Home Interesting ಭಾರತೀಯ ಸೇನೆಯನ್ನು ಮದುವೆಗೆ ಆಹ್ವಾನಿಸಿದ ಕೇರಳದ ವಧುವರರು | ಏನಿದು ವೈರಲ್ ನ್ಯೂಸ್ , ಇಲ್ಲಿದೆ...

ಭಾರತೀಯ ಸೇನೆಯನ್ನು ಮದುವೆಗೆ ಆಹ್ವಾನಿಸಿದ ಕೇರಳದ ವಧುವರರು | ಏನಿದು ವೈರಲ್ ನ್ಯೂಸ್ , ಇಲ್ಲಿದೆ ಕಂಪ್ಲೀಟ್ ವಿವರ!

Hindu neighbor gifts plot of land

Hindu neighbour gifts land to Muslim journalist

ನೀವು ಮದುವೆಗೆ ಯಾರನ್ನೆಲ್ಲ ಆಹ್ವಾನಿಸುತ್ತೀರಿ? ಬಂಧು, ಬಳಗ, ಸ್ನೇಹಿತರು, ಊರವರು ಅಷ್ಟೇ ಅಲ್ವಾ..! ಆದರೆ ಇದೀಗ ವೈರಲ್ ಆಗಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಕೇರಳದ ವಧುವರರು ತಮ್ಮ ಮದುವೆಗೆ ಭಾರತೀಯ ಸೇನೆಯನ್ನು ಆಹ್ವಾನಿಸಿದ್ದಾರೆ. ಈ ಆಹ್ವಾನಕ್ಕೆ ಪ್ರತಿಯಾಗಿ ಸೇನೆಯು ಕೈಬರಹದಲ್ಲಿ ನವದಂಪತಿಗೆ ಖುಷಿಯಿಂದ ಶುಭಕೋರಿ ಹಾರೈಸಿದೆ. ಇನ್ನೂ, ನೆಟ್ಟಿಗರು ಇದಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೊಸ ಜೀವನದ ಪ್ರಾರಂಭಕ್ಕೆ ಶುಭಹಾರೈಕೆಗಳು ಬಹಳ ಮುಖ್ಯ. ಅವು ಆತ್ಮವಿಶ್ವಾಸವನ್ನು ಹೆಚ್ಚಿಸಿ, ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಮತ್ತು ಹೊಸ ಹುರುಪು, ಚೈತನ್ಯವನ್ನು ತುಂಬುತ್ತದೆ. ಹಾಗೆಯೇ ಕೇರಳದ ಈ ವಧುವರರಿಗೆ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುವ ಭಾರತೀಯ ಸೇನೆಯನ್ನು ಮದುವೆಗೆ ಆಹ್ವಾನಿಸಿದರೆ ಹೇಗೆ ಎಂಬ ಆಲೋಚನೆ ಬಂದಿದೆ. ಆ ಪ್ರಕಾರ ಅವರು ಸೇನೆಗೆ ಆಹ್ವಾನ ಪತ್ರಿಕೆಯನ್ನೂ ಕಳಿಸಿದ್ದಾರೆ.

ಇನ್ನೂ ಆ ಆಹ್ವಾನ ಪತ್ರಿಕೆಯಲ್ಲಿ ಹೀಗಿತ್ತು, ನಿಮ್ಮ ದೇಶಸೇವೆಗೆ ಋಣಿಯಾಗಿದ್ದೇವೆ. ನಿಮ್ಮ ಶ್ರಮದಿಂದಾಗಿ ನಾವು ಪ್ರತೀ ದಿನ ನೆಮ್ಮದಿಯಿಂದ ಮಲಗುತ್ತೇವೆ. ನಮ್ಮ ಪ್ರೀತಿಪಾತ್ರರೊಂದಿಗೆ ಸಂತೋಷದಿಂದ ದಿನ ಕಳೆಯುತ್ತೇವೆ. ನಿಮ್ಮನ್ನು ನಮ್ಮ ಮದುವೆಗೆ ಆಹ್ವಾನಿಸಲು ಖುಷಿಯಾಗುತ್ತಿದೆ. ದಯವಿಟ್ಟು ಆ ದಿನ ಬಂದು ಆಶೀರ್ವದಿಸಬೇಕಾಗಿ ವಿನಂತಿ- ಹೀಗೆಂದು ನವೆಂಬರ್ 10ಕ್ಕೆ ಇದ್ದ ಮದುವೆಗೆ ಆಹ್ವಾನಿಸಲಾಗಿತ್ತು.

ಈ ಲಗ್ನಪತ್ರಿಕೆಯನ್ನು ಭಾರತೀಯ ಸೇನೆಯು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಹಳ ಖುಷಿಯಿಂದ ಹಂಚಿಕೊಂಡಿದೆ. ‘ರಾಹುಲ್ ಮತ್ತು ಕಾರ್ತಿಕಾ ನೀವು ನಮ್ಮನ್ನು ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ದಾಂಪತ್ಯ ಜೀವನ ಸಂತೋಷದಿಂದ ಕೂಡಿರಲಿ’ ಎಂದು ನವದಂಪತಿಗೆ ಶುಭ ಹಾರೈಸಿದೆ.

ಇನ್ನೂ ಈ ಪೋಸ್ಟ್​ ಬರೋಬ್ಬರಿ 85,000 ಜನರ ಮೆಚ್ಚುಗೆ ಗಳಿಸಿದೆ. ನೆಟ್ಟಿಗರು ದಂಪತಿಯ ಈ ನಡೆಯನ್ನು ಕೊಂಡಾಡಿದ್ದಾರೆ. ಇದು ಬಹಳ ಅದ್ಭುತವಾದ ಆಲೋಚನೆ, ನಮ್ಮ ದೇಶಸೇವೆ ಮಾಡುತ್ತಿರುವ ಹೀರೋಗಳಿಗೆ ಪ್ರೀತಿಯನ್ನು ವ್ಯಕ್ತಪಡಿಸಿದ ರೀತಿ ಬಹಳ ಚೆನ್ನಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.