Home News Death News: ಮಂಗಳೂರಿನಲ್ಲಿ ಪಾಪಿ ತಾಯಿಯ ಭೀಭತ್ಸ್ಯ ಕೃತ್ಯ!! ಹಸುಗೂಸನ್ನು ಕೊಂದು ಮಹಿಳೆ ಆತ್ಮಹತ್ಯೆ!!

Death News: ಮಂಗಳೂರಿನಲ್ಲಿ ಪಾಪಿ ತಾಯಿಯ ಭೀಭತ್ಸ್ಯ ಕೃತ್ಯ!! ಹಸುಗೂಸನ್ನು ಕೊಂದು ಮಹಿಳೆ ಆತ್ಮಹತ್ಯೆ!!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ನಾಲ್ಕೂವರೆ ತಿಂಗಳ ಹಸುಗೂಸನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದು ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಗರದ ಹೊರವಲಯದ ಗುಜ್ಜರಕೆರೆ ಎಂಬಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಫಾತಿಮಾ ರುಕಿಯಾ(23) ಎಂದು ಗುರುತಿಸಲಾಗಿದ್ದು, ಅಮಾನುಷವಾಗಿ ಕೊಲೆಯಾದ ಹಸುಗೂಸನ್ನು ಅಬ್ದುಲ್ಲಾ ಹೂದ್ ಎಂದು ಗುರುತಿಸಲಾಗಿದೆ.

ಇದನ್ನು ಓದಿ: M C Sudhakar: ಅತಿಥಿ ಉಪನ್ಯಾಸಕರ ಖಾಯಂ ಮಾಡುವ ವಿಚಾರ – ಭರ್ಜರಿ ಗುಡ್ ನ್ಯೂಸ್ ಕೊಟ್ಟ ಉನ್ನತ ಶಿಕ್ಷಣ ಸಚಿವ !!

ಕೃತ್ಯ ಎಸಗಿದ ಮಹಿಳೆ ರುಕಿಯಾ ಕಳೆದ ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದು, ಕಳೆದ ಜುಲೈ ತಿಂಗಳಿನಲ್ಲಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆಯ ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಆಕೆ ಚಿಕಿತ್ಸೆ ಪಡೆಯುತ್ತಿದ್ದರೂ, ಆತ್ಮಹತ್ಯೆಗೆ ಯತ್ನಿಸುತ್ತಿದ್ದಳು ಎನ್ನಲಾಗಿದೆ.

ಆದರೆ ಇಂದು ಮಧ್ಯಾಹ್ನ ವೇಳೆಗೆ ಆಕೆ ತಂಗಿದ್ದ ಫ್ಲಾಟ್ ನಲ್ಲಿ ಟಬ್ ಒಂದರಲ್ಲಿ ತುಂಬಿಸಿಟ್ಟ ನೀರಿನಲ್ಲಿ ಮಗುವನ್ನು ಮುಳುಗಿಸಿ ಉಸಿರುಗಟ್ಟಿಸಿ ಕೊಲೆಗೈದಿದ್ದು, ಬಳಿಕ ಅಲ್ಲೇ ಕಿಟಕಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ: Post Office Account: ಹಣ ಉಳಿಸಲು ಪೋಸ್ಟ್ ಆಫೀಸ್ ನಾ ಉಳಿತಾಯ ಖಾತೆ ಸುರಕ್ಷಿತವೇ?! ಇಲ್ಲಿದೆ ನೋಡಿ ಡೀಟೇಲ್ಸ್!!