Home latest ಮುಖ್ಯಮಂತ್ರಿ ಆಗಮಿಸುವ ಸ್ಥಳ ಪರಿಶೀಲನೆ ಮಾಡಿದ ಬೆಳಗಾವಿ ಹೆಚ್ಚುವರಿ ಎಸ್ಪಿ

ಮುಖ್ಯಮಂತ್ರಿ ಆಗಮಿಸುವ ಸ್ಥಳ ಪರಿಶೀಲನೆ ಮಾಡಿದ ಬೆಳಗಾವಿ ಹೆಚ್ಚುವರಿ ಎಸ್ಪಿ

Hindu neighbor gifts plot of land

Hindu neighbour gifts land to Muslim journalist

ಮುಗಳಖೋಡ: ಇದೆ ಸೋಮವಾರ ಡಿಸೆಂಬರ್ 26 ರಂದು ಮುಗಳಖೋಡ ಶ್ರೀ ಚವಿವ ಸಂಘದ ಡಾ. ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಅಖಿಲ ಕರ್ನಾಟಕ ಮಾಳಿ-ಮಾಲಗಾರ ಸಮಾಜದ ರಾಜ್ಯ ಮಟ್ಟದ ಸಮಾವೇಶಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಹಲವು ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಬುಧವಾರ ಬೆಳಗಾವಿ ನಗರದ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾವಿ, ಅಥಣಿ ಡಿ.ವಾಯ್. ಎಸ್ಪಿ ಶ್ರೀಪಾದ ಜಲ್ದೆ ಹಾಗೂ ಹಾರೂಗೇರಿ ಸಿ.ಪಿ.ಐ ರವಿಚಂದ್ರ ಬಡಪಕೀರಪ್ಪಣ್ಣವರ ತಮ್ಮ‌ ತಂಡದ ಜೊತೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ವೇದಿಕೆ, ವಾಹನ ನಿಲುಗಡೆ ಸ್ಥಳ, ಆಗಮಿಸುವ ಮತ್ತು ನಿರ್ಗಮನದ ದ್ವಾರ ಸೇರಿದಂತೆ ಮುಖ್ಯಮಂತ್ರಿಗಳ ವಿಶ್ರಾಂತಿ ಕೊಠಡಿ ಪರಿಶೀಲಿಸಿ ತಂಡದವರ ಸಲಹೆ ಸೂಚನೆಗಳಂತೆ ಕಾರ್ಯಕ್ರಮದ ಆಯೋಜನೆ ಮಾಡಲು ತಿಳಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು..

ಈ ಸಂದರ್ಬದಲ್ಲಿ ನಿಯೋಗದ ಅಧ್ಯಕ್ಷ ಡಾ. ಸಿ. ಬಿ. ಕೂಲಿಗೋಡ, ಸಂಬಂಧಪಟ್ಟ ಅಧಿಕಾರಿಗಳು, ಹವಾಲ್ದಾರ್ ಕುಮಾರ ಪವಾರ, ವಿ ಏನ್ ಹೆಬ್ಬಾಳ, ಆರ್ ಎಸ್ ಕೇತ್ರಿ, ಎಸ್ ಎಲ್ ಬಾಡಕರ, ಮಾದೇವ ತೇರದಾಳ, ಸೇರಿದಂತೆ ಮಾಳಿ-ಮಾಲಗಾರ ಸಮಾಜದ ಎಲ್ಲ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಸಂತೋಷ ಮುಗಳಿ ಮುಗಳಖೋಡ