Home latest ಬಂಟ್ವಾಳ : ನಿಷೇಧಿತ ಮಾದಕ ದ್ರವ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ!

ಬಂಟ್ವಾಳ : ನಿಷೇಧಿತ ಮಾದಕ ದ್ರವ್ಯ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಂಧನ!

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾದ ನಿಷೇಧಿತ ಮಾದಕ ದ್ರವ್ಯ ಸೇವಿಸಿ ನಶೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಜಂಕ್ಷನ್ ಬಳಿ ನಡೆದಿದೆ.

ಬಂಧಿತ ಆರೋಪಿ ಸಜೀಪನಡು ನಿವಾಸಿ ಮೊಹಮ್ಮದ್ ಜಾಫರ್ (34) ಎಂದು ತಿಳಿದು ಬಂದಿದೆ.

ಪಿಎಸ್ ಐ ಹರೀಶ್ ಎಂ ಆರ್ ತನ್ನ ಸಿಬ್ಬಂದಿಯ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಸಜೀಪ ಜಂಕ್ಷನ್ ಬಳಿ ಅಮಲಿನಂತೆ ವರ್ತಿಸುತ್ತಿರುವ ವ್ಯಕ್ತಿಯನ್ನು ಕಂಡು ವಿಚಾರಿಸಿದಾಗ, ಈತ ಕಾನೂನು ಬಾಹಿರವಾದ ನಿಷೇಧಿತ ಮಾದಕ ದ್ರವ್ಯ ಸೇವನೆ ಮಾಡಿರುವುದು ತಿಳಿದುಬಂದಿದೆ.

ಬಳಿಕ ಪೊಲೀಸ್ ಸಿಬ್ಬಂದಿ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಈತ ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯರು ದೃಢಪತ್ರ ನೀಡಿದ್ದಾರೆ. ನಂತರ ಈತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.