Home latest Telangana: ಗಂಡನ ವಿರುದ್ಧ ಕಂಪ್ಲೇಂಟ್ ಕೊಡೋಕೆ ಬಂದ 23ರ ಹೆಂಡತಿ – ಬಲೆಗೆ ಬೀಳಿಸಿಕೊಂಡ ASI...

Telangana: ಗಂಡನ ವಿರುದ್ಧ ಕಂಪ್ಲೇಂಟ್ ಕೊಡೋಕೆ ಬಂದ 23ರ ಹೆಂಡತಿ – ಬಲೆಗೆ ಬೀಳಿಸಿಕೊಂಡ ASI !!

Telangana

Hindu neighbor gifts plot of land

Hindu neighbour gifts land to Muslim journalist

Telangana: ಪೋಲೀಸರು ನಮ್ಮನ್ನು ಕಾಪಾಡಾಲು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸರಿದಾರಿಯಲ್ಲಿ ನಡೆಸಲು ಇರುವವರು. ಆದರೆ ಅವರೇ ದುಷ್ಟರಾದರೆ ಹೇಗೆ? ಬೇಲಿಯೇ ಎದ್ದು ಹೊಲ ಮೆಯ್ದಂತಲ್ಲವೇ? ಇಂತಹದ್ದೇ ಒಂದು ವಿಚಿತ್ರ ಘಟನೆ ಇದೀಗ ತೆಲಂಗಾಣದ ಇಬ್ರಾಹಿಂಪಟ್ಟಣ ಮಂಡಲದಲ್ಲಿ ನಡೆದಿದೆ.

ಹೌದು, ತೆಲಂಗಾಣದ(Telangana) ವರ್ಷಕೊಂಡ ಗ್ರಾಮದ 23 ವರ್ಷದ ಯುವತಿಯೊಬ್ಬಳು ತನ್ನ ಗಂಡ ಕಿರುಕುಳ ನೀಡುತ್ತಿದ್ದಾನೆಂದು ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ದೂರು ದಾಖಲಿಸಿದ್ದಳು. ಇಂತಹ ಪ್ರಕರಣಗಳಲ್ಲಿ ಗಂಡ-ಹೆಂಡತಿ ಇಬ್ಬರನ್ನು ಠಾಣೆಗೆ ಕರೆಯಿಸಿ ಆಪ್ತ ಸಮಾಲೋಚನೆ ನೀಡುವುದು ಸಾಮಾನ್ಯ. ಅಂತೆಯೇ ಇಲ್ಲಿಯೂ ಮಾಡಲಾಯಿತು.

ಆದರೆ ಯುವತಿಯಿಂದ ಪ್ರಕರಣ ದಾಖಲಿಸಿಕೊಳ್ಳುವ ಸಮಯದಲ್ಲಿ ಠಾಣೆಯಲ್ಲಿ 53 ವರ್ಷದ ಎಎಸ್‌ಐ ರಾಮುಲು ಹಾಜರಿದ್ದದ್ದೇ ಇಲ್ಲಿ ದೊಡ್ಡ ಸಮಸ್ಯೆ. ಯುವತಿಯ ಗಂಡನನ್ನು ಕರೆದು ಬುದ್ದಿವಾದ ಹೇಳಿದ್ದರೂ ಕೂಡ ಗಂಡನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಪ್ರತಿದಿನ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇತ್ತು. ಇದರಿಂದ ಬೇಸತ್ತಿದ್ದ ಯುವತಿ ಆಗಾಗ ಠಾಣೆಗೆ ಬಂದು ದೂರು ನೀಡುವುದು ಸಾಮಾನ್ಯವಾಗಿತ್ತು. ಈ ವೇಳೆ ದುಷ್ಟ ರಾಮುಲು ಕಣ್ಣು ಯುವತಿಯ ಮೇಲೆ ನೆಟ್ಟಿಬಿಟ್ಟಿತು.

ವಿಚಾರಣೆ ನೆಪದಲ್ಲಿ ಯುವತಿ ಮತ್ತು ಆಕೆಯ ಗಂಡನನ್ನು ಠಾಣೆ ಕರೆಸಿಕೊಳ್ಳುತ್ತಿದ್ದ ರಾಮುಲು ಆಕೆಗೆ ಹತ್ತಿರವಾದರು ಮತ್ತು ಸಲುಗೆಯು ಬೆಳೆಯಿತು. ಈ ವಿಚಾರ ಉನ್ನತ ಅಧಿಕಾರಿಗಳ ಘಮನಕ್ಕೆ ಬಂದರೂ ಶೀಘ್ರದಲ್ಲೇ ಎಎಸ್‌ಐ ರಾಮುಲು ನಿವೃತ್ತಿಯಾಗುತ್ತಿದ್ದರಿಂದ ಉನ್ನತ ಅಧಿಕಾರಿಗಳಿಗೆ ದೂರು ನೀಡದೆ, ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಬೈದು ಬುದ್ದಿವಾದ ಹೇಳಲಾಗಿತ್ತು.

ಆದರೂ ಎಎಸ್‌ಐ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣಲಿಲ್ಲ. ಕಳೆದ ಎರಡು ದಿನಗಳಿಂದ ಯುವತಿಯ ಜತೆಯಲ್ಲಿ ಎಎಸ್‌ಐ ರಾಮುಲು ತುಂಬಾ ಸಲುಗೆಯಿಂದ ಇರುವ ಖಾಸಗಿ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಇದು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಉನ್ನತ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಸದ್ಯ ಎಎಸ್‌ಐ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.