Home Health Butt Acne :ಹಿಂಬದಿ ಆಗೋ ಮೊಡವೆ, ಕಜ್ಜಿಗಳಿಂದ ರೋಸಿ ಹೋಗಿದ್ದೀರಾ ? ಇಲ್ಲಿದೆ ಸುಲಭ ಪರಿಹಾರ

Butt Acne :ಹಿಂಬದಿ ಆಗೋ ಮೊಡವೆ, ಕಜ್ಜಿಗಳಿಂದ ರೋಸಿ ಹೋಗಿದ್ದೀರಾ ? ಇಲ್ಲಿದೆ ಸುಲಭ ಪರಿಹಾರ

Butt Acne

Hindu neighbor gifts plot of land

Hindu neighbour gifts land to Muslim journalist

Butt Acne: ದೇಹದಲ್ಲಿ ಹಲವಾರು ಕಡೆ ನಾನಾ ಕಾರಣಗಳಿಂದ ಮೊಡವೆ ಹುಟ್ಟಿಕೊಳ್ಳುತ್ತವೆ. ಇನ್ನು ಆಗಬಾರದ ಜಾಗದಲ್ಲಿ ಮೊಡವೆ ಹುಟ್ಟಿಕೊಂಡರೆ ನರಕ ಯಾತನೆ ಗ್ಯಾರಂಟಿ. ಹೌದು, ಹಿಂಭಾಗದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದನ್ನು ಬಟ್ ಮೊಡವೆ (Butt Acne) ಎಂದು ಕರೆಯಲಾಗುತ್ತದೆ. ಇವು ಹಿಂಭಾಗದಲ್ಲಿ ಮೊಡವೆಗಳಂತೆ ಕಂಡು ಬರುತ್ತವೆ. ಇವುಗಳನ್ನು ಬ್ರೇಕ್ಔಟ್ ಎಂದೂ ಕರೆಯುತ್ತಾರೆ. ಇದು ಕಿರಿ ಕಿರಿ ಜೊತೆಗೆ ಹಲವು ಸಮಸ್ಯೆ ಮಾಡುತ್ತದೆ.

ಹಿಂಭಾಗದಲ್ಲಿ ಮೊಡವೆ ಹುಟ್ಟಿಕೊಂಡರೆ ನೀವು ಏನು ಮಾಡಬೇಕು ಗೊತ್ತಾ, ಮೊದಲು ತಕ್ಷಣವೇ ಬಿಗಿಯಾದ ಬಟ್ಟೆ ಧರಿಸುವುದನ್ನು ಬಿಡಿ. ವ್ಯಾಯಾಮದ ನಂತರ ಬೆವರಿನಲ್ಲೇ ದಿನ ಕಳೆಯಬೇಡಿ. ತಕ್ಷಣ ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಚರ್ಮಕ್ಕೆ ತೊಂದರೆಯುಂಟು ಮಾಡುವ, ಅಲರ್ಜಿ (Allergy) ಯುಂಟು ಮಾಡುವ ವಸ್ತುಗಳಿಂದ ದೂರವಿರಿ.

ಈ ಮೇಲಿನ ಅಂಶಗಳನ್ನು ಹೊರತಾಗಿ ಬಟ್ ಮೊಡವೆ ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ಹೌದು, ಬಟ್ ಮೊಡವೆಗಳು ಸಾಮಾನ್ಯ ಚರ್ಮದ ಸಮಸ್ಯೆಗಳಿಂದ ಉಂಟಾಗುತ್ತವೆ. ಮುಖ್ಯವಾಗಿ ಇದು ಫೋಲಿಕ್ಯುಲೈಟಿಸ್ ಚರ್ಮದ ಮೇಲೆ ವಾಸಿಸುವ ಬ್ಯಾಕ್ಟೀರಿಯಾ ಆಗಿದ್ದು, ಇದು ಉರಿಯೂತವನ್ನು ಉಂಟುಮಾಡುತ್ತದೆ. ಇದು ಬಟ್ ಮೊಡವೆಗೆ ಕಾರಣವಾಗುತ್ತದೆ. ಅಲರ್ಜಿಯಿಂದಲೂ ಈ ಬಟ್ ಮೊಡವೆ ಸಂಭವಿಸುತ್ತದೆ. ಯೀಸ್ಟ್ ಅಥವಾ ಶಿಲೀಂಧ್ರದಿಂದಲೂ ಇದು ಕಾರಣಿಸಿಕೊಳ್ಳುತ್ತದೆ.

ಮುಖ್ಯವಾಗಿ ಬಟ್ ಮೊಡವೆ ತೊಡೆದುಹಾಕಲು ಈ ಟಿಪ್ಸ್ ಫಾಲೋ ಮಾಡಿ:
ಬೆನ್ಝಾಯ್ಲ್ ಪೆರಾಕ್ಸೈಡ್ ವಾಶ್ : ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಉರಿ, ಊತವನ್ನು ಕಡಿಮೆ ಮಾಡುತ್ತದೆ. ಬೆನ್ಝಾಯ್ಲ್ ಪೆರಾಕ್ಸೈಡ್ ಹೊಂದಿರುವ ಬಾಡಿ ವಾಶ್, ಬಾರ್ ಸೋಪ್, ಕ್ರೀಮ್ ಅಥವಾ ಶೇಕಡಾ 5 ರಿಂದ 10 ರಷ್ಟು ಬೆನ್ಝಾಯ್ಲ್ ಪೆರಾಕ್ಸೈಡ್ ಹೊಂದಿರುವ ಜೆಲ್ ಸಹ ನಿಮ್ಮ ಬಟ್ ಮೊಡವೆ ಕಡಿಮೆ ಮಾಡಲು ನೆರವಾಗುತ್ತದೆ.

ಟೀ ಟ್ರೀ ಎಣ್ಣೆ:
ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಟೀ ಟ್ರೀ ಆಯಿಲನ್ನು ನೇರವಾಗಿ ತ್ವಚೆಯ ಮೇಲೂ ಹಚ್ಚಬಹುದು.

ಸ್ಯಾಲಿಸಿಲಿಕ್ ಆಮ್ಲ:
ಸ್ಯಾಲಿಸಿಲಿಕ್ ಆಮ್ಲವು ಬೀಟಾ ಹೈಡ್ರಾಕ್ಸಿ ಆಮ್ಲವಾಗಿದೆ. ಇದು ಚರ್ಮದ ಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮೊಡವೆ ಜಾಗಕ್ಕೆ ನೀವು ಸ್ಯಾಲಿಸಿಲಿಕ್ ಆಸಿಡ್ ಪ್ಯಾಡ್ ಹಾಕಬಹುದು. ಆದ್ರೆ ಖಾಸಗಿ ಅಂಗಕ್ಕೆ ಟಚ್ ಆಗದಂತೆ ನೀವು ಎಚ್ಚರಿಕೆವಹಿಸುವುದು ಮುಖ್ಯ.

ಲ್ಯಾಕ್ಟಿಕ್ ಆಸಿಡ್ ಲೋಷನ್ (Lactic Acid Lotion) :
ಲ್ಯಾಕ್ಟಿಕ್ ಆಮ್ಲವು ಆಲ್ಫಾ ಹೈಡ್ರಾಕ್ಸಿ ಆಮ್ಲವಾಗಿದೆ. ಸ್ಯಾಲಿಸಿಲಿಕ್ ಆಮ್ಲದಂತೆ ಇದು ಸತ್ತ ತೊಡೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ಪ್ರತಿದಿನ ಹಚ್ಚಬೇಕು. ಒರಟಾದ ಚರ್ಮವನ್ನು ಮೃದುಗೊಳಿಸಲು ಇದು ನೆರವಾಗುತ್ತದೆ.

ಹೀಟಿಂಗ್ ಪ್ಯಾಡ್ :
ಅತ್ಯಂತ ಸುಲಭ ವಿಧಾನವೆಂದ್ರೆ ಹೀಟಿಂಗ್ ಪ್ಯಾಡ್. ಬೆಚ್ಚಗಿನ ತೇವಾಂಶ ಕಿರಿಕಿರಿ ಕಡಿಮೆ ಮಾಡುತ್ತದೆ. ಕೀವುಗಳನ್ನು ತೆಗೆದುಹಾಕುವುದು ಸುಲಭ. ಉಪ್ಪು ಬೆರೆಸಿದ ಬಿಸಿನೀರಿನಲ್ಲಿ ಸ್ನಾನ ಅಥವಾ ಆಪಲ್ ವಿನೆಗರ್ ಅನ್ನು ಬಟ್ಟೆಗೆ ಹಾಕಿ ಅದನ್ನು ಪೀಡಿದ ಪ್ರದೇಶದಲ್ಲಿ ಇಡಬೇಕು. ಅಲ್ಲದೆ ನೀವು ಬಿಸಿ ನೀರನ್ನು ಬಟ್ಟೆಯಲ್ಲಿ ಅದ್ದಿ ಆ ಬಟ್ಟೆಯನ್ನು ಪೀಡಿತ ಜಾಗದ ಮೇಲೆ 15 ನಿಮಿಷ ಇಡಬೇಕು.

ಇದನ್ನೂ ಓದಿ: ಪಾತ್ರೆಗೆ ಅಂಟಿದ ಎಣ್ಣೆ ಜಿಡ್ಡು ತೆಗೆಯಲು ಕಷ್ಟ ಆಗ್ತಿದಿಯಾ ?! ಬಂದಿದೆ ನೋಡಿ ಹೊಸ ಟಿಪ್ಸ್