Home latest ಅಗ್ನಿವೀರ್ ಸೇನೆಗೆ ಸೇರ ಬಯಸಿದಾಕೆ ಪರೀಕ್ಷೆ ತಯಾರಿ ವೇಳೆ ಸಾವು!

ಅಗ್ನಿವೀರ್ ಸೇನೆಗೆ ಸೇರ ಬಯಸಿದಾಕೆ ಪರೀಕ್ಷೆ ತಯಾರಿ ವೇಳೆ ಸಾವು!

Hindu neighbor gifts plot of land

Hindu neighbour gifts land to Muslim journalist

ಅಗ್ನಿವೀರ್​​ ನೇಮಕಾತಿಗಾಗಿ ಅದೆಷ್ಟೋ ಅಭ್ಯರ್ಥಿಗಳು ಸತತ ಪ್ರಯತ್ನ ಪಡುತ್ತಲೇ ಇದ್ದಾರೆ. ಇದೇ ರೀತಿ ಅಗ್ನಿವೀರ್​​​ ದೈಹಿಕ ಪರೀಕ್ಷೆಗೋಸ್ಕರ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಓಡುತ್ತಿದ್ದಾಗ ಹಠಾತ್​ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

ಘಿರೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಲಾಲ್​ಪುರ ಗ್ರಾಮದ ಸುರೇಶ್ ಚೌಹಾಣ್ ಅವರ ಪುತ್ರಿ ಶ್ವೇತಾ ಚೌಹಾಣ್​(19) ಸಾವನ್ನಪ್ಪಿರುವ ವಿದ್ಯಾರ್ಥಿನಿ.

ಅಗ್ನಿಪಥ್​ ಯೋಜನೆಯಡಿ ನಡೆಯುತ್ತಿದ್ದ ನೇಮಕಾತಿಗೋಸ್ಕರ ಆಕೆ ತಯಾರಿ ನಡೆಸಿದ್ದಳು. ಉತ್ತರ ಪ್ರದೇಶದ ಮೈನ್​​ಪುರಿಯಲ್ಲಿ ಅಭ್ಯಾಸಕ್ಕಾಗಿ ಓಡುತ್ತಿದ್ದಾಗ ಏಕಾಏಕಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರು ಈ ವೇಳೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಮೈನ್​​ಪುರಿ ಜಿಲ್ಲೆಯ ಘಿರೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 12ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಈಕೆ ಸೇನೆಗೆ ಸೇರಬೇಕೆಂದು ಕನಸು ಕಾಣುತ್ತಿದ್ದಳೆಂದು ಪೋಷಕರು ತಿಳಿಸಿದ್ದು, ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.