Home News ಫೆ.8 : ಪುತ್ತೂರು ಕ್ಲಬ್‌ನಲ್ಲಿ ಸಿಂಥೆಟಿಕ್ ಟೆನಿಸ್ ಕೋರ್ಟ್ ಸಹಿತ ವಿವಿಧ ಸೌಲಭ್ಯಗಳ ಉದ್ಘಾಟನೆ

ಫೆ.8 : ಪುತ್ತೂರು ಕ್ಲಬ್‌ನಲ್ಲಿ ಸಿಂಥೆಟಿಕ್ ಟೆನಿಸ್ ಕೋರ್ಟ್ ಸಹಿತ ವಿವಿಧ ಸೌಲಭ್ಯಗಳ ಉದ್ಘಾಟನೆ

Hindu neighbor gifts plot of land

Hindu neighbour gifts land to Muslim journalist

Putturu: ಪುತ್ತೂರು ಕ್ಲಬ್‌’ನಲ್ಲಿ ನಿರ್ಮಾಣಗೊಂಡಿರುವ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಫೆ. 8ರಂದು ಸಂಜೆ 4 ಗಂಟೆಗೆ ಕ್ಲಬ್ ಆವರಣದಲ್ಲಿ ನಡೆಯಲಿದೆ ಎಂದು ಕ್ಲಬ್‌ ಅಧ್ಯಕ್ಷ ಡಾ. ದೀಪಕ್ ರೈ ಹೇಳಿದರು.

 

ಫೆ.6ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ. ಕುಟುಂಬ ಹಾಗೂ ಆರೋಗ್ಯ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಅತಿಥಿಯಾಗಿರುವರು. ಸಂಸದ ಕ್ಯಾ. ಬ್ರಿಜೇಶ್ ಚೌಟಾ ಅವರು ಸಿಂಥೆಟಿಕ್ ಟೆನಿಸ್ ಕೋರ್ಟನ್ನು ಉದ್ಘಾಟಿಸಲಿದ್ದಾರೆ. ಶಾಸಕ ಅಶೋಕ್ ಕುಮಾ‌ರ್ ಅವರು ದೀಪ ಪ್ರಜ್ವಲನೆ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ ವಿಶೇಷ ಅಭ್ಯಾಗತರಾಗಿರುವರು ಎಂದರು.

 

 

ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ ಎಂ.ಎಲ್.ಸಿ.ಗಳಾದ ಭೋಜೇಗೌಡ, ಮಂಜುನಾಥ್ ಭಂಡಾರಿ, ಕಿಶೋ‌ರ್ ಕುಮಾ‌ರ್ ಬೊಟ್ಯಾಡಿ, ದ.ಕ ಜಿಲ್ಲಾಧಿಕಾರಿ ಮು ಮುಗಿಲನ್, ಜಿಪಂ ಸಿಇಓ ಡಾ. ಆನಂದ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಪುತ್ತೂರಿನ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಉಪಸ್ಥಿತರಿರುವರು ಎಂದರು.

 

 

ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎಂಟು ಪದರಗಳ ಸಿಂಥೆಟಿಕ್ ಟೆನಿಸ್ ಕೋರ್ಟ್, ಪ್ರಮುಖವಾಗಿ ತರಬೇತಿಗಾಗಿಯೇ ತಯಾರಿಗೊಳಿಸಲಾಗಿದೆ. ಇದರೊಂದಿಗೆ ವರ್ಷಕ್ಕೊಂದು ಟೂರ್ನಮೆಂಟ್ ಆಯೋಜಿಸುವ ಆಲೋಚನೆ ಇದೆ. ಹೊರಾಂಗಣವೇ ನಿರ್ಮಾಣಗೊಂಡಿರುವ ಈ ಕೋರ್ಟ್, ಎಲ್ಲಾ ಹವಾಮಾನಗಳಿಗೂ ಅನುಕೂಲವಾಗುವಂತಹ ವಿನ್ಯಾಸ ಹೊಂದಿದೆ. ಸಣ್ಣ ಗ್ಯಾಲರಿಯೂ ಹೊಂದಿದ್ದು, ಇಂತಹ ಕೋರ್ಟ್ ಬೆಂಗಳೂರಿನಲ್ಲಿ ಬಿಟ್ಟರೆ ರಾಜ್ಯದ ಬೇರೆಲ್ಲಿಯೂ ಇಲ್ಲ. ಜಿಲ್ಲೆಯಲ್ಲೇ ಪ್ರಥಮವಾಗಿ 7200 ಚದರ ಅಡಿಗಳಲ್ಲಿ ನಿರ್ಮಾಣಗೊಂಡಿದ್ದು, ಎಂಟು ಪದರಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.

 

 

1.84 ಎಕರೆ ಪ್ರದೇಶ, 1300ರಷ್ಟು ಸದಸ್ಯರನ್ನು ಒಳಗೊಂಡಿರುವ ದ ಪುತ್ತೂರು ಕ್ಲಬ್‌ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ 30000 ಚದರ ಅಡಿ ವಿಸ್ತೀರ್ಣದಲ್ಲಿ 10 ಡಿಲಕ್ಸ್ ರೂಂಗಳು ಹಾಗೂ 2 ಸೂಟ್ ರೂಂ ನಿರ್ಮಾಣ ಮಾಡಿದೆ. ಇದರಲ್ಲಿ 1 ಸಾವಿರ ಜನ ಸಾಮರ್ಥ್ಯದ ವಿಶಾಲ ಹಾಲ್ ಹಾಗೂ 200 ಜನ ಸಾಮರ್ಥ್ಯದ 2400 ಚದರ ಅಡಿಯ ಮತ್ತೊಂದು ಎಸಿ ಹಾಲ್ ಇರಲಿದೆ. ಎಲೆಕ್ನಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಕೂಡ ಇದರಲ್ಲಿ ಇರಲಿದೆ ಎಂದು ಮಾಹಿತಿ ನೀಡಿದರು.

 

ಪತ್ರಿಕಾಗೋಷ್ಠಿಯಲ್ಲಿ ದ ಪುತ್ತೂರು ಕ್ಲಬ್ ಉಪಾಧ್ಯಕ್ಷ ದೀಪಕ್ ಕೆ.ಪಿ., ಕಾರ್ಯದರ್ಶಿ ವಿಶ್ವಾಸ್ ಶೆಣೈ ಉಪಸ್ಥಿತರಿದ್ದರು.