Home Fashion Balenciaga : ಚಿಂದಿಯಿಂದ ಮಾಡಿದ ಕಿವಿಯೋಲೆ | ಇದರ ಬೆಲೆ ಕೇಳಿದರೆ ದಂಗಾಗ್ತೀರಾ ಖಂಡಿತ

Balenciaga : ಚಿಂದಿಯಿಂದ ಮಾಡಿದ ಕಿವಿಯೋಲೆ | ಇದರ ಬೆಲೆ ಕೇಳಿದರೆ ದಂಗಾಗ್ತೀರಾ ಖಂಡಿತ

Hindu neighbor gifts plot of land

Hindu neighbour gifts land to Muslim journalist

ಅಮೆರಿಕಾದ ಆನ್‌ಲೈನ್ ಮಾರುಕಟ್ಟೆ Balenciaga ಈಗ ಹೊಸತೊಂದು ಅತ್ಯಂತ ದುಬಾರಿ ವಸ್ತುವಿನೊಂದಿಗೆ ಮುನ್ನೆಲೆಗೆ ಬಂದಿದೆ. ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಗೆ ಹೆಸರುವಾಸಿಯಾದ ಸಂಸ್ಥೆ ಇದು.

ಕಿತ್ತೋಗಿರುವ ರೀತಿ ಕಾಣಿಸುತ್ತಿದ್ದ ಶೂಗಳಿಗೆ ದುಬಾರಿ ಮೊತ್ತದ ಬೆಲೆ ಹಾಕಿ ಸಂಚಲನ ಸೃಷ್ಟಿಸಿದ ಈ ಬ್ರ್ಯಾಂಡ್ ಆನ್ಲೈನ್ ನಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ನೋಡಲು ಶೂ ಲೇಸ್‌ನಂತಿರುವ ದುಬಾರಿ ಬೆಲೆಯ ಕಿವಿಯೋಲೆ (ಹ್ಯಾಂಗಿಂಗ್ಸ್) ಯೊಂದಿಗೆ ಬಾಲೆನ್ಸಿಯಗ ಮತ್ತೆ ಆನ್‌ಲೈನ್‌ನಲ್ಲಿ ಸುದ್ದಿಯಲ್ಲಿದೆ.

ಶೂಲೇಸ್‌ನಂತೆ ಕಾಣುವ ಈ ಬಾಲೆನ್ಸಿಯಗ ಬ್ರ್ಯಾಂಡ್‌ನ ಕಿವಿಯೋಲೆಯ ದರ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಇಷ್ಟೊಂದು ರೇಟ್ ಕೊಟ್ಟು ಶೂ ಲೇಸ್ ಯಾಕೆ ಹಾಕೋದು ಯಾಕೆ ?;ಬಂಗಾರದ್ದೇ ಓಲೆ ಖರೀದಿಸಬಹುದಲ್ವಾ? ಅಂತ ನಿಮಗನಿಸುವುದು ನಿಜ.

ಶೂಲೇಸ್ ನಂತೆ ಕಾಣುವ ಈ ಕಿವಿಯೋಲೆ ಕೊಕ್ಕೆ ತರಹ ಡಿಸೈನ್ ಹೊಂದಿದ್ದು, ನೇತಾಡುವ ನಿಜವಾದ ಶೂಲೇಸ್‌ಗಳನ್ನು ಹೊಂದಿದೆ. ಅಷ್ಟಕ್ಕೂ ಈ ಜೋಡಿ ಕಿವಿಯೋಲೆಗಳ ಬೆಲೆ 216 ಅಮೆರಿಕನ್ ಡಾಲರ್, ಅಂದರೆ ಸರಿ ಸುಮಾರು 17,232 ರೂಪಾಯಿ

ಈ ಫೋಟೋವನ್ನು ಹೈಸ್ಕೋಬಿಟಿ ತನ್ನ Instagram ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗಿದೆ. ಹೈಸ್ಕೋಬಿಟಿಯು ಜಾಗತಿಕ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಮೀಡಿಯಾ ಬ್ರ್ಯಾಂಡ್ ಆಗಿದೆ. ಈ ರೀತಿಯ ಅಸಂಬದ್ಧವಾಗಿ ಕೆಲ ವಸ್ತುಗಳಿಗೆ ದುಬಾರಿ ಬೆಲೆ ಘೋಷಿಸುತ್ತಿರುವುದಕ್ಕೆ ನೆಟ್ಟಿಗರು ಈ ಫ್ಯಾಷನ್ ಬ್ರ್ಯಾಂಡನ್ನು ಫುಲ್ ಟ್ರೋಲ್ ಮಾಡ್ತಿದ್ದಾರೆ.

ಬಾಲೆನ್ಸಿಯಗ ಉನ್ನತ-ಮಟ್ಟದ ಐಷಾರಾಮಿ ಬ್ಯಾಂಡ್‌ಗಳ ಕೆಲವು ವಿಲಕ್ಷಣ ಕ್ರಿಯೇಷನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಈಗಾಗಲೇ (ಅಪ)ಖ್ಯಾತಿ ಗಳಿಸಿದೆ. ಅವರ ಕೆಲ ಉತ್ಪನ್ನಗಳು ಜನಸಾಮಾನ್ಯರನ್ನು ಮೆಚ್ಚಿಸುವ ಬದಲು ದಿಗ್ಭ್ರಮೆಗೊಳಿಸುತ್ತವೆ. ಕೆಲದಿನಗಳ ಹಿಂದೆ USD 1,790 ಬೆಲೆಗೆ ಕಸ ಎಸೆಯುವ ಚೀಲ ಹೊರತರುವ ಮೂಲಕ ಸಾಕಷ್ಟು ಸುದ್ದಿಯಾಗಿತ್ತು. ಈ ಕಸದ ಚೀಲದ ಅಂದಾಜು ಬೆಲೆ 1,42,569 ರೂಪಾಯಿಯಾಗಿತ್ತು. ಕಪ್ಪು, ಬಿಳಿ, ಕೆಂಪು, ನೀಲಿ ಮತ್ತು ಹಳದಿ ಎಂಬ ಐದು ಬಣ್ಣಗಳಲ್ಲಿ ಈ ಬ್ಯಾಗ್ ದೊರೆಯಲಿದೆ ಎಂದು ಹೇಳಲಾಗುತ್ತಿತ್ತು. ಚೀಲವು ಕರುವಿನ ಚರ್ಮದಿಂದ ಮಾಡಲ್ಪಟ್ಟಿತ್ತು. ಮಾರ್ಚ್‌ನಲ್ಲಿ ಪ್ಯಾರಿಸ್‌ನಲ್ಲಿ 2022 ರ ರೆಡಿ-ಟು-ವೇರ್ ಸಂಗ್ರಹಣೆಯಲ್ಲಿ ಬ್ಯಾಗ್ ಕಾಣಿಸಿಕೊಂಡಿತ್ತು.

ಈ ಬ್ಯಾಗ್ ಬಿಡುಗಡೆಯಾದ ನಂತರ, ಅನೇಕ ಟ್ವಿಟರ್ ಬಳಕೆದಾರರು ವಿವಿಧ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕಸದ ಚೀಲಗಳ ಬಗ್ಗೆ ಚರ್ಚೆಯಾಗಿತ್ತು.