Home Breaking Entertainment News Kannada Zee Kannada Reality Show | ವೀಕ್ಷಕರನ್ನು ನಕ್ಕು-ನಗಿಸಲು ಬರುತ್ತಿದ್ದಾರೆ ಪುಟಾಣಿ ಪಂಟರ ಜೊತೆ ಡ್ಯಾನ್ಸರ್ಸ್...

Zee Kannada Reality Show | ವೀಕ್ಷಕರನ್ನು ನಕ್ಕು-ನಗಿಸಲು ಬರುತ್ತಿದ್ದಾರೆ ಪುಟಾಣಿ ಪಂಟರ ಜೊತೆ ಡ್ಯಾನ್ಸರ್ಸ್ | ಈ ಆಡಿಷನ್ ನಲ್ಲಿ ನೀವೂ ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ!

Hindu neighbor gifts plot of land

Hindu neighbour gifts land to Muslim journalist

ಇಂದು ದಿನಚರಿಯ ಕೆಲಸದಿಂದ ಬಂದು ಸುಸ್ತಾಗಿರುವ ಕಣ್ಣುಗಳಿಗೆ ನೆಮ್ಮದಿಯನ್ನು ನೀಡಿ ಮನಸ್ಫೂರ್ತಿ ನಗಿಸುವುದೆಂದರೆ ಮಾಧ್ಯಮಗಳು ಎಂದೇ ಹೇಳಬಹುದು. ಅದರಲ್ಲೂ ಟಿವಿ ಮಾಧ್ಯಮಗಳು ಹೊಚ್ಚ-ಹೊಸ ಕಾರ್ಯಕ್ರಮದ ಮುಕೇನಾ ಜನರನ್ನು ಮನರಂಜಿಸುತ್ತಲೇ ಬಂದಿದೆ.

ಇಂತಹ ಮನರಂಜನಾ ಕಾರ್ಯಕ್ರಮ ನೀಡುವುದರಲ್ಲಿ ‘ಜೀ ಕನ್ನಡ ವಾಹಿನಿ’ ಎಲ್ಲರ ಮನೆ ಮಾತಾಗಿದೆ. ಸೀರಿಯಲ್ ಗಳು ಸೇರಿದಂತೆ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಾ ಬಂದಿದೆ. ಅದರಂತೆ ಇದೀಗ ಮತ್ತಷ್ಟು ಹೊಸ ಹೊಸ ಪ್ರತಿಭೆಗಳನ್ನು ವೀಕ್ಷಕರಿಗೆ ಪರಿಚಯಿಸಲು ಹೊರಟಿದ್ದು ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡ ದೊಡ್ಡ ಪ್ರತಿಭೆಗಳನ್ನು ಪರಿಚಯಿಸುವ ದೊಡ್ಡ ಹೆಜ್ಜೆಯನ್ನು ಇದೀಗ ಜೀ ಕನ್ನಡ ಯತ್ನಿಸುತ್ತಿದೆ.

ಹೌದು. ಇನ್ಮುಂದೆ ನಿಮ್ಮನ್ನು ಮನೋರಂಜಿಸಲು ಬರುತ್ತಿದ್ದಾರೆ ಛೋಟಾ ಚಾಂಪಿಯನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ. ಛೋಟಾ ಚಾಂಪಿಯನ್, ಡಿಕೆಡಿ ಹಾಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳನ್ನು ಮರಳಿ ತರುತ್ತಿದ್ದು, ಛೋಟಾ ಚಾಂಪಿಯನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಆಡಿಷನ್ ಆರಂಭವಾಗಲಿದೆ. ಈ ಮೂಲಕ ತೆರೆಮರೆಯಲ್ಲಿರೋ ಪ್ರತಿಭೆಗಳನ್ನು ಟಿವಿ ಮೂಲಕ ಪರಿಚಯಿಸಲು ಜೀ ಕನ್ನಡ ಪ್ರಯತ್ನಿಸುತ್ತಿದೆ.

ಹೌದು. ಈಗಾಗಲೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೋಮೊ ಬಿಡುಗಡೆ ಮಾಡಿರುವ ವಾಹಿನಿ ಶೀಘ್ರದಲ್ಲೇ ಕಾರ್ಯಕ್ರಮ ಮರಳಿತರುವುದಾಗಿ ಸುಳಿವು ಕೊಟ್ಟಿದೆ. ಇದರ ಜೊತೆಗೆ ಛೋಟಾ ಚಾಂಪಿಯನ್, ಡಿಕೆಡಿ ಕಾರ್ಯಕ್ರಮಗಳನ್ನು ಮರಳಿ ತರುತ್ತಿದೆ. ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಮತ್ತು ಛೋಟಾ ಚಾಂಪಿಯನ್ ಸೀಸನ್ 3 ರಿಯಾಲಿಟಿ ಶೋಗಳ ಆಡಿಷನ್ ಇದೇ ಶನಿವಾರದಿಂದ ಕರ್ನಾಟಕದ 31 ಜಿಲ್ಲೇಗಳಲ್ಲಿ ಆರಂಭಿಸಲಿದೆ.

2 ರಿಂದ 6 ವಯಸ್ಸಿನ ಪುಟಾಣಿಗಳ ಪ್ರತಿಭೆಗಳಿಗೆ ‘ಛೋಟಾ ಚಾಂಪಿಯನ್’ ಆಗುವ ಅವಕಾಶ ಹಾಗೂ 6 ರಿಂದ 60 ವಯಸ್ಸಿನವರಿಗೆ ಡ್ಯಾನ್ಸ್ಕನಸನ್ನು ನನಸು ಮಾಡಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಆಡಿಷನ್ ಗಳು ನಡೆಯಲಿದೆ. ನಿಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದು ಮುಕ್ತ ವೇದಿಕೆಯಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.