Home Interesting ಕಿಂಗ್‌ ಕೋಬ್ರಾಗೆ ಶಾಂಪೂವಿನಿಂದ ಸ್ನಾನ ಮಾಡಿಸಿದ ವ್ಯಕ್ತಿ | ವೀಡಿಯೋ ವೈರಲ್‌

ಕಿಂಗ್‌ ಕೋಬ್ರಾಗೆ ಶಾಂಪೂವಿನಿಂದ ಸ್ನಾನ ಮಾಡಿಸಿದ ವ್ಯಕ್ತಿ | ವೀಡಿಯೋ ವೈರಲ್‌

Hindu neighbor gifts plot of land

Hindu neighbour gifts land to Muslim journalist

ಹಾವೆಂದರೆ ಅನೇಕರಿಗೆ ಭಯವೋ ಭಯ. ಹಾವಿನ ಹೆಸರು ಕೇಳುತ್ತಿದ್ದಂತೆ ಭಯಗೊಳ್ಳುವವರೂ ಇದ್ದಾರೆ. ಹಾವಿನೊಂದಿಗೆ ಸ್ನೇಹದಿಂದ ವರ್ತಿಸುವ, ಅದನ್ನು ಹಿಡಿಯುವ, ಅದನ್ನು ಮುಟ್ಟುವ ಪ್ರಯತ್ನಗಳ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಈ ವಿಚಾರದಲ್ಲಿ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು ಗ್ಯಾರೆಂಟಿ. ಅದರಲ್ಲೂ ವಿಷಕಾರಿ ಹಾವಿನೊಂದಿಗೆ ಎಷ್ಟು ಜಾಗರೂಕತೆಯಿಂದ ಇದ್ದರೂ ಕಡಿಮೆಯೇ. ಆದರೆ ಈಗೊಂದು ಹಾವಿನ ವಿಡಿಯೋ ವೈರಲ್ ಆಗುತ್ತಿದ್ದೂ ನೆಟ್ಟಿಗರನ್ನು ಅಚ್ಚರಿ ಪಡಿಸುವಂತಿದೆ.

ಹಾವಿನ ಒಡೆಯ ದಿ ಗ್ರೇಟ್ ಕಿಂಗ್ ಕೋಬ್ರಾ ಹೆಸರು ಕೇಳಿದರೆ ನಡುಕ ಉಂಟು ಮಾಡಿಸುವ, ಇಡೀ ವಿಶ್ವದಲ್ಲೇ ವಿಷಕಾರಿ ಹಾಗೂ ಬಹಳ ಅಪಾಯಕಾರಿಯಾದ ಈ ಸರ್ಪವನ್ನು ಒಬ್ಬ ವ್ಯಕ್ತಿಯು ಸ್ನಾನ ಮಾಡಿಸುವ ವಿಡಿಯೋ ಇದಾಗಿದೆ.

45 ಸೆಕೆಂಡುಗಳ ಈ ವಿಡಿಯೋದಲ್ಲಿ, ಬೃಹತ್ ಗಾತ್ರದ ನಾಗರ ಹಾವಿಗೆ ವ್ಯಕ್ತಿಯೊಬ್ಬ ಪ್ರೀತಿಯಿಂದ ಸಣ್ಣ ಮಕ್ಕಳಿಗೆ ಸ್ನಾನ ಮಾಡಿಸುವಂತೆ ಶಾಂಪು ಹಚ್ಚಿ ಸ್ನಾನ ಮಾಡಿಸುತ್ತಿದ್ದಾನೆ. ಹಾವು ಈ ಹಾದಿಯಲ್ಲಿದೆ ಅಂದರೆ ಆ ಹಾದಿಯಲ್ಲಿ ಹೋಗುವುದಿರಲಿ, ಆ ಕಡೆ ತಲೆಕೂಡ ಹಾಕದೆ ಮಾರ್ಗವನ್ನೇ ಬದಲಿಸುವ ಜನ ಇದ್ದಾರೆ. ಅಂತಹದರಲ್ಲಿ ವಿಶ್ವದ ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿ ದೈತ್ಯ ಕಾಳಿಂಗ ಸರ್ಪದ ಜೊತೆಗೆ ಸಂಬಂಧಿಯಂತೆ ಕುಳಿತು, ಅದರ ಮುಖ, ಮೈ, ತಲೆಗೆ ಶಾಂಪು ಹಚ್ಚಿ, ಉಜ್ಜಿ ಸ್ನಾನ ಮಾಡಿಸುವುದು ಅಂದರೆ ಸಾಮಾನ್ಯದ ವಿಷಯವೇ? ಇದನ್ನು ನೋಡಿ ಜನರು ಶಾಕ್ ಆದದ್ದೂ ಮಾತ್ರ ನಿಜ.

ಈ ಮೈಜುಮ್ಮೆನಿಸುವ ವಿಡಿಯೋವನ್ನು @DPrasanthNair ಹೆಸರಿನ ಬಳಕೆದಾರ ಅಂಗವರ್ ಶಹಾರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೆಟ್ಟಿಗರ ಬಾಯಲ್ಲಿ ಬೆರಳಿಡುವಂತೆ ಮಾಡಿದ್ದೂ, ಇದುವರೆಗೂ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.