Home latest ಮಹಿಳೆಯರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ರೈಲ್ವೇನಲ್ಲಿ ಇನ್ನು ಮುಂದೆ ಈ ಸೌಲಭ್ಯ ನಿಮಗೆ...

ಮಹಿಳೆಯರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ರೈಲ್ವೇನಲ್ಲಿ ಇನ್ನು ಮುಂದೆ ಈ ಸೌಲಭ್ಯ ನಿಮಗೆ ಕಡ್ಡಾಯ – ರೈಲ್ವೇ ಇಲಾಖೆ ಮಹತ್ವದ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಭಾರತೀಯ ರೈಲ್ವೆ ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಬೆಳವಣಿಗೆ, ಅಭಿವೃದ್ಧಿಯನ್ನು ಕಾಣುವುದರ ಜೊತೆ ಜೊತೆಗೆ ಜನರ ಕ್ಷೇಮ ಮತ್ತು ರಕ್ಷಣೆಯ ದೃಷ್ಟಿಯಿಂದ ಭಾರತೀಯ ರೈಲ್ವೆಯು ಮಹಿಳೆಯರಿಗಾಗಿ ಒಂದು ದೊಡ್ಡ ಘೋಷಣೆ ಮಾಡಲಾಗಿದೆ.

ಇನ್ನು ಮುಂದೆ ಮಹಿಳೆಯರು ರೈಲಿನಲ್ಲಿ ಆಸನದ ಬಗ್ಗೆ ಚಿಂತಿಸಬೇಕಾಗಿಲ್ಲ. ರೈಲ್ವೆ ಸಚಿವರು, ಮಹಿಳೆಯರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಘೋಷಣೆ ಮಾಡಿದ್ದಾರೆ. ಬಸ್ ಮತ್ತು ಮೆಟ್ರೋಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನಗಳನ್ನ ಕಾಯ್ದಿರಿಸಿದಂತೆ, ಭಾರತೀಯ ರೈಲ್ವೆ ಕೂಡ ಮಹಿಳೆಯರಿಗೆ ಆಸನಗಳನ್ನು ಕಾಯ್ದಿರಿಸುತ್ತದೆ.

ಅದಲ್ಲದೆ ಮಹಿಳಾ ಪ್ರಯಾಣಿಕರು ಮತ್ತು ರೈಲುಗಳು ಮತ್ತು ನಿಲ್ದಾಣಗಳಲ್ಲಿನ ಇತರ ಪ್ರಯಾಣಿಕರ ಸುರಕ್ಷತೆಗಾಗಿ RPF ಸಹಾಯದಿಂದ ರೈಲ್ವೆಯು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೈಲ್ವೆ ರಕ್ಷಣಾ ಪಡೆ ಕಳೆದ ವರ್ಷ ಅಖಿಲ ಭಾರತ ಉಪಕ್ರಮ ‘ಮೇರಿ ಸಹೇಲಿ’ಯನ್ನು ಪ್ರಾರಂಭಿಸಿತ್ತು, ಇದು ತಮ್ಮ ಪ್ರಯಾಣದುದ್ದಕ್ಕೂ ರೈಲುಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದೆ.

ನಿಯಮಗಳ ಪ್ರಕಾರ ಭಾರತೀಯ ರೈಲ್ವೆಯು ದೂರದ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಬರ್ತ್’ಗಳನ್ನು ಕಾಯ್ದಿರಿಸಿದೆ. ಇದರೊಂದಿಗೆ, ಮಹಿಳೆಯರ ಸುರಕ್ಷತೆಗಾಗಿ ಯೋಜನೆಯನ್ನ ಸಹ ಸಿದ್ಧಪಡಿಸಲಾಗುವುದು.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ದೂರದ ರೈಲುಗಳಲ್ಲಿ ಮಹಿಳೆಯರ ಆರಾಮದಾಯಕ ಪ್ರಯಾಣಕ್ಕಾಗಿ, ಭಾರತೀಯ ರೈಲ್ವೆ ಮೀಸಲು ಬರ್ತ್ ಗಳನ್ನು ನಿಗದಿಪಡಿಸುವುದು ಸೇರಿದಂತೆ ಅನೇಕ ಸೌಲಭ್ಯಗಳನ್ನು ಪ್ರಾರಂಭಿಸಿದೆ ಎಂದಿದ್ದಾರೆ.

ದೂರ ದೂರದ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ನಲ್ಲಿ ಆರು ಬರ್ತ್ ಗಳನ್ನು ಕಾಯ್ದಿರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಗರೀಬ್ ರಥ್, ರಾಜಧಾನಿ, ಡುರೊಂಟೊ ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್‍ನಲ್ಲಿ (3ಎಸಿ ವರ್ಗ) ಆರು ಬರ್ತ್‍ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಪ್ರತಿ ಸ್ಲೀಪರ್ ಕೋಚ್‍ಲ್ಲಿ ಆರರಿಂದ ಏಳು ಲೋವರ್ ಬರ್ತ್ಗಳು, ಎಸಿ 3 ಟೈರ್ (3ಎಸಿ) ಬೋಗಿಗಳಲ್ಲಿ ನಾಲ್ಕರಿಂದ ಐದು ಲೋವರ್ ಬರ್ತ್ಗಳು ಮತ್ತು ಎಸಿ 2 ಟೈರ್ (2ಎಸಿ) ಬೋಗಿಗಳಲ್ಲಿ ಮೂರರಿಂದ ನಾಲ್ಕು ಲೋವರ್ ಬರ್ತ್ಗಳನ್ನು ಹಿರಿಯ ನಾಗರಿಕರು, 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರು ಮತ್ತು ಗರ್ಭಿಣಿಯರಿಗೆ ಕಾಯ್ದಿರಿಸಲಾಗಿದೆ. ರೈಲಿನಲ್ಲಿ ಆ ವರ್ಗದ ಬೋಗಿಗಳ ಸಂಖ್ಯೆಯ ಆಧಾರದ ಮೇಲೆ ಕಾಯ್ದಿರಿಸುವಿಕೆಯನ್ನು ಮಾಡಲಾಗುತ್ತದೆ.

“ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ‘ಪೊಲೀಸ್’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ಭಾರತದ ಸಂವಿಧಾನದ ಏಳನೇ ಅನುಸೂಚಿಯ ಅಡಿಯಲ್ಲಿ ರಾಜ್ಯದ ವಿಷಯಗಳಾಗಿವೆ, ಅಲ್ಲದೆ , ರೈಲ್ವೆ ರಕ್ಷಣಾ ಪಡೆ (RPF) ಜಿಆರ್ಪಿ ಮತ್ತು ಜಿಲ್ಲಾ ಪೊಲೀಸ್ ಪ್ರಯಾಣಿಕರಿಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.