Sullia student missing case: ಕುಂಡಡ್ಕ ನಿವಾಸಿ ವಿದ್ಯಾರ್ಥಿ ಅಬೂಬಕ್ಕರ್ ಬಿಲಾಲ್ ತಲಪಾಡಿಯಿಂದ ನಾಪತ್ತೆ

Sullia news student Abubakar Bilal missing from Talapadi latest news

Sullia student missing case  : ಪೆರುವಾಜೆ ಗ್ರಾಮದ ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ.16 ರ ಸಂಜೆಯಿಂದ ನಾಪತ್ತೆಯಾಗಿದ್ದಾನೆ(Sullia student missing case ) .

ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಹುಡುಕಾಟ ನಡೆಸುತ್ತಿದ್ದಾರೆ.

ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಕಾಣಲು ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಕರೆ ಮಾಡುವಂತೆ ಮನೆಯವರು ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: FRUITS ID: ರೈತರಿಗೆ ಕಂದಾಯ ಸಚಿವರು ನೀಡಿದ್ರು ಬಿಗ್ ಅಪ್ಡೇಟ್!! ಜಮೀನಿನ ಮಾಹಿತಿ ದಾಖಲು ಕುರಿತು ಸಚಿವರು ಏನಂದ್ರು?

Leave A Reply

Your email address will not be published.