Home News ಊಟದಲ್ಲಿ ಕೂದಲು ಪತ್ತೆ | ಸೈಕೋ ಗಂಡ ಹೆಂಡತಿಗೆ ಕೊಟ್ಟ ಶಿಕ್ಷೆ ಏನು ಗೊತ್ತಾ ?

ಊಟದಲ್ಲಿ ಕೂದಲು ಪತ್ತೆ | ಸೈಕೋ ಗಂಡ ಹೆಂಡತಿಗೆ ಕೊಟ್ಟ ಶಿಕ್ಷೆ ಏನು ಗೊತ್ತಾ ?

Hindu neighbor gifts plot of land

Hindu neighbour gifts land to Muslim journalist

ಊಟದಲ್ಲಿ ಕೂದಲು ಪತ್ತೆಯಾಗಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರಪ್ರದೇಶದ ಪಿಲಿಭಿತ್‌ನ ಗಜ್ರೌಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಊಟ ಮಾಡುತ್ತಿದ್ದ ವೇಳೆ ಆಹಾರದಲ್ಲಿ ಕೂದಲು ಸಿಕ್ಕಿತು ಎಂಬ ಕಾರಣಕ್ಕೆ ಕೋಪಗೊಂಡ ಪತಿಯು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆತ ಸೈಕೋ ರೀತಿಯಾಗಿ ವರ್ತಿಸಿ, ಹೆಂಡತಿಯ ಕೈಕಾಲು ಕಟ್ಟಿ ಹಾಕಿ ಬಲವಂತವಾಗಿ ಸಂಭೋಗಕ್ಕೆ ಯತ್ನಿಸಿದ್ದಾನೆ. ಅಲ್ಲದೆ, ಆಕೆಯ ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾನೆ. ಈ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೂ ಪತಿಯ ಈ ಹುಚ್ಚು ಕಾರ್ಯಕ್ಕೆ ಅತ್ತೆ-ಮಾವ ಕೂಡ ಸಾಥ್ ನೀಡಿದ್ದು, ‘ನನ್ನ ಮೇಲೆ ಪತಿ ಮನಬಂದಂತೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದರೂ ಅತ್ತೆ-ಮಾವ ನನ್ನ ಸಹಾಯಕ್ಕೆ ಬರಲಿಲ್ಲ. ಬದಲಾಗಿ ನನ್ನ ಮೇಲೆ ಗಂಡ ಮೃಗೀಯವಾಗಿ ವರ್ತಿಸುತ್ತಿರುವುದನ್ನು ನೋಡಿ ಅತ್ತೆ-ಮಾವ ಮಜಾ ತೆಗೆದುಕೊಳ್ಳುತ್ತಿದ್ದರು. ನನ್ನ ರಕ್ಷಣೆಗೆ ಬಾರದೆ ನನ್ನ ಗಂಡನಿಗೆ ಸಾಥ್ ನೀಡುತ್ತಿದ್ದರು’ ಎಂದು ಮಹಿಳೆ ಆರೋಪಿಸಿದ್ದಾಳೆ.

ಈ ಘಟನೆ ಬಗ್ಗೆ ಸಂತ್ರಸ್ತ ಮಹಿಳೆ ತನ್ನ ಪೋಷಕರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದರು. ಪೋಷಕರು ಮನೆಗೆ ಬಂದಾಗ ಅವರ ಮೇಲೆ ಕೂಡ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಪತಿ ಸಣ್ಣ ಸಣ್ಣ ವಿಷಯಕ್ಕೂ ಕೋಪಗೊಳ್ಳುತ್ತಿದ್ದು, ಆಕೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಹಾಗೂ ಪತಿ ವರದಕ್ಷಿಣೆಗೆ ಒತ್ತಾಯಿಸಿ ಥಳಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.

ಇನ್ನೂ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೂ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೇ ಇದೀಗ ಸಂತ್ರಸ್ತ ಮಹಿಳೆ ತನ್ನ ತವರು ಮನೆಗೆ ಮರಳಿದ್ದಾಳೆ ಎಂದು ತಿಳಿದುಬಂದಿದೆ.