Home Interesting ನಿಮಗೆ ಗೊತ್ತೇ..” ಶೂನ್ಯ” ರೂಪಾಯಿ ನೋಟು? ನಮ್ಮ ದೇಶದಲ್ಲಿ ಮುದ್ರಣವಾಗಿತ್ತು ಈ ನೋಟು…ಇದರ ರಹಸ್ಯವೇನು ಗೊತ್ತೇ...

ನಿಮಗೆ ಗೊತ್ತೇ..” ಶೂನ್ಯ” ರೂಪಾಯಿ ನೋಟು? ನಮ್ಮ ದೇಶದಲ್ಲಿ ಮುದ್ರಣವಾಗಿತ್ತು ಈ ನೋಟು…ಇದರ ರಹಸ್ಯವೇನು ಗೊತ್ತೇ ?

Hindu neighbor gifts plot of land

Hindu neighbour gifts land to Muslim journalist

ಎಲ್ಲರಿಗೂ 1 ರೂಪಾಯಿಯಿಂದ 2 ಸಾವಿರ ರೂಪಾಯಿವರೆಗಿನ ನೋಟುಗಳ ಬಗ್ಗೆ ಗೊತ್ತು. ದಿನನಿತ್ಯದ ಬಳಕೆಗೆ ಇವುಗಳನ್ನು ನಾವು ಬಳಕೆ ಮಾಡುತ್ತಲೇ ಇರುತ್ತೇವೆ. ಭಾರತೀತಯರ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ನೋಟುಗಳನ್ನು ಮುದ್ರಿಸುತ್ತವೆ. ಆದರೆ ನಿಮಗೆ ಗೊತ್ತೇ ? ದೇಶದಲ್ಲಿ ಶೂನ್ಯ ರೂಪಾಯಿ ನೋಟು ಕೂಡ ಮುದ್ರಣಗೊಂಡಿತ್ತು ಎಂದು. ಹೌದು ಅದರ ಬಗ್ಗೆ ತಿಳಿಯೋಣ ಬನ್ನಿ.

ಇಂದು ನಿಮಗೆ ನಾವು ಈ ಶೂನ್ಯ ರೂಪಾಯಿ ನೋಟಿನ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಅದರ ಬಗ್ಗೆ ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗಬಹುದು. ಈ ನೋಟಿನ ಇತಿಹಾಸವೇನು?

ಈ ಶೂನ್ಯ ರೂಪಾಯಿ ನೋಟಿನ ಮೇಲೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರ ಕೂಡಾ ಇತ್ತು. ಇದು ನೋಡೋಕೆ, ಇತರ ನೋಟುಗಳಂತೆಯೇ ಕಾಣುತ್ತದೆ. ಆದರೆ ಈಗ ಶೂನ್ಯ ರೂಪಾಯಿ ನೋಟುಗಳನ್ನು ಏಕೆ ಮುದ್ರಿಸಲಾಯಿತು? ಉಪಯೋಗವಾದರೇನು? ಈ ಪ್ರಶ್ನೆ ಮೂಡಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ನೋಟುಗಳನ್ನು ಮುದ್ರಿಸಿಲ್ಲ.

ಭ್ರಷ್ಟಾಚಾರದ ವಿರುದ್ಧದ ಅಭಿಯಾನವಾಗಿ ಈ ನೋಟು ಮುದ್ರಿಸಲಾಗಿತ್ತು. ಈ ಶೂನ್ಯ ರೂಪಾಯಿ ನೋಟನ್ನು ಮುದ್ರಿಸುವ ಆಲೋಚನೆ ದಕ್ಷಿಣ ಭಾರತದ ಎನ್‌ಜಿಒನಿಂದ ಬಂದಿದ್ದು. 2007 ರಲ್ಲಿ ಈ ನೋಟನ್ನು ಭ್ರಷ್ಟಾಚಾರದ ವಿರುದ್ಧದ ಅಸ್ತ್ರವಾಗಿ ಬಳಸಲು ಈ ನೋಟನ್ನು ಬಳಸಲಾಯಿತು. ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಎನ್‌ಜಿಒ ಸುಮಾರು 5 ಲಕ್ಷ ಶೂನ್ಯ ರೂಪಾಯಿ ನೋಟುಗಳನ್ನು ಮುದ್ರಿಸಿತ್ತು. ಈ ನೋಟುಗಳನ್ನು ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ, ಒಟ್ಟು ನಾಲ್ಕು ಭಾಷೆಗಳಲ್ಲಿ ಮುದ್ರಿಸಿ ಜನರಲ್ಲಿ ವಿತರಿಸಲಾಯಿತು.

ಶೂನ್ಯ ರೂಪಾಯಿ ನೋಟನ್ನು ಮೊದಲ ಬಾರಿಗೆ 2007ರಲ್ಲಿ ”ಫಿಫ್ತ್ ಪಿಲ್ಲರ್’ ಎಂಬ ಎನ್‌ಜಿಒ ಪರಿಚಯಿಸಿತು. ಲಂಚ ತಡೆಯಲು ಹಿಂಭಾಗದಲ್ಲಿ ಸರ್ಕಾರಿ ಅಧಿಕಾರಿಗಳ ಸಂಪರ್ಕ ವಿವರಗಳೊಂದಿಗೆ ಶೂನ್ಯ ರೂಪಾಯಿ ನೋಟನ್ನು ಪರಿಚಯಿಸಲಾಯಿತು. ನೀವು ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಹೋದಾಗ ಭ್ರಷ್ಟ ಸರ್ಕಾರಿ ಅಧಿಕಾರಿಗಳು ಯಾರಾದರೂ ನಿಮ್ಮ ಕೆಲಸ ಮಾಡಿಕೊಡುವುದಾಗಿ ಹೇಳಿ ಲಂಚ ಕೇಳಿದರೆ ಈ ಶೂನ್ಯ ರೂಪಾಯಿ ನೋಟನ್ನು ಅವರಿಗೆ ‘ಪಾವತಿಸುವಂತೆ’ ಎನ್‌ಜಿಒ ನಾಗರಿಕರನ್ನು ಪ್ರೋತ್ಸಾಹಿಸುತ್ತದೆ.

ಭ್ರಷ್ಟಾಚಾರದ ವಿರುದ್ಧ ಹಲವು ಸಂದೇಶಗಳನ್ನು ಈ ನೋಟುಗಳಲ್ಲಿ ಬರೆಯಲಾಗಿತ್ತು. ಈ ನೋಟುಗಳಲ್ಲಿ ‘ಭ್ರಷ್ಟಾಚಾರವನ್ನು ಕೊನೆಗಾಣಿಸಿ’, ‘ಯಾರಾದರೂ ಲಂಚ ಕೇಳಿದರೆ, ಈ ನೋಟು ನೀಡಿ ಮತ್ತು ವಿಷಯದ ಬಗ್ಗೆ ನಮಗೆ ತಿಳಿಸಿ’ ಎಂದು ಬರೆಯಲಾಗಿತ್ತು. ನಾನು ತೆಗೆದುಕೊಳ್ಳುವುದಿಲ್ಲ ಅಥವಾ ಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತೇನೆ. ಈ ನೋಟಿನಲ್ಲಿ ಎನ್‌ಜಿಓನ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೋಟಿನ ಕೆಳಗೆ ನೀಡಲಾಗಿತ್ತು. ಸ್ವಯಂ ಸೇವಾ ಸಂಸ್ಥೆಯೇ ಈ ಶೂನ್ಯ ರೂಪಾಯಿ ನೋಟನ್ನು ತಯಾರಿಸಿ ಲಂಚ ಕೇಳಿದವರಿಗೆ ನೀಡುತ್ತಿತ್ತು. ಶೂನ್ಯ ರೂಪಾಯಿ ನೋಟು ಭ್ರಷ್ಟಾಚಾರದ ವಿರುದ್ಧದ ಸಂಕೇತವಾಗಿತ್ತು.