Home Interesting ಅರ್ಧ ನಿಮಿಷಕ್ಕೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಿದ ಖ್ಯಾತ ಆಟಗಾರ| ಪತ್ನಿಗೆ ಅವಿಸ್ಮರಣೀಯ ಉಡುಗೊರೆ...

ಅರ್ಧ ನಿಮಿಷಕ್ಕೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಿದ ಖ್ಯಾತ ಆಟಗಾರ| ಪತ್ನಿಗೆ ಅವಿಸ್ಮರಣೀಯ ಉಡುಗೊರೆ ಕೊಟ್ಟ ರೊನಾಲ್ಡೊ!!

Hindu neighbor gifts plot of land

Hindu neighbour gifts land to Muslim journalist

ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ತನ್ನ ಮಡದಿ ಜಾರ್ಜಿನಾ ರೊಡ್ರಿಗಸ್ ಗೆ ಜನ್ಮದಿನದ ಶುಭಾಷಯ ಕೋರಲು ಖ್ಯಾತ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸವಿ ನೆನಪಿನ ಮರೆಯಲಾಗದ ಕಾಣಿಕೆಯನ್ನು ನೀಡಿದ್ದಾರೆ.

ದುಬೈನ ಹೃದಯಭಾಗದಲ್ಲಿರುವ ಐಕಾನಿಕ್ ಟವರ್ ಮೇಲೆ ತಮ್ಮ ಮಡದಿಗೆ ಹುಟ್ಟಿದ ಹಬ್ಬದ ಶುಭಾಷಯ ಕೋರಲು ಬರೋಬ್ಬರಿ 50,000 ಪೌಂಡ್ ಗಳನ್ನು ಖರ್ಚು ಮಾಡಿದ್ದಾರೆ ರೊನಾಲ್ಡೊ. ( 50 ಲಕ್ಷ ರೂಪಾಯಿ)

36 ವರ್ಷದ ರೊನಾಲ್ಡೊ ಗುರುವಾರ ರಾತ್ರಿ ಗಗನಚುಂಬಿ ಕಟ್ಟಡದ ಮೇಲೆ ತನ್ನ 28 ವರ್ಷದ ಮಾಡೆಲ್ ಗೆಳತಿಯ ಚಿತ್ರಗಳು ಮತ್ತು ವೀಡಿಯೋಗಳನ್ನು ಐಕಾನಿಕ್ ಟವರ್ ನ ಮೇಲೆ 30 ಸೆಕೆಂಡ್ ಗಳ ಕಾಲ ಪೋಸ್ಟ್ ಮಾಡಿದ್ದಾರೆ.

ಚಳಿಗಾಲದ ವಿರಾಮದ ಸಮಯವನ್ನು ಕುಟುಂಬದೊಂದಿಗೆ ದುಬೈನಲ್ಲಿ ಕಳೆಯುತ್ತಿದ್ದಾರೆ ರೊನಾಲ್ಡೊ ಮತ್ತು ಜಾರ್ಜಿನ ದಂಪತಿಗಳು. ಈ ದಂಪತಿಗಳಿಗೆ 4 ವರ್ಷದ ಮಗನೂ ಇದ್ದು. ಆತ ಕೂಡ ಅವರೊಂದಿಗೆ ಇದ್ದಾನೆ.