Home Interesting ‘ಖಾಲಿ ಪೇಪರ್ ಮೇಲೆ ಸಹಿ ಮಾಡಿಸ್ಕೊಂಡು, ಬಾಲಕಿಯರಿಂದ ದೂರು ಕೊಡಿಸಲಾಗಿದೆ’ | ಮುರುಘಾ ಶ್ರೀ ಗಳ...

‘ಖಾಲಿ ಪೇಪರ್ ಮೇಲೆ ಸಹಿ ಮಾಡಿಸ್ಕೊಂಡು, ಬಾಲಕಿಯರಿಂದ ದೂರು ಕೊಡಿಸಲಾಗಿದೆ’ | ಮುರುಘಾ ಶ್ರೀ ಗಳ ಕೇಸಲ್ಲಿ ಬಾಲಕಿಯ ಚಿಕ್ಕಪ್ಪ ಪೊಲೀಸ್ ದೂರು

Hindu neighbor gifts plot of land

Hindu neighbour gifts land to Muslim journalist

ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಬಾಲಕಿಯರ ಚಿಕ್ಕಪ್ಪ ಎಂದು‌ಕೊಂಡು ಇದೀಗ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ಲಭ್ಯ ಆಗ್ತಿದೆ. ಹುಡುಗಿಯರ ಮದುವೆ ಮಾಡಿಸುತ್ತೇನೆ ಎಂದು ಖಾಲಿ ಪೇಪರ್ ಮೇಲೆ ಸಹಿ ಮಾಡಿಸಲಾಗಿದೆ ಎಂಬ ಸ್ಫೋಟಕ ವಿಷ್ಯ ಈಗ ಹೊರ ಬರ್ತಿದೆ.

ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಓರ್ವ ಬಾಲಕಿಯ ಚಿಕ್ಕಪ್ಪ ಚಿತ್ರದುರ್ಗ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದು, ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್​ ವಿರುದ್ಧ ಆರೋಪ ಮಾಡಿದ್ದಾರೆ.

ಜುಲೈ 27ರಂದು ಬಸವರಾಜನ್​ ನನ್ನನ್ನು ಕರೆಸಿಕೊಂಡಿದ್ರು, ಆಗ ಮಕ್ಕಳು ಅವರ ಮನೆಯಲ್ಲಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅವರ ವಿದ್ಯಾಭ್ಯಾಸ, ಮದುವೆ ಜವಾಬ್ದಾರಿ ನನ್ನದು ಎಂದು ಬಸವರಾಜನ್​ ಹೇಳಿದ್ದಾರೆ. ಆದರೆ ನಾವು ಮಗಳನ್ನು ಮನೆಗೆ ಕರೆತಂದಿರೋ ಹೇಳಿಕೆ ಸುಳ್ಳು. ಬಾಲಕಿಯರ ಬಳಿ ಖಾಲಿ ಪೇಪರ್‌ಗೆ ಸಹಿ ಹಾಕಿಸಿದ್ದಾರೆ ಎಂದು ಓರ್ವ ಸಂತ್ರಸ್ತ ಬಾಲಕಿಯ ಚಿಕ್ಕಪ್ಪ, ಬಸವರಾಜನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅವರು ಚಿತ್ರದುರ್ಗ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಇದರ ಬೆನ್ನಲ್ಲೆ ಜುಲೈ 27ರಿಂದ ಆಗಸ್ಟ್​ 26ರವರೆಗೆ ಸಂತ್ರಸ್ತ ಬಾಲಕಿಯರು ಎಲ್ಲಿ ಇದ್ದರು ಎಂಬ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ. ಸದ್ಯ ಪೋಕ್ಸ್‌ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮುರುಘಾ ಶ್ರೀಗಳನ್ನು ತೀವ್ರ ವಿಚಾರಣೆ ಗೊಳಪಡಿಸಲಾಗಿದೆ. ಬಾಲಕಿಯರ ಆರೋಪಕ್ಕೆ ಸಂಬಂಧಿಸಿದಂತೆ, ಕಳೆದ 2 ದಿನಗಳಿಂದ ಶ್ರೀಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಇನ್ನು ಇವತ್ತು ಕೂಡ ಮುರುಘಾ ಶರಣರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.