Home Health ಕ್ಯಾನ್ಸರ್​ಗೆ ಸಹಕಾರಿಯಾಗಿದೆ ದಾಸವಾಳ ಹೂವು!

ಕ್ಯಾನ್ಸರ್​ಗೆ ಸಹಕಾರಿಯಾಗಿದೆ ದಾಸವಾಳ ಹೂವು!

Hindu neighbor gifts plot of land

Hindu neighbour gifts land to Muslim journalist

ದಾಸವಾಳ ಹೂವಿನಲ್ಲಿ ಹಲವು ವಿಧಗಳಿವೆ. ಬಿಳಿ, ಕೆಂಪು, ಗುಲಾಬಿ, ಕೇಸರಿ ಹೀಗೆ ಹಲವು ಬಣ್ಣದ ದಾಸವಾಳವನ್ನು ನೀವು ಕಂಡಿರಬಹುದು. ದಾಸವಾಳ ಚೆಂದದ ಹೂವು, ಪೂಜೆ, ಸಮಾರಂಭಗಳಲ್ಲಿ ಬಳಸುತ್ತಾರೆ. ಈಗ ಕ್ಯಾನ್ಸರ್ ಕಾಯಿಲೆ ಕಡಿಮೆ ಮಾಡಲು ದಾಸವಾಳವನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಶೋಧನೆ ಹೇಳಿದೆ.

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಹಲವು ವಿಧದ ಕ್ಯಾನ್ಸರ್ ಗಳಿವೆ. ಆದ್ರೆ ಎಲ್ಲಾ ರೀತಿಯ ಕ್ಯಾನ್ಸರ್ ಅಪಾಯಕಾರಿ ಅಲ್ಲ. ಭಾರತದಲ್ಲಿ 2022 ರಲ್ಲಿ 20 ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ ಅಂತಾ ಎನ್ ಸಿಬಿಐ ವರದಿ ತಿಳಿಸಿದೆ.

ಸ್ತನ ಕ್ಯಾನ್ಸರ್‌ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ, ಉತ್ತಮ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಹಲವು ವಿಧದ ಔಷಧ, ವಿಕಿರಣ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯನ್ನು ಹೊಂದಿದೆ. ರೋಗ ಲಕ್ಷಣಗಳ ತೀವ್ರತೆ ನೋಡಿ ಚಿಕಿತ್ಸೆ ಬಗ್ಗೆ ವೈದ್ಯರು ನಿರ್ಣಯಿಸುತ್ತಾರೆ.

ಸ್ತನ ಕ್ಯಾನ್ಸರ್ ನಿವಾರಣೆಗೆ ಮನೆಮದ್ದು : ಸ್ತನ ಕ್ಯಾನ್ಸರ್‌ ನ್ನು ನೈಸರ್ಗಿಕವಾಗಿ ಕಡಿಮೆ ಮಾಡಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಔಷಧಿಗಳ ಜೊತೆಗೆ ಮನೆಮದ್ದು ಅಥವಾ ನೈಸರ್ಗಿಕ ಪರಿಹಾರ ಕಂಡುಕೊಳ್ಳಬಹುದು. ಸ್ತನ ಕ್ಯಾನ್ಸರ್‌ಗೆ ಅದ್ಭುತವಾದ ನೈಸರ್ಗಿಕ ಪರಿಹಾರವಾಗಿ ದಾಸವಾಳದ ಹೂವು ಬಳಕೆ ಮಾಡಲಾಗುತ್ತದೆ.

ದಾಸವಾಳ ಹೂವಿನ ರಸ: ಸಂಶೋಧಕರ ಪ್ರಕಾರ, ನೈಸರ್ಗಿಕ ವಸ್ತುಗಳು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಲ್ಲ ಎನ್ನುತ್ತಾರೆ. ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಮನೆಮದ್ದಾಗಿ ದಾಸವಾಳದ ಹೂವಿನ ರಸವನ್ನು ದೀರ್ಘಾವಧಿಯವರೆಗೆ ಬಳಸಿದ್ರೂ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಹೇಳಿದ್ದಾರೆ. ಔಷಧವಾಗಿ ದಾಸವಾಳ ಹೂವನ್ನು ಬಳಕೆ ಮಾಡಲಾಗುತ್ತದೆ. ದಾಸವಾಳ ಹೂವಿನ ರಸವು ಕ್ಯಾನ್ಸರ್‌ ದುರ್ಬಲತೆ ಕಡಿಮೆ ಮಾಡುತ್ತದೆ.