Home latest ‘ದೇಹವಾಂಛೆ’ ಅನೈತಿಕ ಸಂಬಂಧ ಮಾಡಿದಳು ಪತ್ನಿ : ಸಪ್ತಪದಿ ತುಳಿದು ಗಂಡನನ್ನೇ ಕೊಂದ ಕಿರಾತಕ...

‘ದೇಹವಾಂಛೆ’ ಅನೈತಿಕ ಸಂಬಂಧ ಮಾಡಿದಳು ಪತ್ನಿ : ಸಪ್ತಪದಿ ತುಳಿದು ಗಂಡನನ್ನೇ ಕೊಂದ ಕಿರಾತಕ ಹೆಂಡತಿ !!!

Hindu neighbor gifts plot of land

Hindu neighbour gifts land to Muslim journalist

ಅನೈತಿಕ ಸಂಬಂಧ ಕೆಲವೊಮ್ಮೆ ಯಾವ ಮಟ್ಟಕ್ಕೆ ಹೋಗಿ ಮುಟ್ಟುತ್ತೆ ಅಂದರೆ, ಕೊಲೆನೇ ನಡೆದೋಗುವವರೆಗೆ. ಎಲ್ಲಾ ಇದ್ದರೂ ಈ ದೇಹವಾಂಛೆಯ ಬೆನ್ನಟ್ಟಿ ಹೋಗುವವರ ಜೊತೆ ಜೊತೆಗೆ ಆಕೆ/ಆತನ ಸಂಸಾರ ದಿಕ್ಕು ದೆಸೆಯಿಲ್ಲದಂತಾಗುವ ಎಷ್ಟೋ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಅಂಥದ್ದೇ ಒಂದು ಘೋರ ಘಟನೆ ಮಂಡ್ಯದಲ್ಲಿ ನಡೆದಿದೆ.

ಪ್ರಿಯಕರನ ಸಾನಿಧ್ಯಕ್ಕಾಗಿ ಆತನ ಜೊತೆ ಸೇರಿ ಸಪ್ತಪದಿ ತುಳಿದ ಗಂಡನನ್ನೇ ಕೊಲೆ ಮಾಡಿ, ಕೊನೆಗೆ ನಾಟಕವಾಡಿದ್ದ ಖತರ್ನಾಕ್ ಪತ್ನಿಯನ್ನು ಬೆಂಗಳೂರು ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.

ಮಹೇಶ್ ಕೊಲೆಯಾದ ವ್ಯಕ್ತಿ. ಪತ್ನಿ ಶಿಲ್ಪ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ. ಮಂಡ್ಯ ಮೂಲದ ಮಹೇಶ್, ಬೆಂಗಳೂರಿನ ಶಿಲ್ಪಾಳನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ. ಮದುವೆಯಾದ ಬಳಿಕ ಇಬ್ಬರು ಬೆಂಗಳೂರಿನ ಕೋಣನಕುಂಟೆ ಠಾಣ ವ್ಯಾಪ್ತಿಯಲ್ಲಿ ವಾಸವಾಗಿದ್ದರು.

ಕಳೆದ ಗುರುವಾರ ಮಹೇಶ್‌ನನ್ನು ಶಿಲ್ಪಾ ಹಾಗೂ ಪ್ರಿಯಕರ ಇಬ್ಬರು ಸೇರಿ ಕೊಲೆ ಮಾಡಿ, ನಂತರ ಬಂದು ಪಿಡ್ಸ್ ಬಂದು ಮೃತಪಟ್ಟಿದ್ದಾನೆಂದು ನಾಟಕವಾಡಿ, ಮೃತದೇಹವನ್ನು ಶಿಲ್ಪಾ ಮಹೇಶ್ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಆದರೆ ಯಾಕೋ ಏನೋ ಹೆತ್ತ ಕರುಳು ಅನುಮಾನಗೊಂಡಿದ್ದಾರೆ. ನಂತರ ಮಹೇಶ್ ಪಾಲಕರು ಮೃತದೇಹವನ್ನು ಪರೀಕ್ಷಿಸಿದ್ದರು.

ಮೃತದೇಹದ ಮೇಲೆ ಗಾಯಗಳು ಪತ್ತೆಯಾದ ಬಳಿಕ ಮಂಡ್ಯ ಪೊಲೀಸರಿಗೆ ಪಾಲಕರು ಮಾಹಿತಿ ನೀಡಿದರು. ಬಳಿಕ ಶಿಲ್ಪಾಳನ್ನು ವಶಕ್ಕೆ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಈಗ ಈ ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ಮಂಡ್ಯ ಪೊಲೀಸರು ವರ್ಗಾಯಿಸಿದ್ದರು. ಇದೀಗ ಕೋಣನಕುಂಟೆ ಪೊಲೀಸರು ಶಿಲ್ಪಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.