Dish wash Techniques: ಪಾತ್ರೆಗೆ ಅಂಟಿದ ಎಣ್ಣೆ ಜಿಡ್ಡು ತೆಗೆಯಲು ಕಷ್ಟ ಆಗ್ತಿದಿಯಾ ?! ಬಂದಿದೆ ನೋಡಿ ಹೊಸ ಟಿಪ್ಸ್

Lifestyle kitchen hacks dish wash techniques simple tips for removing sticky oil from utensils

Share the Article

Dish wash Techniques: ಭಾರತೀಯರು ತಯಾರಿಸುವಂತಹ ಮಾಸಲೆಯುಕ್ತ ಆಹಾರಗಳಿಂದಾಗಿ ಪಾತ್ರೆಗಳಲ್ಲಿ ಹೆಚ್ಚಿನ ಜಿಡ್ಡು, ಎಣ್ಣೆಯಂಶವು ಹೆಚ್ಚಾಗಿ ಅಂಟಿಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಇರುವಂತಹ ಪಾತ್ರೆಗಳನ್ನು ಹೊಳೆಯುವಂತೆ ಮಾಡುವುದು ಹೇಗೆ (Dish wash Techniques)ಎಂದು ನಾವು ನಿಮಗೆ ಈ ಮೂಲಕ ತಿಳಿಸಿಕೊಡಲಿದ್ದೇವೆ.

ವಿನೆಗರ್:
ಇದೊಂದು ಉತ್ತಮ ನೈಸರ್ಗಿಕ ಕ್ಲನ್ಸರ್. ವಿನೆಗರ್ ಬಳಸಿ ಸ್ರಬ್‌ನಿಂದ ಪಾತ್ರೆ ತಿಕ್ಕಿ. ನಂತರ ತೊಳೆದರೆ ಜಿಡ್ಡು ಮಾಯ.

ನಿಂಬೆ ರಸ:
ಎಣ್ಣೆ ಜಿಡ್ಡು ಇರುವ ಜಾಗಕ್ಕೆ ನಿಂಬೆ ರಸ ಹಾಕಿ ಸ್ವಲ್ಪ ಸಮಯ ನೆನೆಸಿಟ್ಟು ನಂತರ ತಿಕ್ಕಿ ತೊಳೆಯಿರಿ. ನಿಂಬೆಯ ಸಿಟ್ರಸ್ ಅಂಶವು ಕಠಿಣ ಕಲೆ ಹಾಗೂ ಜಿಡ್ಡನ್ನು ತೆಗೆಯಲು ನೆರವಾಗುತ್ತದೆ.

ಡಿಶ್ವಾಶ್ ಲಿಕ್ವಿಡ್:
ನಿಂಬೆ ಅಥವಾ ವಿನೆಗರ್ ಇರುವ ಡಿಶ್ವಾಶ್ ಲಿಕ್ವಿಡ್ ಮಾರುಕಟ್ಟೆಯಲ್ಲಿ ಲಭ್ಯ. ಇದನ್ನು ಬಳಸಿದರೆ ಎಣ್ಣೆ ಜಿಡ್ಡಿನ ಜೊತೆ, ತಳಹತ್ತಿದ ಪಾತ್ರೆಗಳೂ ಪಳ ಪಳ ಹೊಳೆಯುತ್ತವೆ.

ಬಿಸಿನೀರು:
ಇದೊಂದು ಸುಲಭ ಹಾಗೂ ಉತ್ತಮ ಮಾರ್ಗ. ಎಣ್ಣೆ ಜಿಡ್ಡಾದ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ. ನಂತರ ಬಿಸಿ ನೀರನ್ನು ಬಳಸಿಕೊಂಡು ಸೋಪಿನಿಂದ ಪಾತ್ರೆ ತೊಳೆಯಿರಿ.

ಬೇಕಿಂಗ್ ಸೋಡಾ:
ಕಾಲು ಭಾಗ ವಿನೆಗರ್ ಮತ್ತು ಮುಕ್ಕಾಲು ಭಾಗ ನೀರು ಎರಡನ್ನು ಮಿಶ್ರಣ ಮಾಡಿಕೊಂಡು ಪಾತ್ರೆಯನ್ನು ಅದರಲ್ಲಿ ಸ್ವಲ್ಪ ಹೊತ್ತು ಹಾಗೆ ಬಿಡಿ. ನಂತರ ಸೋಪು ಹಾಕಿ ತೊಳೆಯಿರಿ.

ಇದನ್ನೂ ಓದಿ: ಮುಟ್ಟಾದಾಗ ಸಂಗಾತಿಗೆ ‘ಲಿಪ್ ಕಿಸ್’ ಕೊಡ್ಬೋದಾ ?! ಕೊಟ್ರೆ ಏನೇನಾಗುತ್ತೆ ಗೊತ್ತಾ?

Leave A Reply

Your email address will not be published.