Home latest Killer mother : ತಾಯಿ ಮಗುವನ್ನು ಕೊಂದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್- ಕಿಲ್ಲರ್ ಅಮ್ಮ ಟಿಶ್ಯೂ...

Killer mother : ತಾಯಿ ಮಗುವನ್ನು ಕೊಂದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್- ಕಿಲ್ಲರ್ ಅಮ್ಮ ಟಿಶ್ಯೂ ಪೇಪರ್ ಅಲ್ಲಿ ಬರೆದ ರೋಚಕ ಸತ್ಯ ಬಹಿರಂಗ !!

Killer mother

Hindu neighbor gifts plot of land

Hindu neighbour gifts land to Muslim journalist

Killer mother : ಕಂಪನಿಯೊಂದರ ಸಿಇಓ ಸುಚನಾ ಸೇಠ್ (Suchana Seth) ತನ್ನದೇ ಮಗುವನ್ನು ಗೋವಾದ ಹೋಟೆಲ್‍ನಲ್ಲಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಚಿತ್ರದುರ್ಗ (Chitradurga) ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಈಕೆಯನ್ನು ಸುಲಭವಾಗಿ ಪೊಲೀಸರ ಕೈಗೊಪ್ಪಿಸಲು ಸಹಾಯ ಮಾಡಿದ್ದು ಕ್ಯಾಬ್‌ ಡ್ರೈವರ್‌ ರೇಜಾನ್‌ ಡಿಸೋಜಾ. ಇದೀಗ ಈ ಡ್ರೈವರ್ ಸುಚನಾ ಸೇಠ್ ಬಗ್ಗೆ ಮಾತನಾಡಿದ್ದಾರೆ.

ಹೌದು, ಕಿಲ್ಲರ್ ಅಮ್ಮ(Killer mother ) ಸುಚನಾ ಐ ಲೈನರ್ ಅಥವಾ ಕಾಜಲ್ ಪೆನ್ಸಿಲ್ ಬಳಸಿ ಟಿನ್ಯೂ ಪೇಪರ್ ಮೇಲೆ ಡೆತ್‌ನೋಟ್ ಬರೆದಿದ್ದು, ಇದೀಗ ತನಿಖಾಧಿಕಾರಿಗಳ ಕೈಗೆ ಆ ನೋಟ್ ಸಿಕ್ಕಿದೆ. ಇದರಿಂದಾಗಿ ಇಡೀ ಪ್ರಕರಣಕ್ಕೆ ಇದು ಮಹತ್ವದ ತಿರುವು ನೀಡಲಿದೆ. ಹರಿದ ಪೇಪರ್ ತುಂಡುಗಳನ್ನು ಜೋಡಿಸಿ, ಅದರಲ್ಲಿರುವ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ. ಈ ಡೆತ್‌ನೋಟ್ ಸುಚನಾಳ ಮಾನಸಿಕ ಸ್ಥಿತಿ ಏನು ಎಂಬುದನ್ನು ವಿವರಿಸಲಿದ್ದು, ಇದರಿಂದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bigg Boss 10: ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೋಗುವುದಿಲ್ವಂತೆ! ಅರೇ, ಯಾಕೆ!?

ಡೆತ್‌ನೋಟ್‌ನಲ್ಲಿ ಏನು ಬರೆದಿದೆ?

• ವೈವಾಹಿಕ ಜೀವನದ ವೈಫಲ್ಯ ಅಥವಾ ಗಂಡನಿಂದ ಬೇರೆಯಾಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದೇನೆ.

• ಡಿವೋರ್ಸ್ ಪ್ರಕ್ರಿಯೆ ಇನ್ನೇನು ಆರಂಭವಾಗಲಿದೆ.

• ನ್ಯಾಯಾಲಯವು ಡಿವೋರ್ಸ್ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ.

• ಗಂಡ ಮತ್ತು ಆತನ ಕುಟುಂಬ ಮಗನನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಕೋರುತ್ತಾರೆ.

• ನನ್ನ ಮಗ ಆತನ ತಂದೆ ಮತ್ತು ತಂದೆಯ ಕುಟುಂಬದೊಂದಿಗೆ ಇರಲು ನಾನು ಬಯಸುವುದಿಲ್ಲ.

• ಹೀಗಾಗಿ ನನ್ನ ಮಗನನ್ನು ನಾನು ಒಳ್ಳೆಯ ಸ್ಥಳಕ್ಕೆ ಕಳುಹಿಸಿದ್ದೇನೆ.

ಏನಿದು ಪ್ರಕರಣ?

ಸುಚನಾ ಸೇಠ್ ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನು ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಹೊಟೇಲ್ ಸಿಬ್ಬಂದಿ ಹಾಗೂ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ (Chitradurga) ಪೊಲೀಸರಿಗೆ (Police) ಒಪ್ಪಿಸಲಾಗಿತ್ತು. ಮಹಿಳೆಯ ಸೂಟ್‍ಕೇಸ್ ಪರಿಶೀಲಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.