Home Interesting ಸತ್ತ ನಂತರ ದೆವ್ವವಾಗಿ ಕಾಡಿದಳು ಪ್ರಿಯತಮೆ | ಕೊಂದು ನೆಮ್ಮದಿಯಿಂದ ಇದ್ದ ಪ್ರಿಯಕರನಿಂದ ಬಯಲಾಯ್ತು ಸಾವಿನ...

ಸತ್ತ ನಂತರ ದೆವ್ವವಾಗಿ ಕಾಡಿದಳು ಪ್ರಿಯತಮೆ | ಕೊಂದು ನೆಮ್ಮದಿಯಿಂದ ಇದ್ದ ಪ್ರಿಯಕರನಿಂದ ಬಯಲಾಯ್ತು ಸಾವಿನ ಭಯಂಕರ ರಹಸ್ಯ

Hindu neighbor gifts plot of land

Hindu neighbour gifts land to Muslim journalist

ನೂರಾರು ಕನಸುಗಳ ಜೊತೆಗೆ ವಯೋಸಹಜ ಆಕರ್ಷಣೆಗೆ ಒಳಗಾಗಿ ಪ್ರೀತಿಯ ಬಲೆಯಲ್ಲಿ ಬಿದ್ದು ಪ್ರಣಯ ಹಕ್ಕಿಗಳು ಎಲ್ಲೆಡೆ ಗುರುತಿಸಿಕೊಂಡು ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಮುನ್ನುಡಿ ಬರೆದರೆ, ಮತ್ತೆ ಕೆಲವು ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ ಎದ್ದು ಏಷ್ಟೋ ವರ್ಷಗಳ ಪ್ರೀತಿ ನೀರಿನ ಮೇಲಿನ ಗುಳ್ಳೆಯಂತೆ ಕ್ಷಣ ಮಾತ್ರದಲ್ಲಿ ಮುಗಿದು ನಾನೊಂದು ತೀರ.. ನೀನೊಂದು ತೀರ ಎಂದು ಬೇರೆಯಾಗುವ ಪ್ರಮೇಯ ಕೂಡ ಇದೆ.

ಎಲ್ಲರ ಪ್ರೀತಿಯೂ ಹ್ಯಾಪಿ ಎಂಡಿಂಗ್ ಆಗಿರುವುದಿಲ್ಲ ಹೀಗಾಗಿ ಪ್ರೀತಿಸಿದವರೆಲ್ಲರೂ ಖುಷಿಯಾಗಿಯೂ ಇರುವುದಿಲ್ಲ. ಅದರಲ್ಲೂ ಕೆಲವೊಮ್ಮೆ ಪ್ರೀತಿಯಲ್ಲಿಯೂ ಕೆಲವೊಂದು ಚಿತ್ರ-ವಿಚಿತ್ರ ಘಟನೆಗಳೂ ನಡೆದು ಬಿಡುತ್ತವೆ. ಪ್ರೀತಿಯಾದವನ ಮೇಲೆ ನಿರಾಸಕ್ತಿ, ಒಬ್ಬನ ಮೇಲೆ ಪ್ರೀತಿಯಿರುವಾಗಲೇ ಇನ್ನೊಬ್ಬನ ಜೊತೆಗೆ ಲವ್‌..ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ನಡೆದಿರುವ ಲವ್ ಕಹಾನಿ ಕೇಳಿ ನೀವು ಶಾಕ್ ಆಗೋದು ಗ್ಯಾರಂಟಿ!!

ಹುಡುಗಿಯೊಬ್ಬಳು ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಹುಡುಗನನ್ನು ಪ್ರೀತಿಸಿದ್ದು ಆದ್ರೆ ಹುಡುಗ ಆಕೆಯ ನಂಬಿಕೆಗೆ ಕೊಳ್ಳಿ ಇಟ್ಟಿದ್ದಾನೆ. ಆದರೆ ತನಗಾದ ಅನ್ಯಾಯಕ್ಕೆ ಪ್ರತಿಯಾಗಿ ಹುಡುಗಿ ಸತ್ತ ಮೇಲು ಬೆನ್ನು ಬಿಡದ ಬೇತಾಳ ದಂತೆ ಕಾಡಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಪ್ರೀತಿಯ ಬಲೆಯಲ್ಲಿ ಬಿದ್ದವರಿಗೆ ತಮ್ಮದೇ ಗುಂಗಲ್ಲೇ ಮೈ ಮರೆತು ಹೆತ್ತವರ, ಸಮಾಜದ ಕೆಂಗಣ್ಣಿಗೆ ಗುರಿಯಾಗಿ ಮದುವೆ ಮಾಡಿಕೊಳ್ಳೋದು ಇಂದಿನ ಕಾಲದಲ್ಲಿ ಸಾಮಾನ್ಯ ವಿಚಾರವಾಗಿ ಬಿಟ್ಟಿದೆ. ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ ಬಿದ್ದು ಮನೆಯವರ ವಿರೋಧದ ನಡುವೆಯೆ ಮದುವೆಯಾಗಿ ಮನೆಯವರಿಂದಲೇ ಸಾವಿನ ಕದ ತಟ್ಟಿದ ಪ್ರಕರಣ ಕೂಡ ಇದೆ. ಛತ್ತೀಸ್‌ಗಢದ ಕೊರ್ಬಾದಲ್ಲಿ ವಿಚಿತ್ರ ಘಟನೆ ನಡೆದಿದೆ.

ಛತ್ತೀಸ್‌ಗಢದ ಕೊರ್ಬಾದಲ್ಲಿ ಅಂಜು ಯಾದವ್ ಎಂಬ 24 ವರ್ಷದ ಹುಡುಗಿ ಸುಮಾರು 8 ತಿಂಗಳಿನಿಂದ ಕಣ್ಮರೆ ಯಾಗಿದ್ದು,ಪೊಲೀಸರು ಆಕೆಯ ಪತ್ತೆಗೆ ತೀವ್ರ ಶೋಧ ನಡೆಸಿದರು ಪ್ರಯೋಜನವಾಗಿರಲಿಲ್ಲ. ಈ ನಡುವೆ ಆಕೆಯ ಪ್ರೇಮಿಯಿಂದಲೇ ಆಕೆಯ ವಿಚಾರ ಬಹಿರಂಗವಾಗಿದೆ.

ನನ್ನ ಪ್ರೇಯಸಿ ಸತ್ತರು ಕೂಡ ಬಿಟ್ಟು ಹೋಗುತ್ತಿಲ್ಲವೆಂದು ಯುವಕ ಯುವತಿಯ ಸಾವಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ. ‘8 ತಿಂಗಳಿನಿಂದಲೂ ನಾನು ನೆಮ್ಮದಿ ಕಳೆದುಕೊಂಡಿದ್ದು ಯುವತಿ ಸತ್ತ ಬಳಿಕವೂ ತನ್ನನ್ನು ಹಿಂಬಾಲಿಸುಟ್ಟಿದ್ದಾಳೆ ಎಂದು ಹೇಳಿದಾಗಲೇ ಆಕೆಯ ಸಾವಿನ ರಹಸ್ಯ (Death secret) ಬಯಲಾಗಿದೆ.

ಗೋಪಾಲ್‌ ಇಟ್ಟಿಗೆ ಟ್ರಕ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು ,ಅಂಜು ಯಾದವ್‌ ಜೊತೆಯಲ್ಲೇ ಕೆಲಸ ಮಾಡಲು ಶುರು ಮಾಡಿದ್ದಾರೆ. ಹೀಗೆ ಸ್ನೇಹವಾಗಿ ಬಳಿಕ ಸ್ನೇಹ ಪ್ರೀತಿಯಾಗಿ ಕಳೆದ 3 ವರ್ಷಗಳಿಂದ ಪರಸ್ಪರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಆದರೆ ಸಂಬಂಧ ದೀರ್ಘ ಸಮಯದ ಕಾಲ ಮುಂದುವರೆದರೂ ಗೋಪಾಲ್‌ ಮದುವೆಯಾಗುವ ಅಭಿಲಾಷೆ ಹೊಂದಿರಲಿಲ್ಲ. ಇದನ್ನು ಗಮನಿಸುತ್ತಿದ್ದ ಅಂಜು ತನ್ನನ್ನು ಮದುವೆಯಾಗುವಂತೆ ಗೋಪಾಲ್ ಮೇಲೆ ಒತ್ತಡ ಹೇರಿದ್ದಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ.

ಅಂಜು ಶೀಘ್ರದಲ್ಲಿ ಮದುವೆಯಾಗುವ ಇಂಗಿತ ಹೊಂದಿದ್ದರೆ, ಗೋಪಾಲ್‌ ಏನೇನೋ ನೆಪಗಳನ್ನು ಹೇಳುತ್ತಾ ಮದುವೆಯಾಗುವ ನಿರ್ಧಾರವನ್ನು ಮುಂದೂಡುತ್ತಲೇ ಬರುತ್ತಿದ್ದ ಎನ್ನಲಾಗಿದೆ. ಆದರೆ ಅಂಜು ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಡ ಹೇರುತ್ತಿದ್ದ ಹಿನ್ನೆಲೆ ಈಕೆಯ ಕಾಟವನ್ನು ಇನ್ನು ಸಾಧ್ಯವಿಲ್ಲ ಎಂದು ನಿರ್ಧರಿಸಿದ ಗೋಪಾಲ್ ಆಕೆಯನ್ನು ಧೇಳವಾಡಿಯ ತೇಗದ ನರ್ಸರಿಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಗೈದಿದ್ದಾನೆ ಎನ್ನಲಾಗಿದೆ.

ಯುವಕ ಗೋಪಾಲ್ ಖಾದಿಯಾ ಯುವತಿಯನ್ನು ಕೊಲೆಗೈದು ಆ ಬಳಿಕ ತನ್ನ ಅಪರಾಧವನ್ನು ಪ್ರಪಂಚಕ್ಕೆ ತಿಳಿಯದಂತೆ ಮುಚ್ಚಿಡುವ ನಿಟ್ಟಿನಲ್ಲಿ ಮೃತದೇಹವನ್ನು ನರ್ಸರಿಯಲ್ಲಿ 20 ಅಡಿ ಹೊಂಡದಲ್ಲಿ ಹೂಳಲಾಗಿದೆ. ಆದರೆ, ನಿರಂತರ ಪ್ರಯತ್ನ ನಡೆಸಿದ ಬಳಿಕ ಪೊಲೀಸರು ಮೃತದೇಹವನ್ನು (Deadbody) ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಸದ್ಯ ಆರೋಪಿಯನ್ನೂ ಬಂಧಿಸಿದ್ದಾರೆ.

ಆದರೆ ಈ ವೇಳೆ ಆರೋಪಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾನೆ.
ಪೊಲೀಸರು ಆರೋಪಿ ಗೋಪಾಲ್ ಖಾಡಿಯಾನನ್ನು ವಶಕ್ಕೆ ಪಡೆದ ಸಂದರ್ಭ ಆರೋಪಿಯ ವಿಚಾರಣೆ ವೇಳೆ ಸತ್ಯ ಹೊರ ಕಕ್ಕಿದ್ದು ಗೆಳತಿಯ ದೆವ್ವ (Ghost) ಹಗಲು ರಾತ್ರಿ ಎನ್ನದೆ ತನಗೆ ಉಪದ್ರವ ನೀಡುತ್ತಿತ್ತು.

ನೆಮ್ಮದಿಯಿಂದ ಬದುಕಲು ಬಿಡದೆ ಕಳೆದ 8 ತಿಂಗಳಿಂದ ಭಯದಲ್ಲಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದು, ತನ್ನ ಅಪರಾಧವನ್ನು ಮರೆಮಾಚಲು ತನ್ನ ಗೆಳತಿಯನ್ನು ಕತ್ತು ಹಿಸುಕಿ ಕೊಂದು ಶವವನ್ನು ನರ್ಸರಿಯಲ್ಲಿ ಹೂತಿಟ್ಟಿದ್ದಾಗಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಸ್ಥಳವನ್ನು ತೋರಿಸಿದ ಬಳಿಕ ಪೊಲೀಸರು ಮೃತದ ಅಸ್ಥಿಪಂಜರವನ್ನು ಹೊರತೆಗೆದಿದ್ದು, ಈ ನಡುವೆ ಅಂಜು ತಾಯಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.