Home latest Accident : ಬೈಕ್ ಅಪಘಾತಕ್ಕೆ ಹೆದರಿದ ಬಾಲಕ ಹೃದಯಾಘಾತಕ್ಕೊಳಗಾಗಿ ಸಾವು!!!

Accident : ಬೈಕ್ ಅಪಘಾತಕ್ಕೆ ಹೆದರಿದ ಬಾಲಕ ಹೃದಯಾಘಾತಕ್ಕೊಳಗಾಗಿ ಸಾವು!!!

Hindu neighbor gifts plot of land

Hindu neighbour gifts land to Muslim journalist

ಸಣ್ಣ ವಯಸ್ಸಿನಲ್ಲೇ ಹೃದಯಾಘಾತವಾಗಿ ಸಾವಿನ ದವಡೆಗೆ ಸಿಲುಕಿದ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ. ಮಾನಸಿಕ ಸ್ಥಿತಿ, ಒತ್ತಡ ಹೆಚ್ಚಾಗಿ ಹದಿಹರೆಯದ ವಯಸ್ಸಿನಲ್ಲೇ ಮೃತಪಡುತ್ತಿರುವ ಘಟನೆಗಳು ನಡೆಯುತ್ತಿವೆ.

ಈ ನಡುವೆ ಬೈಕ್ ಅಪಘಾತದಿಂದ ಹೆದರಿಕೊಂಡ ಬಾಲಕ ಹಠಾತ್ತನೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆಯೊಂದು ಭಟ್ಕಳದಲ್ಲಿ ಶನಿವಾರ ರಾತ್ರಿ ನಡೆದಿದೆ.

9ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಬ್ದುಲ್ಲಾ ಆಫ್ರೀಕಾ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಇನ್ನೊಂದು ಬೈಕ್ ತಾಗಿ ಅಬ್ದುಲ್ಲಾ ಆಫ್ರೀಕಾ ಬೈಕ್‌ ಸಮೇತ ಬಿದ್ದಿದ್ದಾನೆ. ಈ ಸಂದರ್ಭ ಬೈಕನ್ನು ಎತ್ತಿ ನಿಲ್ಲಿಸುವ ವೇಳೆ ಜನರು ಸೇರಿಕೊಂಡಿದ್ದಾರೆ. ಜನರನ್ನು ಕಂಡು ಹೆದರಿಕೊಂಡ ಅಬ್ದುಲ್ಲಾ ಅಲ್ಲಿಯೆ ಕುಸಿದ್ದು ಬಿದ್ದಿದ್ದು, ಹೃದಯಾಘಾತಕ್ಕೆ ಒಳಗಾಗಿದ್ದಾನೆ .

ಕೂಡಲೇ ಆತನನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಕೂಡ ಬಾಲಕ ಮೃತಪಟ್ಟಿದ್ದಾನೆ. ಈ ಕುರಿತು ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.