Home News 94ಸಿ ಅವಧಿ ಮಾರ್ಚ್ 2023ರವರೆಗೆ ವಿಸ್ತರಣೆ | ಅಳತೆಗೂ ಮೀರಿ‌ ಮನೆ ನಿರ್ಮಿಸಿದರೆ ಪರಿಶೀಲಿಸಿ ಸಕ್ರಮ

94ಸಿ ಅವಧಿ ಮಾರ್ಚ್ 2023ರವರೆಗೆ ವಿಸ್ತರಣೆ | ಅಳತೆಗೂ ಮೀರಿ‌ ಮನೆ ನಿರ್ಮಿಸಿದರೆ ಪರಿಶೀಲಿಸಿ ಸಕ್ರಮ

Hindu neighbor gifts plot of land

Hindu neighbour gifts land to Muslim journalist

ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ವಾಸದ ಮನೆಗಳನ್ನು ನಿರ್ಮಿಸಿರುವವರಿಗೆ ಅದನ್ನು ಸಕ್ರಮಗೊಳಿಸಲು ಭೂಕಂದಾಯ ಕಾಯ್ದೆ 1964ರ ಕಲಂ `94ಸಿ’ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು 2021ರ ಮಾರ್ಚ್ 31ರಿಂದ 2022ರ ಮಾಚ್ 31ರ ವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ವಿಧಾನ ಸಭಾ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾಹಿತಿ ನೀಡಿದರು.

ಅಲ್ಲದೆ ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಲು 2023ರ ಮಾರ್ಚ್ 31ರ ವರೆಗೂ ಅವಕಾಶ ಇರುತ್ತದೆ. 30-40 ಅಡಿ, 40-60 ಅಡಿ, 50-80 ಅಡಿ ಅಳತೆಯ ವಾಸದ ಮನೆಗಳನ್ನು ಸಕ್ರಮಗೊಳಿಸಲಾಗುವುದು. ಈ ಅಳತೆಗೂ ಮೀರಿ ಮನೆ ನಿರ್ಮಿಸಿಕೊಂಡಿದ್ದರೆ ಅದನ್ನು ಪರಿಶೀಲಿಸಿ ಸಕ್ರಮಗೊಳಿಸಲು ಸರಕಾರ ಸಿದ್ಧವಿದೆ ಎಂದರು.