Home Interesting ತನ್ನ ಸಿಬ್ಬಂದಿಗಳನ್ನೇ ಲಾಕ್ ಅಪ್ ಗೆ ತಳ್ಳಿದ ಹಿರಿಯ ಅಧಿಕಾರಿ!! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!!

ತನ್ನ ಸಿಬ್ಬಂದಿಗಳನ್ನೇ ಲಾಕ್ ಅಪ್ ಗೆ ತಳ್ಳಿದ ಹಿರಿಯ ಅಧಿಕಾರಿ!! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!!

Hindu neighbor gifts plot of land

Hindu neighbour gifts land to Muslim journalist

ಕರ್ತವ್ಯದಲ್ಲಿ ಲೋಪವೆಸಗಿದ್ದಾರೆ ಎನ್ನುವ ಕಾರಣಕ್ಕೆ ತನ್ನ ಕೆಳಗಿನ ಪೊಲೀಸ್ ಅಧಿಕಾರಿಗಳನ್ನು ಲಾಕ್ಅಪ್ ನಲ್ಲಿ ಕೂಡಿಹಾಕಿದ ಅಪರೂಪದ ಘಟನೆಯೊಂದು ಬಿಹಾರದಲ್ಲಿ ನಡೆದಿದ್ದು, ಈ ಬಗೆಗಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಹಾರದ ನವಾಡ ಜಿಲ್ಲಾ ಪೊಲೀಸ್ ಅಧಿಕ್ಷಕ ಗೌರವ್ ಮಂಗ್ಲಾ ಅವರೇ ಈ ರೀತಿಯ ಶಿಕ್ಷೆ ವಿಧಿಸಿ ಸಿಬ್ಬಂದಿಗಳ ಹಾಗೂ ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಗುರಿಯಾದ ಅಧಿಕಾರಿಯಾಗಿದ್ದಾರೆ.

ಕಳೆದ ರಾತ್ರಿ ಅನಿರೀಕ್ಷಿತವಾಗಿ ಠಾಣೆಗೆ ಆಗಮಿಸಿದ್ದ ವೇಳೆ ಕಿರಿಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು, ಇದರಿಂದ ಕೋಪಗೊಂಡ ಎಸ್ಪಿ ತಪ್ಪು ಮಾಡಿದವರನ್ನು ಲಾಕ್ಅಪ್ ನಲ್ಲಿರಿಸಲು ಸೂಚಿಸಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್.ಐ ಸಹಿತ ಐವರನ್ನು ಲಾಕ್ ಅಪ್ ನಲ್ಲಿರಿಸಲಾಗಿತ್ತು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.