Home News Accident: ಟ್ರಕ್‌-ಟೆಂಪೋ ನಡುವೆ ಭೀಕರ ಅಪಘಾತ! 5 ಮಂದಿ ಸಾವು, 10 ಜನರಿಗೆ ಗಾಯ, ನಾಲ್ವರ...

Accident: ಟ್ರಕ್‌-ಟೆಂಪೋ ನಡುವೆ ಭೀಕರ ಅಪಘಾತ! 5 ಮಂದಿ ಸಾವು, 10 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ!

Accident
Image source : Steam

Hindu neighbor gifts plot of land

Hindu neighbour gifts land to Muslim journalist

Accident: ಟ್ರಕ್‌ ಮತ್ತು ಟೆಂಪೋ ನಡುವೆ ಭೀಕರ ಅಪಘಾತವೊಂದು (Accident) ನಡೆದಿದ್ದು ಈ ಭೀಕರ ಘಟನೆಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಹಾಗೂ ಹತ್ತು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ಭೀಕರ ಅಪಘಾತ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು ತಮ್ಮ ಕುಟುಂಬ ಕಾರ್ಯಕ್ರಮವೊಂದನ್ನು ಮುಗಿಸಿ ವಾಪಾಸ್‌ ಅಹಿರಾನ್‌ಪುರಕ್ಕೆ ಟೆಂಪೋದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ರಾಂಗ್‌ ರೂಟ್‌ನಿಂದ ಬಂದ ಟ್ರಕ್‌ ಡಿಕ್ಕಿ ಹೊಡೆದಿದೆ.

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಿನ್ನೆ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ. ಹತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಗೊಂಡವರನ್ನು ಭಗವಾನ್ ಪ್ರಸಾದ್ (40), ಅನಿಲ್ (15), ಖುಷ್ಭು (35), ಹರೀಶ್ (45) ಮತ್ತು ಜೈ ಕರಣ್ (40) ಎಂದು ಗುರುತಿಸಲಾಗಿದೆ. ಅವರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂದರ್ಭ ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.  ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.