Home Education Scholarship : ವಿದ್ಯಾರ್ಥಿ ವೇತನ | ಆದಿತ್ಯಾ ಬಿರ್ಲಾ, ಕೋಟಕ್ ನಿಂದ ಸ್ಕಾಲರ್ ಶಿಪ್ |...

Scholarship : ವಿದ್ಯಾರ್ಥಿ ವೇತನ | ಆದಿತ್ಯಾ ಬಿರ್ಲಾ, ಕೋಟಕ್ ನಿಂದ ಸ್ಕಾಲರ್ ಶಿಪ್ | ವಿದ್ಯಾರ್ಥಿಗಳಿಗೆ ಸಿಗಲಿದೆ ರೂ.60,000/- ಹಣ!!!

Hindu neighbor gifts plot of land

Hindu neighbour gifts land to Muslim journalist

ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ತನ್ನ ಸಾಮಾಜಿಕ ಕಳಕಳಿ ಮೂಲಕವೂ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ದೇಶದಲ್ಲಿ ಕಾಣಿಸಿಕೊಂಡ ಕೋರೋನಾ ಮಹಾಮಾರಿಯ ಅಲೆಗೆ ಇಡೀ ದೇಶವೇ ಕಂಗೆಟ್ಟಿದ್ಧು ತಿಳಿದ ವಿಷಯವೇ!! ಈ ನಡುವೆ ಕೋವಿಡ್‌-19ನಿಂದಾಗಿ ಪೋಷಕರನ್ನು ಕಳೆದುಕೊಂಡ ಪದವಿಪೂರ್ವ ಹಂತದವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ, ತಮ್ಮ ಶಿಕ್ಷಣ ಮುಂದುವರಿಸಲು ಬೆಂಬಲ ನೀಡುವುದಕ್ಕಾಗಿ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ಈ ಸ್ಕಾಲರ್‌ಷಿಪ್‌ ಪ್ರೋಗ್ರಾಂ ಪ್ರಾರಂಭ ಮಾಡಿದೆ.

ಈ ಸ್ಕಾಲರ್‌ಷಿಪ್‌ಗಾಗಿ ಬೇಕಾದ ಅರ್ಹತೆಯು ಹೀಗಿದೆ:

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಪೋಷಕರನ್ನು ತಂದೆ ಅಥವಾ ತಾಯಿ ಅಥವಾ ಇಬ್ಬರನ್ನು ಕೂಡ ಕಳೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು 1 ರಿಂದ 12 ನೇ ತರಗತಿ ಮತ್ತು ಪದವಿಪೂರ್ವ (ಸಾಮಾನ್ಯ ಮತ್ತು ವೃತ್ತಿಪರ) ಕೋರ್ಸ್‌ಗಳಿಗೆ ದಾಖಲಾಗಿ, ಓದು ಮುಂದುವರಿಸಿರಬೇಕು. ಇದಕ್ಕಾಗಿ ₹60,000ವರೆಗೆ ನಿಗದಿಯಾದ ಒಂದು ಬಾರಿಯ ವಿದ್ಯಾರ್ಥಿವೇತನದ ಆರ್ಥಿಕ ನೆರವನ್ನು ನೀಡಲಾಗುತ್ತದೆ.

ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಕೆ ಮಾಡಲು 10-11-2022 ಕೊನೆ ದಿನವಾಗಿದೆ.ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಕೆ ಆನ್‌ಲೈನ್ ಮೂಲಕ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ www.b4s.in/praja/ABCC3 ವೆಬ್ಸೈಟ್ ಗೆಭೇಟಿ ನೀಡಬಹುದು.

ಇದರ ಜೊತೆಗೆ ಕೋಟಕ್ ಕನ್ಯಾ ಸ್ಕಾಲರ್‌ಷಿಪ್ ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಯೋಜನೆಯಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್‌ನಿಂದ 12 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗಾಗಿ ಈ ಸ್ಕಾಲರ್‌ಷಿಪ್‌ ಕಾರ್ಯಕ್ರಮವನ್ನು ರೂಪಿಸಿದೆ.

ಸಮಾಜದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೃತ್ತಿಪರ ಪದವಿ ಕೋರ್ಸ್‌ ಕಲಿಯಲು ನೆರವಾಗುವ ಉದ್ದೇಶದಿಂದ ಈ ಸ್ಕಾಲರ್‌ಷಿಪ್ ಯೋಜನೆ ರೂಪಿಸಲಾಗಿದೆ.

ಈ ಸ್ಕಾಲರ್‌ಷಿಪ್ ಗಾಗಿ, ಪ್ರತಿಷ್ಠಿತ ಸಂಸ್ಥೆಗಳಿಂದ (ಎನ್‍ಎ‍ಎಸಿ/ಎನ್‌‍ಐಆರ್‌‌‍ಎಫ್ ಮಾನ್ಯತೆ ಪಡೆದ) ವೃತ್ತಿಪರ ಕೋರ್ಸ್‌ಗಳಲ್ಲಿ ಮೊದಲ ವರ್ಷದ ಪದವಿಗೆ ಪ್ರವೇಶ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ.

ವೃತ್ತಿಪರ ಕೋರ್ಸ್‌ಗಳಲ್ಲಿ ಎಂಜಿನಿಯರಿಂಗ್, ಎಂಬಿಬಿಎಸ್, ಆರ್ಕಿಟೆಕ್ಚರ್, ಡಿಸೈನ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಇತ್ಯಾದಿ ವೃತ್ತಿಪರ ಪದವಿ ಕೋರ್ಸ್‌ಗಳು ಸೇರಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಈ ಸ್ಕಾಲರ್‌ಷಿಪ್ ಗೆ ಅರ್ಜಿ ಸಲ್ಲಿಸಲು ಅರ್ಹತೆ ಪರಿಗಣಿಸುವುದಾದರೆ, ಅರ್ಜಿದಾರರು 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಶೇ 75 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅಲ್ಲದೆ, ಕುಟುಂಬದ ವಾರ್ಷಿಕ ವರಮಾನ ₹ 3.20 ಲಕ್ಷ ಮೀರಿರಬಾರದು.

ವಾರ್ಷಿಕ ರೂ.1.5 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ( ಪ್ರತಿ ವರ್ಷ ವಿದ್ಯಾರ್ಥಿವೇತನದ ನವೀಕರಣವು ಕೋಟಕ್ ಶಿಕ್ಷಣ ಪ್ರತಿಷ್ಠಾನದ ಸ್ವಂತ ವಿವೇಚನೆಯಾಗಿದೆ)ಈ ಸ್ಕಾಲರ್‌ಷಿಪ್ ಗೆ ಅರ್ಜಿ ಸಲ್ಲಿಕೆ ಮಾಡಲು 30-11-2022 ಕೊನೆ ದಿನವಾಗಿದೆ.

ಈ ಸ್ಕಾಲರ್‌ಷಿಪ್ ಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆನ್‌ಲೈನಲ್ಲಿ ಅರ್ಜಿ ಹಾಕಬೇಕಾಗಿದೆ. ಈ ಸ್ಕಾಲರ್‌ಷಿಪ್ ಕುರಿತ ಹೆಚ್ಚಿನ ವಿವರಗಳಿಗೆ www.b4s.in/praja/KKGS12 ವೆಬ್ಸೈಟ್ ಭೇಟಿ ನೀಡಬೇಕು. ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.