Home Interesting ತನ್ನ ತಲೆಯಿಂದಲೇ ಚಲಿಸುತ್ತಿದ್ದ ಬಸ್ಸಿಗೆ ಡಿಚ್ಚಿ ಹೊಡೆದ ವ್ಯಕ್ತಿ | ಈತನ ವರ್ತನೆಗೆ ಬೆಚ್ಚಿಬಿದ್ದ ಮಂದಿ...

ತನ್ನ ತಲೆಯಿಂದಲೇ ಚಲಿಸುತ್ತಿದ್ದ ಬಸ್ಸಿಗೆ ಡಿಚ್ಚಿ ಹೊಡೆದ ವ್ಯಕ್ತಿ | ಈತನ ವರ್ತನೆಗೆ ಬೆಚ್ಚಿಬಿದ್ದ ಮಂದಿ | ವೀಡಿಯೊ ವೈರಲ್!

Hindu neighbor gifts plot of land

Hindu neighbour gifts land to Muslim journalist

ಮನುಷ್ಯ ತಾನು ಒಂದಲ್ಲ ಒಂದು ರೀತಿಯಲ್ಲಿ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಹರ ಸಾಹಸ ಪಡುತ್ತಾನೆ. ಕೆಲವೊಮ್ಮೆ ಒಳ್ಳೆ ವಿಷಯಗಳಿಂದ ಪ್ರಚಾರ ಸಿಕ್ಕರೆ ಕೆಲವೊಮ್ಮೆ ಕೆಟ್ಟ ವಿಚಾರಕ್ಕೂ ಪ್ರಚಾರ ಸಿಗುತ್ತದೆ. ಆದರೆ ಇಲ್ಲೊಬ್ಬ ಏನ್ ಮಾಡಿದ್ದಾನೆ ನೀವೇ ನೋಡಿ.

ಬಹುಷಃ ಸಿನಿಮಾಗಳಲ್ಲಿ ಒಂದಷ್ಟು ಜನ ಬಂದು ಜಿಗಿದು ವಾಹನಗಳ ಗಾಜು ಒಡೆಯುವ ದೃಶ್ಯವನ್ನು ಹೆಚ್ಚಾಗಿ ನೋಡಿರುತ್ತೇವೆ. ನಿಜ ಜೀವನದಲ್ಲಿ ಈ ರೀತಿ ಮಾಡಲು ಅಷ್ಟು ಸುಲಭವಲ್ಲ. ಅದಕ್ಕಾಗಿ ಎದೆಯಲ್ಲಿ ಗುಂಡಿಗೆ ಬೇಕು. ಪ್ರಾಣದ ಆಸೆ ಬಿಡಬೇಕು. ಅಲ್ಲಿ ಸ್ವಲ್ಪ ಎಡವಟ್ಟಾದರೂ ಪ್ರಾಣವೇ ಹೋಗಬಹುದು. ಆದರೆ ಇಲ್ಲೊಬ್ಬ ಯುವಕ ತನ್ನ ಎದುರಿಗೆ ಬರುತ್ತಿದ್ದ ಬಸ್ ಒಂದರ ಗಾಜನ್ನು ಓಡಿ ಬಂದು ಜಿಗಿದು ತಲೆಯಿಂದಲೇ ಪುಡಿ ಪುಡಿ ಮಾಡಿರುವ ಭಯಾನಕ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂತಲಮನ್ನಾ ಪಟ್ಟಣದಲ್ಲಿ ನಡೆದಿದೆ.

ಜುಬಿಲಿ ಜಂಕ್ಷನ್ ನಿಂದ ಬಸ್ ಒಂದು ಮಂಕಡಾ ಕಡೆಗೆ ತೆರಳುತ್ತಿತ್ತು. ಈ ವೇಳೆ ಬಸ್ ಎದುರಿಗೆ ಯುವಕ ಓಡಿ ಬಂದು, ಮೇಲಕ್ಕೆ ಜಿಗಿದು ತಲೆಯಿಂದ ಡಿಕ್ಕಿ ಹೊಡೆದು ವಿಂಡ್‌ ಶೀಲ್ಡ್ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಬಸ್ ಗುದ್ದಿದ ರಭಸಕ್ಕೆ ಯುವಕನು ಕೂಡ ಕೊಂಚ ದೂರ ಹಾರಿ ಬಿದ್ದಿದ್ದಾನೆ. ಕೆಲ ಸೆಕೆಂಡ್ ಗಳ ಕಾಲ ನೆಲದ ಮೇಲೆಯೇ ಬಿದ್ದಿದ್ದ ಯುವಕ, ಬಳಿಕ ಎದ್ದು ಬಂದು ಬಸ್ ಏರಿದ್ದಾನೆ. ಡ್ರೈವರ್ ಸೀಟ್ ಮೇಲೆ ಕುಳಿತು ತನ್ನ ಎರಡೂ ಕಾಲುಗಳನ್ನು ಸ್ಟೀರಿಂಗ್ ಮೇಲೆ ಇಟ್ಟು ಕೆಲಕಾಲ ಬಸ್‌ನಲ್ಲಿದ್ದವರನ್ನು ಪೀಡಿಸಿದ್ದಾರೆ.

ಅರೆ ಬೆತ್ತಲೆಯ ಸ್ಥಿತಿಯಲ್ಲಿದ್ದ ಯುವಕ ಓಡಿ ಬಂದು ಬಸ್‌ನ ವಿಂಡ್‌ಶೀಲ್ಡ್ ಗಾಜನ್ನು ತಲೆಯಿಂದ ಪುಡಿ ಪುಡಿ ಮಾಡಿದ್ದಲ್ಲದೆ, ಬಸ್ ಒಳಗೆ ಏರಿ ಡ್ರೈವರ್ ಸೀಟ್ ಮೇಲೆ ಕೆಲ ಕಾಲ ಕುಳಿತು ಪೀಡಿಸಿದ್ದಾನೆ.

ಪೆರಿಂತಲಮನ್ನಾದ ಅಂಗಡಿಪ್ಪುರಂನಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.

ಪ್ರಸ್ತುತ ಯುವಕನನ್ನು ಮಾನಸಿಕ ಅಸ್ವಸ್ಥ ಎಂದು ನಂಬಲಾಗಿದೆ. ಈ ಮುಂಚೆ ಚಿಕಿತ್ಸೆ ಪಡೆದುಕೊಂಡಿದ್ದ. ಆತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಯುವಕನ ಕುಟುಂಬಸ್ಥರು ಕೋಯಿಕ್ಕೋಡ್ ಆಸ್ಪತ್ರೆಗೆ ಆತನನ್ನು ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ವಿಡಿಯೋ ನೋಡಿದ ವೀಕ್ಷಕರ ಎದೆ ಜಲ್ಲೆನ್ನುವುದರಲ್ಲಿ ಸಂಶಯವಿಲ್ಲ.