Home latest Crime News : ಹಾಡಹಗಲೇ ಕಾಂಗ್ರೆಸ್‌ ಮುಖಂಡನ ಗುಂಡಿಟ್ಟು ಭೀಕರ ಕೊಲೆ

Crime News : ಹಾಡಹಗಲೇ ಕಾಂಗ್ರೆಸ್‌ ಮುಖಂಡನ ಗುಂಡಿಟ್ಟು ಭೀಕರ ಕೊಲೆ

Hindu neighbor gifts plot of land

Hindu neighbour gifts land to Muslim journalist

ದಿನಂಪ್ರತಿ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ನಡುವೆ ಬಿಲಾಸ್‌ಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಸಂಜು ತ್ರಿಪಾಠಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಹಾಡು ಹಗಲೇ ನಡೆದ ಈ ಭೀಕರ ಕೃತ್ಯ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಛತ್ತೀಸ್‌ಗಢದ (Chhattisgarh) ಬಿಲಾಸ್‌ಪುರದಲ್ಲಿ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಸಂಜೀವ್ ತ್ರಿಪಾಠಿ (Sanju Tripathi) ಅವರನ್ನು ಹಾಡ ಹಗಲೇ  ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ (Murder). ಸಂಜೀವ್ ತ್ರಿಪಾಠಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿಕೋರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ತ್ರಿಪಾಠಿ ಅವರ  ಕಾರನ್ನು ದಾಳಿಕೋರರು ನಿಲ್ಲಿಸಿ ಬಳಿಕ, ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದ ಸಂಜೀವ್ ತ್ರಿಪಾಠಿಯ ತಲೆಯ ಮೇಲೆ ಗುಂಡು ಹಾರಿಸಿದ್ದಾರೆ. ಹೀಗಾಗಿ,  ಸಂಜೀವ್ ತ್ರಿಪಾಠಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ , ಈ ಘಟನೆ ಸಕ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಸಂಜೀವ್ ತ್ರಿಪಾಠಿ ತಮ್ಮ ಫಾರ್ಚುನರ್ ಕಾರಿನಲ್ಲಿ ಸಕ್ರಿ ಬೈಪಾಸ್ ರಸ್ತೆಯಿಂದ ಬೇರೆಡೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ  ಕಿಡಿಗೇಡಿಗಳು ಎರಡು ಮೂರು ಮಂದಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಲ್ಲಿಗೆ ತಲುಪಿದ್ದು,  ಮೊದಲು ಸಂಜೀವ್ ಅವರ ವಾಹನವನ್ನು ನಿಲ್ಲಿಸಿದ್ದಾರೆ.

ಈ ಬಳಿಕ  ದಾಳಿಕೋರರು ಸಂಜೀವ್ ತ್ರಿಪಾಠಿಗೆ ಗುಂಡು ಹಾರಿಸಿದ್ದು, ತಲೆಗೆ ಗುಂಡು ತಗುಲಿ ಡ್ರೈವಿಂಗ್ ಸೀಟಿನಲ್ಲಿಯೇ ಸಂಜೀವ್ ತ್ರಿಪಾಠಿ ಮೃತ ಪಟ್ಟಿದ್ದಾರೆ. ಈ ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಈ ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ  ಬಿಲಾಸ್‌ಪುರ ಎಸ್‌ಎಸ್‌ಪಿ ಪಾರುಲ್ ಮಾಥುರ್ ಸೇರಿದಂತೆ ಹಿರಿಯ ಅಧಿಕಾರಿಗಳು  ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸಂಜು ತ್ರಿಪಾಠಿಯ ಹತ್ಯೆಯು ಅಕ್ರಮವಾಗಿ ಜಮೀನು ಒತ್ತುವರಿ ವಿಚಾರದ ಕುರಿತಾಗಿ ನಡೆಯುವ ದೊಡ್ಡ ಕದನ ಸೃಷ್ಟಿ ಮಾಡುವ ಅಪಾಯವನ್ನು ಹೆಚ್ಚಿಸಿದೆ. ಎಲ್ಲಾ ಪಕ್ಷಗಳ ಜನರು ಸೇರಿದಂತೆ ಬಿಲಾಸ್‌ಪುರದಲ್ಲಿ ರಾಜಕೀಯ ಪ್ರಭಾವ ಹೊಂದಿರುವ ಅನೇಕರು ಭೂ ವ್ಯವಹಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆಯ ಬಳಿಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.


ಇದೇ ವೇಳೆ, ಈ ಕೊಲೆ ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಸುತ್ತಮುತ್ತಲಿನ ಜನರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಕೊಲೆಗೆ ಕಾರಣ ಏನು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.  ಹೀಗಾಗಿ, ನಗರದಲ್ಲಿ ಪೊಲೀಸರು ದಿಗ್ಬಂಧನ ಹಾಕಿದ್ದು, ಆರೋಪಿಗಳ ಪತ್ತೆಗೆ ಖಾಕಿ ಪಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.