Home Crime Ankola: ಬಾಗಿಲು ತೆಗೆದು ಬೆತ್ತಲೆ ಸ್ನಾನ ಮಾಡಿದ ವ್ಯಕ್ತಿ – ಬಾಗಿಲು ಹಾಕೋ ಎಂದ ತಮ್ಮನ...

Ankola: ಬಾಗಿಲು ತೆಗೆದು ಬೆತ್ತಲೆ ಸ್ನಾನ ಮಾಡಿದ ವ್ಯಕ್ತಿ – ಬಾಗಿಲು ಹಾಕೋ ಎಂದ ತಮ್ಮನ ಹೆಂಡತಿ!! ಮುಂದೆ ನಡೆದದ್ದೇ ಬೇರೆ

Ankola

Hindu neighbor gifts plot of land

Hindu neighbour gifts land to Muslim journalist

Ankola: ಕೆಲವರು ಎಂತಾ ವಿಚಿತ್ರ ವ್ಯಕ್ತಿಗಳಿರುತ್ತಾರೆ ಎಂದರೆ ಅವರಿಗೆ ತಾವೇನು ಮಾಡುತ್ತಿದ್ದೇವೆ, ತಾವು ಮಾಡೋದ್ರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬ ಪರಿಜ್ಞಾನವೇ ಇರೋದಿಲ್ಲ. ಒಟ್ಟಿನಲ್ಲಿ ತಮ್ಮಿಂದ ಏನಾದರೂ ಸಮಸ್ಯೆ ಆಗಬೇಕು ಎಂಬುದು ಅವರ ಉದ್ದೇಶ. ಅಂತೇಯೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲೊಬ್ಬ ಇಂತಹ ವಿಚಿತ್ರ ವ್ಯಕ್ತಿ ಸೃಷ್ಟಿಯಾಗಿದ್ದಾನೆ.

ಇದನ್ನೂ ಓದಿ: NASA: ವಿಶ್ವದಲ್ಲಿ ಮತ್ತೊಂದು ಜಗತ್ತನ್ನು ಕಂಡುಹಿಡಿದ ನಾಸಾ! ‘ಸೂಪರ್ ಅರ್ಥ್’ ಎಂದು ಹೆಸರಿಸಿಟ್ಟ ವಿಜ್ಞಾನಿಗಳು, ಜೀವನ ಹೇಗಿರುತ್ತದೆ?

ಹೌದು, ಅಂಕೋಲ(Ankola) ತಾಲೂಕಿನ ಕಾಕರಮಠದಲ್ಲಿ ಇಸಾಕ್ ಅಹಮ್ಮದ ಶೇಖ (45) ಎಂಬ ವಿಚಿತ್ರ ಮನುಷ್ಯನೊಬ್ಬ ಮನೆಯಲ್ಲಿ ಹೆಣ್ಣು ಮಕ್ಕಳು ಇರುವಾಗ ಬಾತ್ ರೂಮ್ ಡೋರ್ ತೆಗೆದು ಬೆತ್ತಲಾಗಿ ಸ್ನಾನ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ ಬಾಗಿಲು ಹಾಕಿ ಸ್ನಾನ ಮಾಡಿ ಎಂದ ತನ್ನ ತಮ್ಮನ ಹೆಂಡತಿಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಈ ಕುರಿತು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?

2024 ಜ. 29ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಸಾಕ್ ಅಹ್ಮದ ಶೇಖ ಬಾತ್‌ರೂಮ್‌ನಲ್ಲಿ ಬಾಗಿಲು ಹಾಕಿಕೊಳ್ಳದೇ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದನು. ಅಡುಗೆ ಕೋಣೆಯಲ್ಲಿದ್ದ ತಮ್ಮನ ಹೆಂಡತಿ ಬಾಗಿಲು ಹಾಕಿಕೊಂಡು ಸ್ನಾನ ಮಾಡುವಂತೆ ಹೇಳಿದ್ದಾಳೆ. ಆಗ ಮನೆಯಲ್ಲಿ ಬೇರೆ ಸದಸ್ಯರು ಇರಲಿಲ್ಲ. ಬಾತ್‌ರೂಂನಿಂದ ಬಟ್ಟೆ ಹಾಕಿಕೊಂಡು ಬಂದ ಇಸಾಕ್‌ ತಮ್ಮನ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಹಿಡಿದು ತಿರುಗಿಸಿ, ಮೈ ಮೇಲಿದ್ದ ಚೂಡಿದಾರದ ವೇಲನ್ನು ಎಳೆದು ಅವಮಾನ ಪಡಿಸಿದ್ದಾನೆ. ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಬಳಿಕ ಗಂಡನ ತಮ್ಮ ಮೋಸಿನ ಶೇಖ ಬಂದು ಜಗಳ ಬಿಡಿಸಿದ್ದಾನೆ.

ಸದ್ಯ ಈ ಕುರಿತು ಪ್ರಕರಣ ದಾಖಲಿಸಿರುವ ಮಹಿಳೆ ಈ ಎಲ್ಲಾ ಘಟನೆಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ ವಿಲಕ್ಷಣ ವ್ಯಕ್ತಿ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗಿದೆ.