Home Interesting ಕೇವಲ 999 ರೂಪಾಯಿ ಪಾವತಿಸಿ ಈ ಎಲೆಕ್ಟ್ರಿಕ್ ಬೈಕ್ ನಿಮ್ಮದಾಗಿಸಿ |

ಕೇವಲ 999 ರೂಪಾಯಿ ಪಾವತಿಸಿ ಈ ಎಲೆಕ್ಟ್ರಿಕ್ ಬೈಕ್ ನಿಮ್ಮದಾಗಿಸಿ |

Hindu neighbor gifts plot of land

Hindu neighbour gifts land to Muslim journalist

ನೀವು ಹೊಸ ಬೈಕ್ ಕೊಳ್ಳುವ ಆಲೋಚನೆ ಮಾಡಿದ್ದರೆ, ನಿಮಗಾಗಿ ಭರ್ಜರಿ ಆಫರ್ ಕಾದಿದೆ. ಹೌದು!!! ಹೊಸ ವರ್ಷದ ಹೊಸ್ತಿಲಲ್ಲಿ ಹಾಪ್ ಆಕ್ಸೊ ಮತ್ತು ಆಕ್ಸೊ ಎಕ್ಸ್ ಎಂಬ ಎರಡು ವೆರಿಯೇಂಟ್ ಗಳಲ್ಲಿ ಕಂಪನಿ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಈ ಬೈಕ್ ವಿತರಣೆ ಕಾರ್ಯ ಆರಂಭವಾಗಿದ್ದು, ಕೇವಲ 999 ರೂಪಾಯಿ ಪಾವತಿಸಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಬುಕ್ ಮಾಡಬಹುದಾಗಿದೆ.

ಎಲೆಕ್ಟ್ರಿಕ್ ಟು ವೆಹಿಕಲ್ ಸ್ಟಾರ್ಟಪ್ HOP ಸೆಪ್ಟೆಂಬರ್‌ನಲ್ಲಿ ತನ್ನ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಹಾಪ್ ಆಕ್ಸೊ ಮತ್ತು ಆಕ್ಸೊ ಎಕ್ಸ್ ಎಂಬ ಎರಡು ವೆರಿಯೇಂಟ್ ಗಳಲ್ಲಿ ಕಂಪನಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಈ ಬೈಕ್ ವಿತರಣೆ ಆರಂಭವಾಗಿದ್ದು, ಕೇವಲ 999 ರೂಪಾಯಿ ಪಾವತಿಸಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಬೈಕ್ ನ ವಿಶೇಷವೆಂದರೆ 100 ರೂಪಾಯಿಗೆ 400ಕಿಮೀ ಪ್ರಯಾಣಿಸಬಹುದಾಗಿದೆ.

ಹಾಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 4G ಕನೆಕ್ಟಿವಿಟಿ, ಮಲ್ಟಿ-ಮೋಡ್ ರೀಜನರೇಟಿವ್ ಬ್ರೇಕಿಂಗ್, ಆಂಟಿ-ಥೆಫ್ಟ್ ಸಿಸ್ಟಮ್, ಸ್ಪೀಡ್ ಕಂಟ್ರೋಲ್, ಜಿಯೋ-ಫೆನ್ಸಿಂಗ್ ಮತ್ತು ರೈಡ್ ಅಂಕಿ ಅಂಶಗಳೊಂದಿಗೆ ಬರುತ್ತದೆ. ಇಕೋ, ಪವರ್ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡ್ ಮೋಡ್ ಗಳೊಂದಿಗೆ ಈ ಬೈಕ್ ಬರುವುದರ ಜೊತೆಗೆ ಈ ಬೈಕ್ ಒಟ್ಟು 5 ಬಣ್ಣಗಳಲ್ಲಿ ದೊರೆಯಲಿದೆ. ಹಾಪ್ ಆಕ್ಸೊ ಬೆಲೆ ರೂ 1.25 ಲಕ್ಷ ಮತ್ತು ಆಕ್ಸೋ ಎಕ್ಸ್ ರೂಪಾಂತರದ ಬೆಲೆ ರೂ 1.40 ಲಕ್ಷ ಆಗಿವೆ.

ಈ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳು ಬ್ಯಾಟರಿ ಪ್ಯಾಕ್ ಅನ್ನು ಅವಲಂಬಿಸಿ ಬೇರೆ ಬೇರೆ ರೇಂಜ್ ಅನ್ನು ನೀಡುತ್ತದೆ. ಇದರಲ್ಲಿ 3.75 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ. Oxo X ಅನ್ನು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ, 150 ಕಿ.ಮೀ. ರೇಂಜ್ ನೀಡುತ್ತದೆ. ಈ ಬೈಕ್ ನಲ್ಲಿ ಒಂದು ಕಿ.ಮಿ ವರೆಗೆ ಪ್ರಯಾಣಿಸಿದರೆ 25 ಪೈಸೆ ವೆಚ್ಚ ತಗುಲುತ್ತದೆ. ಈ ಪ್ರಕಾರ ಲೆಕ್ಕ ಹಾಕಿದರೆ 100 ರೂಪಾಯಿ ಖರ್ಚು ಮಾಡಿದರೆ 400 ಕಿಮೀ ವರೆಗಿನ ದೂರವನ್ನು ಕ್ರಮಿಸಬಹುದಾಗಿದೆ.

ಆಕ್ಸೊ ರೂಪಾಂತರದಲ್ಲಿ ಸಿಂಗಲ್ ಚಾರ್ಜ್ ನಲ್ಲಿ 135 ಕಿ.ಮೀವರೆಗಿನ ರೇಂಜ್ ನೀಡುತ್ತದೆ. ಟರ್ಬೊ ಮೋಡ್‌ನಲ್ಲಿ, Hop Oxo-X 4 ಸೆಕೆಂಡುಗಳಲ್ಲಿ 0-40 kmp ವೇಗವನ್ನು ಹಿಡಿಯುತ್ತದೆ.

ಈ ಬೈಕ್ ಪೋರ್ಟಬಲ್ ಸ್ಮಾರ್ಟ್ ಚಾರ್ಜರ್‌ನೊಂದಿಗೆ ಬರುವುದರ ಜೊತೆಗೆ ಈ ಚಾರ್ಜರ್ ಮೂಲಕ 16 ಆಂಪಿಯರ್ ಪವರ್ ಸಾಕೆಟ್‌ನಲ್ಲಿ ಚಾರ್ಜ್ ಮಾಡಬಹುದಾಗಿದೆ. ಇದನ್ನು 0 ಯಿಂದ 80% ವರೆಗೆ ಚಾರ್ಜ್ ಮಾಡಲು ಹೆಚ್ಚಿನ ಸಮಯ ಬೇಕಾಗಿಲ್ಲ. ಕೇವಲ 4 ಗಂಟೆಗಳಿಗಿಂತ ಕಡಿಮೆ ಅವಧಿ ಸಾಕಾಗುತ್ತದೆ.