Home News ವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದರೆ ಅತ್ಯಾಚಾರವಲ್ಲ – ಹೈಕೋರ್ಟ್ ಮಹತ್ವ ತೀರ್ಪು

ವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದರೆ ಅತ್ಯಾಚಾರವಲ್ಲ – ಹೈಕೋರ್ಟ್ ಮಹತ್ವ ತೀರ್ಪು

Hindu neighbor gifts plot of land

Hindu neighbour gifts land to Muslim journalist

ಪುರುಷನು ವಿವಾಹಿತ ಮಹಿಳೆಗೆ ತಾನು ಮದುವೆಯಾಗುವುದಾಗಿ ನಂಬಿಸಿ, ಸ್ವ ಇಚ್ಛೆಯಿಂದ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ.

ಕೊಲ್ಲಂನ ಪುನಲೂರು ನಿವಾಸಿ 25 ವರ್ಷದ ಟಿನೋ ತಂಗಚ್ಚನ್ ಒಬ್ಬ ವಿವಾಹಿತ ಮಹಿಳೆಗೆ ತಾನು ಮದುವೆಯಾಗುವುದಾಗಿ ಭರವಸೆ ನೀಡಿ, ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿದ್ದಾರೆ. ಆತನು ವಿವಾಹವಾಗುವುದಿಲ್ಲ ಎಂದು ತಿಳಿದಾಗ ಮಹಿಳೆಯು ಕೋರ್ಟ್ ಮೆಟ್ಟಿಲೇರಿದ್ದಾರೆ. ತಂಗಚ್ಚನ್ ಮದುವೆಯ ಸುಳ್ಳು ಭರವಸೆ ನೀಡಿದ ನಂತರ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಹೇಳಲಾದ ಮಹಿಳೆಗೆ ಮದುವೆಯಾಗಿದ್ದು ಆಕೆ ಪತಿಯಿಂದ ಬೇರ್ಪಟ್ಟಿದ್ದಾರೆ. ಆಕೆಯ ಮೇಲೆ ತಂಗಚ್ಚನ್ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಪ್ರಕರಣದಲ್ಲಿ ತಿಳಿಸಲಾಗಿದೆ.

ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 417 (ವಂಚನೆ) ಮತ್ತು 493 (ಲೈಂಗಿಕತೆಗೆ ಮೋಸದ ಪ್ರಚೋದನೆ) ಅಡಿಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ನವೆಂಬರ್ 22 ರಂದು ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಅವರ ಪೀಠವು ರದ್ದುಗೊಳಿದೆ. ಭರವಸೆ ನೀಡಿ ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿದ್ದರೆ ಅದು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರ ಪ್ರಕರಣ ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪನ್ನು ನೀಡಿದೆ.

ಲೈಂಗಿಕ ಸಂಭೋಗವು ಸಹಮತದ ಸ್ವರೂಪದ್ದಾಗಿದೆ ಎಂಬುದು ಮೊದಲ ಮಾಹಿತಿ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರು ನೀಡಿದ ವಿವಾಹದ ಭರವಸೆಯಿಂದ ಮಹಿಳೆ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದ್ದಾಳೆ. ಪುರುಷನು ಮಹಿಳೆಯನ್ನು ಮದುವೆಯಾಗುವ ತನ್ನ ವಾಗ್ದಾನವನ್ನು ಹಿಂತೆಗೆದುಕೊಂಡರೆ, ಅವರು ಮಾಡಿದ ಸಮ್ಮತಿಯ ಲೈಂಗಿಕತೆಯನ್ನು IPC ಯ ಸೆಕ್ಷನ್ 376 ರ ಅಡಿಯಲ್ಲಿ ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಐಪಿಸಿ ಸೆಕ್ಷನ್ 417 ಮತ್ತು 493 ರ ವಿಧಿಸಲು ದಾಖಲೆಯಲ್ಲಿ ಏನೂ ಇಲ್ಲ. ವಂಚನೆಯ ಅಪರಾಧಕ್ಕೆ ಯಾವುದೇ ಪುರಾವೆ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮದುವೆಯಾಗುವ ಯಾವುದೇ ಉದ್ದೇಶವಿಲ್ಲದೆ ಆತ ಸುಳ್ಳು ಭರವಸೆ ನೀಡಿದ್ದ ಎಂದು ಆದೇಶದಲ್ಲಿ ಹೇಳಿದೆ.

ಆರೋಪಿ ಮತ್ತು ಸಂತ್ರಸ್ತೆ ಆಸ್ಟ್ರೇಲಿಯಾದಲ್ಲಿ ಫೇಸ್‌ಬುಕ್ ಮೂಲಕ ಭೇಟಿಯಾದರು. ಅವರ ನಡುವಿನ ಸಂಬಂಧವು ಪ್ರೇಮವಾಗಿ ಬೆಳೆದು ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ, ಮದುವೆ ನಡೆಯಲಿಲ್ಲ. ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಮಹಿಳೆಯ ಪ್ರಕಾರ, ಅರ್ಜಿದಾರರು ತನ್ನನ್ನು ಮದುವೆಯಾಗುವುದಾಗಿ ನೀಡಿದ ಭರವಸೆ ನೀಡಿದ್ದರಿಂದ ಲೈಂಗಿಕ ಸಂಪರ್ಕಕ್ಕೆ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.