Home latest OnePlus 10Pro 5G : ಈ ಆಫರ್‌ ಮಿಸ್‌ ಮಾಡ್ಕೊಂಡರೆ ಅಷ್ಟೇ ….ರೂ.71,999 ರೂ. ಬೆಲೆಯ...

OnePlus 10Pro 5G : ಈ ಆಫರ್‌ ಮಿಸ್‌ ಮಾಡ್ಕೊಂಡರೆ ಅಷ್ಟೇ ….ರೂ.71,999 ರೂ. ಬೆಲೆಯ ಮೊಬೈಲ್‌ ಈಗ ಇಷ್ಟು ಕಡಿಮೆ ಬೆಲೆಯಲ್ಲಿ ಎಂದರೆ ನಂಬಲಸಾಧ್ಯ

Hindu neighbor gifts plot of land

Hindu neighbour gifts land to Muslim journalist

ಭಾರತದ ಮಾರುಕಟ್ಟೆಯಲ್ಲಿ ಅನೇಕ ಮಾಡೆಲ್ ಗಳ ಫೋನ್’ಗಳು ಬಿಡುಗಡೆಯಾಗುತ್ತಲೇ ಇದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅಗಾಧ ಬೇಡಿಕೆಯಿರುವ ಪ್ರತಿಷ್ಟಿತ ಬ್ರ್ಯಾಂಡ್ ಆಗಿರುವ ಒನ್ ಪ್ಲಸ್, ಗ್ರಾಹಕರಿಗೆ ಹೊಸ ಮಾದರಿಯ, ಹೊಸ ಫೀಚರ್ ನಿಂದ ಕೂಡಿದ ಸ್ಮಾರ್ಟ್ ಫೋನ್ ಅನ್ನು ಭರ್ಜರಿ ಡಿಸ್ಕೌಂಟ್ ನೀಡಿದೆ.

ಪ್ರಸಿದ್ಧ ಇ-ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಆಯ್ದ ಕೆಲ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ನಲ್ಲಿ ಮಾರಾಟ ಆಗುತ್ತಿದೆ. ಭಾರತದಲ್ಲಿ ಈ ವರ್ಷ ಲಾಂಚ್ ಆಗಿದ್ದ ಒನ್​ಪ್ಲಸ್ ಕಂಪನಿಯ ಪವರ್​ಫುಲ್ ಸ್ಮಾರ್ಟ್​ಫೋನ್ ಒನ್​ಪ್ಲಸ್ 10 ಪ್ರೊ 5ಜಿ ಇದೀಗ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನ್​ನಲ್ಲಿ ಕೇವಲ 32 ನಿಮಿಷಗಳಲ್ಲಿ 0% ದಿಂದ 100% ಚಾರ್ಜ್ ಆಗುತ್ತದೆ ಎಂಬುದೇ ಇದರ ವಿಶೇಷ. ಇದು 1,440×3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದ್ದು, 6.7 ಇಂಚಿನ QHD+ ಲಿಕ್ವಿಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನಿಂದ ಕೂಡಿದ್ದೂ, ಇದು RGB ಬಣ್ಣದ ಹರವುಗಳನ್ನು ಸಹ ಬೆಂಬಲಿಸುತ್ತದೆ.

ಈ ಸ್ಮಾರ್ಟ್‌ಫೋನ್‌ ಅತ್ಯಂತ ಬಲಿಷ್ಠವಾದ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಹೊಂದಿದ್ದು, ನಾಲ್ಕು ಪಟ್ಟು ವೇಗದ ಕೃತಕ ಬುದ್ಧಿಮತ್ತೆ (AI) ಸಂಸ್ಕರಣೆ ಮತ್ತು ಕೊನೆಯ ತಲೆಮಾರಿನ ಸ್ನಾಪ್‌ಡ್ರಾಗನ್ ಚಿಪ್‌ಗಿಂತ 25% ಹೆಚ್ಚು ಪರಿಣಾಮಕಾರಿ ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ನೀಡಲಿದೆ. ಹೀಗಾಗಿ ಗೇಮಿಂಗ್​ಗೆ ಈ ಫೋನ್ ಹೇಳಿಮಾಡಿಸಿದಂತಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ಆಕ್ಸಿಜನ್‌ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ದೀರ್ಘ ಕಾಲ ಬಾಳಿಕೆ ಬರುವ ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದೂ, ಇದರಲ್ಲಿ 80W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆ ನೋಡುವುದಾದರೆ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದರ ಜೊತೆಗೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಗಳನ್ನು ನೀಡಲಾಗಿದೆ.

ಈ ಸ್ಮಾರ್ಟ್‌ಫೋನಿನ ಕ್ಯಾಮೆರಾ ಸೆಟಪ್‌ ಟ್ರಿಪಲ್‌ ರಿಯರ್‌ ನಿಂದ ಕೂಡಿದ್ದೂ, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಅಲ್ಟ್ರಾ–ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಅಲ್ಲದೆ, IMX789 ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದ್ದು ಫೋಟೋಗ್ರಫಿ ಅದ್ಭುತವಾಗಿ ಮೂಡಿಬರುತ್ತದೆ.

ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಒಟ್ಟು ಎರಡು ಮಾದರಿಯಲ್ಲಿ ಅನಾವರಣಗೊಂಡಿತ್ತು. ಇದರ ಬೇಸ್ ಮಾಡೆಲ್‌ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 66,999 ರೂ. ಮತ್ತು 12GB RAM ಮತ್ತು 256GB ಸ್ಟೋರೇಜ್ ಮಾಡೆಲ್‌ ಆಯ್ಕೆಗೆ 71,999 ರೂ. ಬೆಲೆ ಇದೆ. ಇದೀಗ ಅಮೆಜಾನ್​​ನಲ್ಲಿ ಈ ಫೋನಿನ 8GB RAM ರೂಪಾಂತರವನ್ನು 61,999 ರೂ. ಗೆ ಹಾಗೂ 12GB + 256GB ಯನ್ನು 66,999 ರೂ. ಗೆ ಖರೀದಿಸಬಹುದಾಗಿದೆ. ಕ್ರೆಡಿಟ್ ಕಾರ್ಡ್​ಗಳಿಗೆ 2,000 ರೂ. ಗಳ ಡಿಸ್ಕೌಂಟ್ ಸಿಗಲಿದ್ದೂ, 25,000 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ. ಈ ಹೊಸ ವೈಶಿಷ್ಟ್ಯ ಹೊಂದಿದ ಫೋನನ್ನು 55,000 ರೂ. ಗೆ ಖರೀದಿಸಿದರೆ ಯಾವುದೇ ಮೋಸವಿಲ್ಲ.