Home latest ಅನ್ಯಕೋಮಿನ ಯುವಕನ ಜೊತೆ ಪ್ರೀತಿ | ತಂದೆಯಿಂದಲೇ ಮಗಳ ಭೀಕರ ಕೊಲೆ!!!

ಅನ್ಯಕೋಮಿನ ಯುವಕನ ಜೊತೆ ಪ್ರೀತಿ | ತಂದೆಯಿಂದಲೇ ಮಗಳ ಭೀಕರ ಕೊಲೆ!!!

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಕುರುಡು ಎಂಬ ಮಾತಿಗೆ ಅನುಗುಣವಾಗಿ ಅನೇಕ ಜೋಡಿಗಳು ಪೋಷಕರ ಮಾತಿಗೆ ಬೆಲೆ ಕೊಡದೆ ಪ್ರೇಮದ ಬಲೆಯಲ್ಲಿ ಬಿದ್ದು ಸಂಕಷ್ಟಕ್ಕೆ ಸಿಲುಕುವ ಅನೇಕ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.

ಅದರಲ್ಲೂ ಪ್ರೀತಿಸಿದವರು ಅನ್ಯ ಜಾತಿಯವರಾದರೆ ಮನೆಯಲ್ಲಿ ಮಾರಾಮಾರಿ ನಡೆಯುವುದು ಗ್ಯಾರಂಟಿ.ಕೆಲವೊಮ್ಮೆ ಪ್ರೀತಿಯಿಂದ ಮನೆಯವರಿಂದಲೇ ಕೊಲೆಯಾಗುವ ಪ್ರಕರಣಗಳು ಕೂಡ ಇವೆ. ಇದೇ ರೀತಿಯ ಪ್ರಕರಣವೊಂದು ತಡವಾಗಿ ಮುನ್ನಲೆಗೆ ಬಂದಿದೆ.

ತನ್ನ ಮಗಳು ಅನ್ಯ ಕೋಮಿನ ಯುವಕನನ್ನು ಪ್ರೀತಿ (Love) ಮಾಡಿದ ಹಿನ್ನೆಲೆ ತಂದೆಯೇ ಮಗಳನ್ನು ಕೊಲೆ (Murder) ಮಾಡಿರುವ ಘಟನೆ ನಡೆದಿದೆ. ಮಗಳು ಅನ್ಯ ಕೋಮಿನ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ಈ ಬಗ್ಗೆ ಮನೆಯವರಿಗೆ ಗೊತ್ತಾಗುತ್ತಿದ್ದಂತೆಯೇ ಯುವಕನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಮನೆಯವರ ಮಾತನ್ನು ಗಾಳಿಗೆ ತೂರಿ , ಯುವಕನೊಂದಿಗೆ ಪ್ರೀತಿ ಒಡನಾಟ ಮುಂದುವರಿಸುತ್ತಿದ್ದಾಳೆ ಎಂದು ಶಂಕಿಸಿ ತಂದೆ ಮಗಳನ್ನು ಕೊಲೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿಯಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಧ್ಯಾಹ್ನ ಮಗಳಿಗೆ ಸಿನಿಮಾ (Cinema) ತೋರಿಸುವ ನೆಪ ಹೇಳಿ ಬೈಕ್‌ನಲ್ಲಿ ಮನೆಯಿಂದ ಕರೆದುಕೊಂಡು ಹೋಗಿದ್ದ ತಂದೆ ಓಂಕಾರಗೌಡ, ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು. ಹಾಗಾಗಿ, ಅಲ್ಲಿಂದ ಹೊಟೇಲ್‌ಗೆ (Hotel) ಕರೆದೊಯ್ದು ತಿಂಡಿ ತಿನ್ನಿಸಿ, ಬಳಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ್ದಾರೆ.

ಆನಂತರ ಕೊನೆಯದಾಗಿ ಆಭರಣದ ಅಂಗಡಿಯಲ್ಲಿ ಒಂದು ಜೊತೆ ಓಲೆ, ಉಂಗುರವನ್ನೂ ಮಗಳಿಗೆ ಕೊಡಿಸಿದ್ದಾನೆ. ಊರಿಗೆ ಹಿಂದಿರುಗುವ ಹೊತ್ತಿಗೆ ರಾತ್ರಿಯಾಗಿದ್ದು, ಈ ವೇಳೆ ಎಚ್‌ಎಲ್‌ಸಿ ಕಾಲುವೆ ಬಳಿಗೆ ಮಗಳನ್ನು ಕರೆತಂದು, ನೀರಿನಲ್ಲಿ ಮುಳುಗಿಸಿ ತಂದೆ ಮಗಳನ್ನು ಕೊಲೆ ಮಾಡಿದ್ದಾರೆ .

ಅಕ್ಟೋಬರ್ 31 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಬಳಿಕ ತನ್ನ ಮಗಳನ್ನು ಹತ್ಯೆ ಮಾಡಿರುವ ಕುರಿತಾಗಿ ತಂದೆ ಓಂಕಾರಗೌಡ ಪೊಲೀಸರ (Police) ಬಳಿ ತಪ್ಪೊಪ್ಪಿಕೊಂಡಿರುವ ಘಟನೆ ಕೂಡ ನಡೆದಿದೆ.