belthangady) ತಾಲೂಕಿನ ಧರ್ಮಸ್ಥಳ(Dharmasthala)ದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಘಟನೆ ವಿವರ:
ಬೆಂಗಳೂರಿನ (Bengaluru) ನಿವಾಸಿ ಹಿಂದೂ ವಿದ್ಯಾರ್ಥಿನಿಯೊಬ್ಬಳು ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಳೆದ ವಾರ ಕಾಲೇಜು ಕೊನೆಗೊಂಡಿದ್ದು, ಹಾಗಾಗಿ ನಿನ್ನೆ ರಾತ್ರಿ (ಆ.02ರಂದು)ಉಜಿರೆಯಿಂದ ಬೆಂಗಳೂರಿಗೆ ತೆರಳಲು ತನಗೆ ಪರಿಚಯವಿರುವ ಅನ್ಯಕೋಮಿನ ಆಟೋ ಚಾಲಕನಿಗೆ(Auto driver) ಕರೆ ಮಾಡಿದ್ದಾಳೆ.

ಆತನು ಯುವತಿಯನ್ನು ಉಜಿರೆಯಿಂದ(ujire) ಧರ್ಮಸ್ಥಳ ಬಸ್ ನಿಲ್ದಾಣಕ್ಕೆ ರಾತ್ರಿ 9 ಗಂಟೆಯ ಹೊತ್ತಿಗೆ ಅವಳನ್ನು ಡ್ರಾಪ್ ಮಾಡಿ ಹಿಂದಿರುಗುವಾಗ ಅಪರಿಚಿತ ಯುವಕರ ಗುಂಪೊಂದು ‘ನಿನಗೆ ಹಿಂದೂ ಯುವತಿಯರೇ ಬೇಕಾ’ ಎಂದು ಬೆದರಿಕೆ ಹಾಕಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೈದವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಧರ್ಮಸ್ಥಳ ಸುತ್ತಮುತ್ತಲಿನ ಸಿಸಿಕ್ಯಾಮರಗಳನ್ನು ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಹುಡುಕಾಟದಲ್ಲಿದ್ದಾರೆ.

 

ಇದನ್ನು ಓದಿ: SBI FD Rates: ಸ್ಟೇಟ್ ಬ್ಯಾಂಕ್ ನಿಂದ ಅಮೃತ ಕಲಶ ಫಿಕ್ಸೆಡ್ ಡಿಪಾಸಿಟ್ ಪ್ರಾರಂಭ, ಆಕರ್ಷಕ ಬಡ್ಡಿ !