

UP: ಸರ್ಕಾರಿ ಆಸ್ಪತ್ರೆಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ವಾರ್ಡ್ ನೀಡಬೇಕೆಂದು ಉತ್ತರ ಪ್ರದೇಶದ ಬಿಜೆಪಿ ಶಾಸಕಿ ಒಬ್ಬರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ(UP)ದಲ್ಲಿ ಭಾರತೀಯ ಜನತಾ ಪಕ್ಷದ (BJP) ಶಾಸಕಿ ಕೇತಕೀ ಸಿಂಗ್ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ಮುಸ್ಲಿಂ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ಬೇಕು ಎಂದು ಒತ್ತಾಯಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.
ಈ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೋಳಿ, ರಾಮ ನವಮಿ, ದುಗ್ರಾ ಪೂಜೆಯ ಸಮಯದಲ್ಲಿ ಅವರಿಗೆ ಸಮಸ್ಯೆ ಆಗುತ್ತದೆ. ಆದ್ದರಿಂದ ಬಹುಶಃ ಅವರು ನಮ್ಮೊಂದಿಗೆ ಚಿಕಿತ್ಸೆ ಪಡೆಯುವಲ್ಲಿಯೂ ಸಮಸ್ಯೆ ಎದುರಿಸಬಹುದು. ನಾವು ಇಷ್ಟೊಂದು ಖರ್ಚು ಮಾಡುತ್ತಿದ್ದು, ಅವರಿಗೆ (ಮುಸ್ಲಿಮರಿಗೆ) ಒಂದು ಕೊಠಡಿ ಮತ್ತು ಪ್ರತ್ಯೇಕ ವಾರ್ಡ್ ಒದಗಿಸಿಕೊಡುವಂತೆ ನಾನು ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ಆಗ ಅವರಿಗೆ ನಮ್ಮೊಂದಿಗೆ ಉಳಿಯಲು ತೊಂದರೆಯಾದರೆ ಅವರು ಪ್ರತ್ಯೇಕವಾಗಿಯೇ ಚಿಕಿತ್ಸೆ ಪಡೆಯಬಹುದು ಎಂದು ಶಾಸಕಿ ಹೇಳಿದ್ದಾರೆ.
ಇಷ್ಟೇ ಅಲ್ಲದೆ ಅಲ್ಲದೆ ದೀಪಾವಳಿಯಲ್ಲಿ ಉದ್ಘಾಟನೆಗೊಳ್ಳಲಿರುವ ವೈದ್ಯಕೀಯ ಕಾಲೇಜು ಮುಸ್ಲಿಮರಿಗೆ ಪ್ರತ್ಯೇಕ ವಿಭಾಗವನ್ನು ಹೊಂದಿರಬೇಕು ಎಂದು ನಾನು ಮುಖ್ಯಮಂತ್ರಿಯನ್ನು ಒತ್ತಾಯಿಸುತ್ತೇನೆ. ಇದರಿಂದ ನಾವು ಸುರಕ್ಷಿತವಾಗಿರುತ್ತೇವೆ ಮತ್ತು ಅವರು ಎಂಜಲನ್ನು ಬೆರೆಸಿ ಏನು ನೀಡುತ್ತಾರೆಂದು ನಮಗೆ ತಿಳಿದಿಲ್ಲ. ಹೀಗಾಗಿ ಅದರಿಂದಲೂ ನಾವು ರಕ್ಷಿಸಲ್ಪಡುತ್ತೇವೆ ಅಂತ ಶಾಸಕಿ ಕೇತಕೀ ಸಿಂಗ್ ಹೇಳಿದರು.













