Home News ಕೋಲಾರಮ್ಮ ದೇವಿಯ ದರ್ಶನ ಪಡೆದ ಡಾ.ಸುಧಾಮೂರ್ತಿ |ಅಳಿಯ ರಿಷಿ ಸುನಕ್ ಬಗ್ಗೆ ಹೇಳಿದ್ದಿಷ್ಟು!!!

ಕೋಲಾರಮ್ಮ ದೇವಿಯ ದರ್ಶನ ಪಡೆದ ಡಾ.ಸುಧಾಮೂರ್ತಿ |ಅಳಿಯ ರಿಷಿ ಸುನಕ್ ಬಗ್ಗೆ ಹೇಳಿದ್ದಿಷ್ಟು!!!

Hindu neighbor gifts plot of land

Hindu neighbour gifts land to Muslim journalist

ಸಮಾಜಕ್ಕೆ ಮತ್ತು ಮಹಿಳೆಯರಿಗೆ ಮಾದರಿ ಆಗಿರುವ ಸುಧಾಮೂರ್ತಿ ಅವರ ಸೇವೆಗಳು ನಿಸ್ವಾರ್ಥವಾಗಿದೆ. ಅಲ್ಲದೆ ಅವರ ಸಾಧನೆಗಳು ಅಪಾರವಾಗಿದೆ. ಅದಲ್ಲದೆ ಇನ್ಫೋಸಿಸ್ ಮುಖ್ಯಸ್ಥೆ ಆಗಿ ಡಾ.ಸುಧಾಮೂರ್ತಿ ಆಯ್ಕೆ ಆಗಿರುವುದು ಗೊತ್ತಿರುವ ವಿಷಯ.

ಪ್ರಸ್ತುತ ಸುಧಾಮೂರ್ತಿಯವರು ಶುಕ್ರವಾರ ಬೆಳಗ್ಗೆ ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಸಂಬಂಧಿಕರ ಮದುವೆ ಹಿನ್ನೆಲೆ ಕೋಲಾರಕ್ಕೆ ಆಗಮಿಸಿದ್ದ ಸುಧಾಮೂರ್ತಿ ಅವರು ಕೋಲಾರಮ್ಮ ದೇವಾಲಯಕ್ಕೂ ಭೇಟಿ ನೀಡಿ ದೇವಿಯ ದರ್ಶನ ಪಡೆದಿರುವುದಾಗಿ ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸುಧಾಮೂರ್ತಿ, ಕೋಲಾರಕ್ಕೆ ಬಂದಾಗೆಲ್ಲಾ ಕೋಲಾರಮ್ಮ ದೇವಾಲಯಕ್ಕೆ ಬರೋದು ನನ್ನ ರೂಢಿ . ಅದರಂತೆ ಇಂದು ದೇವಿಯ ದರ್ಶನ ಪಡೆದಿದ್ದೇನೆ . ಇಲ್ಲಿಗೆ ಭೇಟಿ ನೀಡಿ ಮನಸ್ಸಿಗೆ ಬಹಳ ನೆಮ್ಮದಿಯಾಯ್ತು. ದೇವಸ್ಥಾನವನ್ನು ಬಹಳ ಚೆನ್ನಾಗಿ ಅಭಿವೃದ್ಧಿ ಗೊಳಿಸಿದ್ದಾರೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಅಲ್ಲದೆ ಅಳಿಯ ರಿಷಿ ಸುನಕ್​​ ಬ್ರಿಟನ್ ಪ್ರಧಾನಿಯಾಗಿದ್ದರ ಕುರಿತು ಮಾತನಾಡಿದ ಸುಧಾಮೂರ್ತಿ ನನ್ನ ಅಳಿಯನಿಗೆ ನಮ್ಮ ಆಶೀರ್ವಾದ ಸದಾ ಇದ್ದೇ ಇರುತ್ತದೆ ಎಂದರು.

ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಳಿಯನ ಬಗ್ಗೆ ಎದ್ದಿರುವ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಲು ಇದು ಸಮಯವಲ್ಲ. ಬೇರೆ ವಿಚಾರ ಮಾತನಾಡುವುದು ಸಮಂಜಸವಲ್ಲ ಎಂದು ನಗುತ್ತಾ ಮಾಧ್ಯಮಕ್ಕೆ ಉತ್ತರ ನೀಡಿದ್ದಾರೆ.