Home latest Breaking News । ಆರೋಗ್ಯ ಸಚಿವರ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಿದ ಪೊಲೀಸ್ ಸಬ್ ಇನ್ಸ್...

Breaking News । ಆರೋಗ್ಯ ಸಚಿವರ ಮೇಲೆ ಹತ್ತಿರದಿಂದಲೇ ಗುಂಡು ಹಾರಿಸಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್

Hindu neighbor gifts plot of land

Hindu neighbour gifts land to Muslim journalist

ಆರೋಗ್ಯ ಸಚಿವರ ಮೇಲೆ ಗುಂಡು ಹಾರಿಸಲಾಗಿದೆ. ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ನಬಾ ಕಿಶೋರ್ ದಾಸ್ (61) ಅವರು ಭಾನುವಾರ ಪಶ್ಚಿಮ ಒಡಿಶಾದ ಜರ್ಸುಗುಡಾ ಜಿಲ್ಲೆಯ ಬ್ರಜರಾಜನಗರ ಪಟ್ಟಣದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.

ವಿಪರ್ಯಾಸವೆಂದರೆ ಒಬ್ಬ ಪೊಲೀಸ್ ಎಎಸ್‌ಐ ಆರೋಗ್ಯ ಸಚಿವ ದಾಸ್ ಮೇಲೆ ಗುಂಡು ಹಾರಿಸಿದ್ದಾನೆ. ಈ ಸಂಬಂಧ ಎಎಸ್‌ಐ ಗೋಪಾಲ್ ದಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ತಿರದಿಂದ ಗುಂಡು ಹಾರಿಸಿದ ಪರಿಣಾಮ ಎದೆಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರನ್ನು ಝಾರ್ಸುಗುಡ ವಿಮಾನ ನಿಲ್ದಾಣದಿಂದ ಚಿಕಿತ್ಸೆಗಾಗಿ ಭುವನೇಶ್ವರಕ್ಕೆ ಕರೆದೊಯ್ಯಲಾಗುತ್ತಿದೆ.

ದಾಸ್ ಅವರು ಮುಂಜಾನೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬ್ರಜರಾಜನಗರಕ್ಕೆ ತೆರಳಿದ್ದರು. ಅಲ್ಲಿ ರಕ್ಷಣೆ ಮಾಡಬೇಕಾದ ಪೊಲೀಸ್ ಸಬ್ ಇನ್ಸ್ಟೆಟರ್ ನೇ ಸಚಿವರಿಗೆ ಗುಂಡು ಹಾರಿಸಿದ್ದಾನೆ. ಬ್ರಜರಾಜನಗರದಲ್ಲಿ ಅವರು ಕಾರಿನಿಂದ ಕೆಳಗಿಳಿದಾಗ ಮುಂಭಾಗದಿಂದ ಗುಂಡು ಹಾರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಜಾರ್ಸುಗುಡ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ದಾಸ್ ಅವರು ದೀರ್ಘಕಾಲ ಕಾಂಗ್ರೆಸ್‌ನಲ್ಲಿದ್ದು ನಂತರ ಬಿಜೆಡಿ ಸೇರಿದ್ದರು. 2019 ರಲ್ಲಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ಇತ್ತೀಚೆಗೆ ಅವರು ಮಹಾರಾಷ್ಟ್ರದ ನಾಸಿಕ್‌ನ ಶನಿ ಸಿಗ್ನಾಪುರದಲ್ಲಿರುವ ಪ್ರಸಿದ್ಧ ಶನಿ ದೇವಸ್ಥಾನದಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಮಡಕೆಯನ್ನು ಅರ್ಪಿಸಿ ಸುದ್ದಿಯಾಗಿದ್ದರು. ಬ್ರಜರಾಜನಗರವು ಐಬಿ ವ್ಯಾಲಿ ಕೋಲರಿಗಳ ಪ್ರಧಾನ ಕಛೇರಿಯಾಗಿದೆ ಮತ್ತು ಇದು ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಹೆಸರುವಾಸಿಯಾಗಿದೆ. ದಾಳಿಯ ಕಾರಣ ಇನ್ನೂ ತಿಳಿದಿಲ್ಲವಾದರೂ, ಕಲ್ಲಿದ್ದಲು ಪೈಪೋಟಿಗೆ ಇದು ಸಂಬಂಧಿಸಿರಬಹುದು ಎಂದು ಕೆಲವರು ಶಂಕಿಸಿದ್ದಾರೆ.