Home latest ಕೈಕೊಟ್ಟ ಜಿ – ಮೈಲ್ ಸೇವೆ | ಸೇವೆ ಸ್ಥಗಿತಗೊಂಡು ಸಮಸ್ಯೆ ಎದುರಿಸಿದ ಬಳಕೆದಾರರು

ಕೈಕೊಟ್ಟ ಜಿ – ಮೈಲ್ ಸೇವೆ | ಸೇವೆ ಸ್ಥಗಿತಗೊಂಡು ಸಮಸ್ಯೆ ಎದುರಿಸಿದ ಬಳಕೆದಾರರು

Hindu neighbor gifts plot of land

Hindu neighbour gifts land to Muslim journalist

ನವದೆಹಲಿ : ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಗೂಗಲ್ ಒಡೆತನದ ಇಮೇಲ್ ಸೇವೆಯಾಗಿರುವ ಜಿಮೈಲ್ ಸೇವೆ ಸ್ಥಗಿತಗೊಂಡು ಬಳಕೆದಾರರು ಸಂದೇಶ ಕಳುಹಿಸಲು ಸಮಸ್ಯೆ ಎದುರಿಸಿದ್ದಾರೆ. ಕೆಲವರಿಗೆ ಲಾಗಿನ್ ಆಗಲೇ ಆಗುತ್ತಿರಲಿಲ್ಲ ಮತ್ತು ಕೆಲವರಿಗೆ ಸಂದೇಶ ಕಳುಹಿಸುವುದು ಮತ್ತು ಸ್ವೀಕರಿಸಲು ಸಮಸ್ಯೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶೇ 68ರಷ್ಟು ಬಳಕೆದಾರರಿಗೆ ಸಮಸ್ಯೆಯಾಗಿದ್ದು, ಶ 18ರಷ್ಟು ಬಳಕೆದಾರರು ಸರ್ವರ್ ಹಾಗೂ ಶೇ 14ರಷ್ಟು ಮಂದಿ ಲಾಗಿನ್ ಸಮಸ್ಯೆ ಎದುರಿಸಿದ್ದಾರೆ.

ಕಳೆದ ವಾರ ಫೇಸ್ಟುಕ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಪ್‌ಗಳ ಸೇವೆ ಸ್ಥಗಿತಗೊಂಡು ಕೋಟ್ಯಂತರ ಬಳಕೆದಾರರು ಸಮಸ್ಯೆ ಎದುರಿಸಿದ್ದರು.