Home Breaking Entertainment News Kannada ಈ ಸ್ಟಾರ್ ಜೋಡಿ ಕೂಡಾ ಡಿವೋರ್ಸ್ ತೆಗೆದುಕೊಳ್ಳುತ್ತಾ ? ಮೌನ ಮುರಿದ ನಟಿ!

ಈ ಸ್ಟಾರ್ ಜೋಡಿ ಕೂಡಾ ಡಿವೋರ್ಸ್ ತೆಗೆದುಕೊಳ್ಳುತ್ತಾ ? ಮೌನ ಮುರಿದ ನಟಿ!

Hindu neighbor gifts plot of land

Hindu neighbour gifts land to Muslim journalist

ಬಹುಭಾಷಾ ನಟಿ ಸ್ನೇಹಾ ಹಾಗೂ ನಟ ಪ್ರಸನ್ನ ಇವರಿಬ್ಬರು ಪ್ರೀತಿಸಿ ಮದುವೆಯಾಗಿರುವುದು ತಿಳಿದಿರುವುದೇ. ಆದರೆ ಈ ದಂಪತಿಗಳ ಸಂಸಾರದಲ್ಲಿ ಬಿರುಕು ಮೂಡಿದ್ದು, ನಟಿ ಸ್ನೇಹಾ ಪತಿಯಿಂದ ದೂರಾಗಿ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇನ್ನೇನು ಇಬ್ಬರಿಗೂ ಡೈವೋರ್ಸ್ ಆಗುತ್ತದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

ಇದೀಗ ಚಿತ್ರರಂಗದಲ್ಲಿ ಡೈವೋರ್ಸ್ ವಿಚಾರ ಏನೂ ಅಲ್ಲ ಅದು ಕಾಮನ್ ಎನ್ನುವಂತಾಗಿದೆ. ಇದಕ್ಕೆ ಸಿನಿಜೋಡಿಗಳ ಡೈವೋರ್ಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಉದಾಹರಣೆಗಳೇ ಇವೆ. ಇನ್ನೂ, ಪ್ರೀತಿಸಿ ಮದುವೆಯಾದ ಕಾಲಿವುಡ್ ಕ್ಯೂಟ್ ಕಪಲ್ಸ್ ಸ್ನೇಹಾ ಹಾಗೂ ಪ್ರಸನ್ನ ದಂಪತಿ ಡೈವೋರ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಚರ್ಚೆಯಾಗುತ್ತಿದಂತೆ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಆತಂಕವೂ ಉಂಟಾಗಿದೆ. ಈ ಎಲ್ಲಾ ಚರ್ಚೆಗಳಿಗೆ ಇದೀಗ ನಟಿ ಸ್ನೇಹಾ ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈನಲ್ಲಿ ತೆಲುಗು ಕುಟುಂಬದಲ್ಲಿ ಹುಟ್ಟಿದ ಸ್ನೇಹಾ ಓದಿ ಬೆಳೆದಿದ್ದು ದುಬೈನಲ್ಲಿ. ಮೊದಲು ಮಲಯಾಳಂ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ, ಹಲವು ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡರು. ಕನ್ನಡದ ‘ರವಿಶಾಸ್ತ್ರಿ’ ಚಿತ್ರದಲ್ಲೂ ಸ್ನೇಹ ನಟಿಸಿದ್ದಾರೆ.

2012ರಲ್ಲಿ ನಟಿ ಸ್ನೇಹಾ, ನಟ ಪ್ರಸನ್ನ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಆದರೆ ಇವರಿಬ್ಬರೂ ಡೈವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿತ್ತು. ಇದೀಗ ನಟಿ ಸ್ನೇಹಾ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತನ್ನ ಪತಿ ಪ್ರಸನ್ನ ಜೊತೆಗಿನ ಸೆಲ್ಫಿ ಪೋಸ್ಟ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇಬ್ಬರು ಪಿಂಕ್ ಕಲರ್ ಟೀಶರ್ಟ್ ತೊಟ್ಟು “ಟ್ವಿನ್ನಿಂಗ್, ಹ್ಯಾಪಿ ವೀಕೆಂಡ್” ಎಂದು ನಟಿ ಸ್ನೇಹ ಬರೆದುಕೊಂಡಿದ್ದಾರೆ. ಆ ಮೂಲಕ ಇಬ್ಬರೂ ಒಟ್ಟಿಗೆ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ದಂಪತಿಗಳು ದೂರಾಗುತ್ತಿದ್ದಾರೆ ಎನ್ನುವ ಸುದ್ದಿ ಹುಟ್ಟಿಕೊಳ್ಳಲು ಯಾವುದೇ ಸುಳಿವು ಇರಲಿಲ್ಲ. ಪತಿ ಹಾಗೂ ಮಕ್ಕಳ ಜೊತೆ ನಟಿ ಸ್ನೇಹಾ ದೀಪಾವಳಿ ಹಬ್ಬವನ್ನು , ಹುಟ್ಟುಹಬ್ಬವನ್ನು ಸಂಭ್ರಮದಿಂದಲೇ ಆಚರಿಸಿದ್ದರು. ಅದಕ್ಕೆ ಸಾಕ್ಷಿಯಾಗಿ ಫೋಟೋಗಳನ್ನು ಸ್ನೇಹಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೂ ಇವರಿಬ್ಬರ ಡೈವೋರ್ಸ್ ವದಂತಿ ಹಬ್ಬಿದೆ. ಇದಕ್ಕೆಲ್ಲಾ ಮಾತಲ್ಲಿ ಉತ್ತರ ನೀಡದೆ ಸಾಕ್ಷಿಯನ್ನೇ ತೋರಿಸಿ ತಮ್ಮ ಸಂಸಾರ ಬಿರುಕು ಬಿಟ್ಟಿಲ್ಲ ಎಂದು ಎಲ್ಲರಿಗೂ ಸ್ಪಷ್ಟಪಡಿಸಿದ್ದಾರೆ.

2009ರಲ್ಲಿ ಬಂದ ‘ಅಚ್ಚಮುಂಡು ಅಚ್ಚಮುಂಡು’ ಸಿನಿಮಾದಲ್ಲಿ ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ನಟಿಸಿದ್ದರು. ಸಿನಿಮಾದ ಶೂಟಿಂಗ್ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿತ್ತು. ನಂತರ 3 ವರ್ಷಗಳ ಕಾಲ ಡೇಟಿಂಗ್ ಮಾಡಿದ ಜೋಡಿ 2012ರಲ್ಲಿ ಪೋಷಕರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದರು.

ನಟಿ ಸ್ನೇಹಾ ದರ್ಶನ್ ನಟನೆಯ ಕನ್ನಡದ ‘ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ಮಿಂಚಿದ್ದರು. ಧನುಷ್ ನಟನೆಯ ‘ಪಟಾಸ್’ ಆಕೆಯ ಕೊನೆಯ ಸಿನಿಮಾವಾಗಿದೆ. ನಟಿ ಸ್ನೇಹಾ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಎಂದೂ ನಟಿಸಿಲ್ಲ. ಸ್ಕ್ರೀನ್ ಶೋಗೆ ಎಂದಿಗೂ ಒಪ್ಪದ ಚೆಲುವೆ ಸದಾ ಸಾಂಪ್ರದಾಯಿಕ ಉಡುಗೆ ಹಾಗೂ ಹೊಮ್ಲಿ ಲುಕ್ ಪಾತ್ರಗಳಲ್ಲೇ ಅದ್ಭುತವಾಗಿ ನಟಿಸುತ್ತಿದ್ದರು. ಹಾಗೇ ಸಾಕಷ್ಟು ಸಿನಿಮಾಗಳಲ್ಲಿ ಸ್ನೇಹಾ ಮಿಂಚಿದ್ದಾರೆ.