Home latest Kusumavati: ಏಕಾಏಕಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಸೌಜನ್ಯ ತಾಯಿ – ಸಚಿವರ ಬಳಿ ಇಟ್ಟ...

Kusumavati: ಏಕಾಏಕಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದ ಸೌಜನ್ಯ ತಾಯಿ – ಸಚಿವರ ಬಳಿ ಇಟ್ಟ ಆ 3 ಪ್ರಮುಖ ಬೇಡಿಕೆಗಳೇನು ?

Kusumavati

Hindu neighbor gifts plot of land

Hindu neighbour gifts land to Muslim journalist

Kusumavati: ಧರ್ಮಸ್ಥಳ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವು ದಿನದಿಂದ ದಿನಕ್ಕೆ ಯಾವ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ ಎಂದು ನೀವು ನೋಡುತ್ತಿದ್ದೀರಿ. ಸೌಜನ್ಯ ಕುಟುಂಬದವರಂತೂ ತಮ್ಮ ಮಗಳಿಗೆ ನ್ಯಾಯ ದೊರಕಿಹಿಕೊಡಲು ಅವಿರತ ಹೋರಾಡುತ್ತಿದ್ದಾರೆ. ಅಂತೆಯೇ ಇದೀಗ ಸೌಜನ್ಯ ತಾಯಿ ಕುಸುಮಾವತಿಯವರು (Kusumavati) ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವಂತಹ ಡಾ. ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ.

ಹೌದು ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿಎಂ ಸಿದ್ದರಾಮಯ್ಯ ಹಾಗೂ ನಾಡಿನ ಪ್ರಭಾವಿ ಮಠ ವಾಗಿರುವಂತಹ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ತಮ್ಮ ಮಗಳಿಗೆ ನ್ಯಾಯ ದೊರೆಕಿಸಿ ಕೊಡಬೇಕು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ತನಿಖೆಯನ್ನು ನಡೆಸಬೇಕು ಎಂದು ಸೌಜನ್ಯ ಕುಟುಂಬದವರು ಹಾಗೂ ಸೌಜನ್ಯ ಪರ ಹೋರಾಟಗಾರ ಆಗಿರುವಂತಹ ಮಹೇಶ್ ಶೆಟ್ಟಿ ತಿಮರೋಡಿ ಅವರು ಬೇಡಿಕೆಯನ್ನು ಇಟ್ಟಿದ್ದರು. ಅಂತೆಯೇ ಇದೀಗ ಮಂಗಳೂರಿಗೆ ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವಂತಹ ಡಾ. ದಿನೇಶ್ ಗುಂಡೂರಾವ್ ಇವರಿಗೆ ಸೌಜನ್ಯ ತಾಯಿಯವರು ಭೇಟಿಯಾಗಿ ತಮಗೆ ಈ ಮೂರು ಬೇಡಿಕೆಗಳನ್ನು ನೆರವೇರಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.

ನ್ಯಾಯಾಂಗದ ಸುಪರ್ದಿಯಲ್ಲಿ ತನಿಖೆ ಆಗಲಿ:
ನನ್ನ ಮಗಳು ಸೌಜನ್ಯಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ನಡೆಸಿದ ಪ್ರಕರಣವನ್ನು ನ್ಯಾಯಾಂಗದ ಸುಪರ್ದಿಯಲ್ಲಿ ಮರು ತನಿಖೆ ನಡೆಸಬೇಕು. ನೈಜ ಆರೋಪಿಗಳ ಪತ್ತೆಗೆ ಅಗತ್ಯ ಕಾನೂನುಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡುವ ಮೂಲಕ ನೈಜ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್‌ ಅಧಿಕಾರಿಗಳು ಹಾಗೂ ವೈಧ್ಯರು ಸಹಕರಿಸಿದ್ದಾರೆ. ಅವರ ವಿರುದ್ಧವೂ ತನಿಖೆ ನಡೆಸಬೇಕು. ಆರೋಪಿಗಳ ಹೆಸರನ್ನು ನಮೂದಿಸಿ ಹಿಂದೆಯೇ ದೂರು ನೀಡಿದ್ದರೂ ಅವರನ್ನು ತನಿಖೆಗೆ ಒಳಪಡಿಸಿಲ್ಲ’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಕಿರುಕುಳ ತಪ್ಪಿಸಿ:
‘ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆ ಹಚ್ಚುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಗಳು ನಡೆದಿವೆ. ಹೊರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ಹೆಸರಿಸಿ ಉಜಿರೆಯ ವ್ಯಕ್ತಿಯೊಬ್ಬರು ತನ್ನ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಬಂಟ್ವಾಳದ ಈಗಿನ ಡಿವೈಎಸ್‌ಪಿ ಅವರು ಹೋರಾಟಗಾರರನ್ನು ಅನಗತ್ಯವಾಗಿ ಠಾಣೆಗೆ ಕರೆಯಿಸಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಕುಸುಮಾವತಿ ಆರೋಪಿಸಿದ್ದಾರೆ

ಸೂಕ್ತ ರಕ್ಷಣೆ ನೀಡಿ:
‘ಈ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಪೊಲೀಸ್‌ ಇಲಾಖೆಯಿಂದ ಯಾವುದೇ ಕಿರುಕುಳ ಆಗದಂತೆ ರಕ್ಷಣೆ ಒದಗಿಸಬೇಕು. ಹೀಗಾಗಿ ಸರ್ಕಾರ ಸದಾ ನಮ್ಮ ಪರನಿಂತು ಅನ್ಯಾಯಕ್ಕೆ ಒಳಗಿದವರಾಗೆ ನ್ಯಾಯ ಕೊಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಇನ್ನು ಸೌಜನ್ಯ ತಾಯಿಗೆ ಸಕರಾತ್ಮಕವಾಗಿಯೇ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರೊಂದಿಗೆ ಮಾತನಾಡುತ್ತೇನೆ. ನಿಮ್ಮ ಬೇಡಿಕೆ ಈಡೇರಿಸಲು ಸಕಲ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Nari shakti vandan: ‘ಮಹಿಳಾ ಮೀಸಲಾತಿ’ ಜಾರಿ ಬೆನ್ನಲ್ಲೇ ದೇಶದ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ – ಅರೆ ಹೀಗೇಕೆ ಮಾಡಿತು ಮೋದಿ ಸರ್ಕಾರ ?!