Home Education ಅರೇ | ಹಾಲ್ ಟಿಕೆಟ್ ನಲ್ಲಿ ಐಶ್ವರ್ಯಾ ರೈ ಚಿತ್ರ | ತನ್ನ ಚಿತ್ರದ...

ಅರೇ | ಹಾಲ್ ಟಿಕೆಟ್ ನಲ್ಲಿ ಐಶ್ವರ್ಯಾ ರೈ ಚಿತ್ರ | ತನ್ನ ಚಿತ್ರದ ಬದಲು ವಿಶ್ವಸುಂದರಿಯ ಫೋಟೋ ನೋಡಿ ದಂಗಾದ ವಿದ್ಯಾರ್ಥಿನಿ..!

Hindu neighbor gifts plot of land

Hindu neighbour gifts land to Muslim journalist

ತಪ್ಪೇ ಮಾಡದವರು ಯಾರವ್ರೆ..ತಪ್ಪೇ ಮಾಡದವರು ಎಲ್ಲವ್ರೇ??? ಹೌದು.. ಮನುಷ್ಯರೇ ಬೇಕಾದಷ್ಟು ಸಲ ತಪ್ಪುಗಳನ್ನು ಮಾಡುವಾಗ ತಾಂತ್ರಿಕವಾಗಿ ಲೋಪ ದೋಷಗಳು ಕಂಡು ಬರುವುದು ಸಾಮಾನ್ಯ.

ಯಾವುದಾದರೂ ಫಿಲ್ಮ್ ನಟಿಯ ಇಲ್ಲವೆ ಹೀರೋ ಜೊತೆಗೆ ಫೋಟೊ ತೆಗೆದುಕೊಳ್ಳಬೇಕು ಎಂಬ ಬಯಕೆ ಇರುವುದು ಸಾಮಾನ್ಯ. ತಾಂತ್ರಿಕ ದೋಷದಿಂದ ಹೆಸರಲ್ಲಿ ಬದಲಾವಣೆ, ಇಲ್ಲವೇ ಜನ್ಮ ದಿನಾಂಕದಲ್ಲಿ ತಪ್ಪಾಗುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಆದರೆ, ಅಂಕಪಟ್ಟಿ ಯಲ್ಲಿ ಅಭ್ಯರ್ಥಿಯ ಹೆಸರು, ಅಥವಾ ಫೋಟೊ ಬದಲು ವಿಶ್ವ ಸುಂದರಿ ಐಶ್ವರ್ಯ ರೈ ಫೋಟೊ ಬಂದರೆ ಅಚ್ಚರಿಯಾಗಿ , ಮೂರ್ಛೆ ಹೋದರು ಅನುಮಾನವಿಲ್ಲ.

ಹೌದು..ಈ ರೀತಿಯ ಪ್ರಕರಣಗಳು ಅಜಾಗರೂಕತೆಯಿಂದ ಲೋ ಅಥವಾ ತಾಂತ್ರಿಕ ದೋಷದಿಂದ ಸಂಭವಿಸುತ್ತಿದೆಯೋ ಎಂಬುದರ ಕುರಿತಾದ ನಿಖರ ಮಾಹಿತಿ ಇಲ್ಲದಿದ್ದರೂ ಕೂಡ ಪ್ರಸಂಗ ನಡೆದಿರುವುದಂತು ಸ್ಪಷ್ಟ. ಕೆಲವು ವಿವಿಯಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿ, ಹಾಲ್ ಟಿಕೆಟ್ ನಲ್ಲಿ ಹಲವು ತಪ್ಪುಗಳು ಕಾಣಸಿಗುತ್ತದೆ.

ಇದೀಗ ಉನ್ನತ ಪದವಿ ವಿದ್ಯಾರ್ಥಿನಿಯ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಫೋಟೋ ಪ್ರಿಂಟ್ ಆಗಿದ್ದು, ವಿದ್ಯಾರ್ಥಿನಿ ಒಂದು ಕ್ಷಣ ದಂಗಾಗಿದ್ದಾರೆ.

ಬಿಹಾರದ ಕೊಯಲಾಂಚಲ್ ವಿಶ್ವವಿದ್ಯಾನಿಲಯದ ಕಾಜಲ್ ಕುಮಾರಿ ಎಂಬುವವರು ಉನ್ನತ ಪದವಿ ಶಿಕ್ಷಣ ಪಡೆಯುತ್ತಿದ್ದು, ಪರೀಕ್ಷೆಯ ಸಲುವಾಗಿ ಹಾಲ್ ​ಟಿಕೆಟ್ ತರಲು ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದಾಗ ವಿವಿಯವರು ನೀಡಿದ ಪರೀಕ್ಷಾ ಪ್ರವೇಶಪತ್ರ ನೋಡಿ ವಿದ್ಯಾರ್ಥಿನಿ ಶಾಕ್​ ಆಗಿದ್ದಾರೆ.

ಈ ಕುರಿತು ವಿವಿ ಕುಲಪತಿ ಎಸ್ ​​ಕೆ ಬಾರನ್ವಾಲ್​ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿನಿ ನೀಡಿದ ಮಾಹಿತಿ ಆಧರಿಸಿ ಅಡ್ಮಿಟ್ ಕಾರ್ಡ್ ನೀಡಿದ್ದಾಗಿ ಜೊತೆಗೆ ತಾಂತ್ರಿಕ ದೋಷದಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸದ್ಯ, ಈ ಹಾಲ್ ಟಿಕೆಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಲು ಆಗ್ರಹ ವ್ಯಕ್ತವಾಗುತ್ತಿದೆ. ಅಭ್ಯರ್ಥಿಗಳು ಮಾಹಿತಿ ನೀಡುವಾಗ ಸರಿಯಾದ ವಿಳಾಸ, ಫೋಟೊ, ಮೂಲ ದಾಖಲೆ ನೀಡಿ, ಪರಿಶೀಲನೆ ನಡೆಸಿಕೊಳ್ಳುವುದು ಉತ್ತಮ. ಇಲ್ಲದೇ ಹೋದರೆ ನಿಮಗೂ ಈ ರೀತಿಯ ಅನುಭವ ಎದುರಾದರೂ ಅಚ್ಚರಿಯಿಲ್ಲ