Home latest ಅಗತ್ಯ ಬಿದ್ದರೆ ಕಾಂಗ್ರೆಸ್ ನಾಯಕರ ಮನೆಯಂಗಳದಲ್ಲಿ ರಾರಾಜಿಸಲಿದೆ ಸಾವರ್ಕರ್ ಭಾವಚಿತ್ರ!! ಗುಡುಗಿದ ಬಿಜೆಪಿ ಮುಖಂಡ ಸುವರ್ಣ!!

ಅಗತ್ಯ ಬಿದ್ದರೆ ಕಾಂಗ್ರೆಸ್ ನಾಯಕರ ಮನೆಯಂಗಳದಲ್ಲಿ ರಾರಾಜಿಸಲಿದೆ ಸಾವರ್ಕರ್ ಭಾವಚಿತ್ರ!! ಗುಡುಗಿದ ಬಿಜೆಪಿ ಮುಖಂಡ ಸುವರ್ಣ!!

Hindu neighbor gifts plot of land

Hindu neighbour gifts land to Muslim journalist

ಉಡುಪಿ:ಭಾರತದ ಸ್ವಾತಂತ್ರ್ಯ ಸಂದರ್ಭ ಜಿನ್ನಾ ದೇಶ ವಿಭಜನೆ ಮಾಡಿದ್ದು, ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಕೆಲಸ ಮಾಡುತ್ತಿದ್ದಾರೆ. ಸದಾ ಅರಳು ಮರಳು ಮಾತನಾಡುವ ಸಿದ್ದರಾಮಯ್ಯನವರ ಮನೆ ಅಂಗಳದಲ್ಲಿಯೂ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಹಾಗೂ ಸಾವರ್ಕರ್ ದೇಶಭಕ್ತಿಯನ್ನು ಕಾಂಗ್ರೆಸ್ಸಿಗರಿಗೆ ತೋರಿಸಿಕೊಡುತ್ತೇವೆ ಎಂದು ಉಡುಪಿ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಹೇಳಿದರು.

ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಪಿ.ಎಫ್.ಐ ದೇಶದ ಅನಾಗರಿಕ ಸಂಘಟನೆಯಾಗಿದ್ದು,ಕಾಂಗ್ರೆಸ್ ಪಕ್ಷವು ಡೋಂಗಿ ರಾಷ್ಟ್ರಭಕ್ತರನ್ನು ಇಟ್ಟುಕೊಂಡಿದೆ ಎಂದರು.

ಬಳಿಕ ಮಾತನಾಡಿದ ಅವರು ಇಂದು ಉಡುಪಿಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಭಾವಚಿತ್ರ ಹಾಕಿದ್ದೇವೆ. ಮುಂದೆ ಅಗತ್ಯ ಬಿದ್ದರೆ ಪ್ರತಿಯೊಬ್ಬ ಕಾಂಗ್ರೆಸ್ ಮುಖಂಡರ ಮನೆಯ ಅಂಗಳದಲ್ಲಿ ಸಾವರ್ಕರ್ ಭಾವಚಿತ್ರ ಹಾಕಲು ತಯಾರಾಗಿದ್ದೇವೆ ಎಂದರು.