Home Business ಇಬ್ಬರಿಗಾಗಿ ಇಡೀ ಊರಿನವರಿಗಾಗಿ ಫ್ರೀ ಪೆಟ್ರೋಲ್ ಹಂಚಿದ ಯೂಟ್ಯೂಬರ್ ಹರ್ಷ!

ಇಬ್ಬರಿಗಾಗಿ ಇಡೀ ಊರಿನವರಿಗಾಗಿ ಫ್ರೀ ಪೆಟ್ರೋಲ್ ಹಂಚಿದ ಯೂಟ್ಯೂಬರ್ ಹರ್ಷ!

Hindu neighbor gifts plot of land

Hindu neighbour gifts land to Muslim journalist

ಯೂಟ್ಯೂಬರ್ ಗಳು ತಮ್ಮ ಕೆಲವೊಂದು ಕ್ರಿಯೇಟಿವ್ ಐಡಿಯಾಗಳಿಂದ ಹಲವರ ಮನಸೂರೆಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಅಂಥದರಲ್ಲಿ ಇಲ್ಲೊಬ್ಬ ಯೂಟ್ಯೂಬರ್ ತಮ್ಮ‌ಇಬ್ಬರು ಫಾಲೋವರ್ಸ್ ಗಳಿಗಾಗಿ ಇಡೀ ಊರಿಗೇ ಉಚಿತ ಪೆಟ್ರೋಲ್ ನೀಡಿ ಫೇಮಸ್ ಆಗಿದ್ದಾರೆ.

ಹರ್ಷ ಎನ್ನುವ ಯೂಟ್ಯೂಬರ್ ಮೂರ್ನಾಲ್ಕು ಭಾಷೆಗಳಲ್ಲಿ ವೀಡಿಯೋ ಮಾಡಿ ಅಪ್ಲೋಡ್ ಮಾಡುತ್ತಾರೆ. ಒಂದು ದಿನ ಅವರು ದಾರಿಯಲ್ಲಿ ಹೋಗುತ್ತಿದ್ದಾಗ, ಇಬ್ಬರು ರಸ್ತೆಯಲ್ಲಿ ಜಗಳವಾಡುವುದನ್ನು ನೋಡಿದ್ದಾರೆ. ಏನೆಂದು ವಿಚಾರಿಸಿದಾಗ ಆ ವ್ಯಕ್ತಿ ಫಾಲೋವರ್ಸ್ ಎಂದು ತಿಳಿದು ಬಂದಿದೆ. ನಂತರ ಇವರು ಒಂದು ಲೀಟರ್ ಪೆಟ್ರೋಲ್ ಗಾಗಿ ಇಷ್ಟೊಂದು ಜಗಳ ಮಾಡುತ್ತಿದ್ದಾರೆ ಎಂದು ತಿಳಿದು ಬೇಸರ ಮಾಡಿಕೊಂಡಿದ್ದಾನೆ ಯೂಟ್ಯೂಬರ್ ಹರ್ಷ. ಹಾಗಾಗಿ ಒಂದು ಪ್ಲ್ಯಾನ್ ಮಾಡುತ್ತಾರೆ ಹರ್ಷ.

ಜಗಳ ನಡೆಯುತ್ತಿದ್ದ ಸ್ಥಳಗಳಲ್ಲಿ ಸುತ್ತಮುತ್ತ ಇದ್ದ ಎಲ್ಲಾ‌ ಪೆಟ್ರೋಲ್ ಬಂಕ್ ಗಳ ಮಾಲೀಕರ ಜೊತೆ ಹರ್ಷ ಮಾತನಾಡಿ, ಆಫರ್ ಅಥವಾ ಒಂದು ದಿನಕ್ಕೆ ಬಾಡಿಗೆ ಕೊಡಲು ಕೇಳುತ್ತಾರೆ. ನಂತರ ಜಗಳ ನಡೆದ ಜಾಗದ ಸ್ಥಳದಲ್ಲಿಯೇ ಹತ್ತಿರದಲ್ಲಿದ್ದ ಪೆಟ್ರೋಲ್ ಬಂಕ್ ನ್ನು ಒಂದು ದಿನಕ್ಕೆ ಬಾಡಿಗೆ ತೆಗೆದುಕೊಂಡು ಅಲ್ಲಿಗೆ ಬಂದ ತಮ್ಮ ಸಬ್ಸ್ಕ್ರೈಬರ್ಸ್ ಗೆ ಉಚಿತ ಪೆಟ್ರೋಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಫುಲ್ ಟ್ಯಾಂಕ್ ಮಾಡಲಾಗುತ್ತಿತ್ತು. ಆದರೆ ನಂತರ ಜನ ಹೆಚ್ಚಾದ ಕಾರಣ ಮಿತವಾಗಿ ಹಾಕಿದ್ದಾರೆ.

ಇಷ್ಟು ಮಾತ್ರವಲ್ಲದೇ, ಬಂಕ್ ನಲ್ಲಿ ಕ್ರೌಡ್ ಹೆಚ್ಚಾದ ಕಾರಣ ಒಂದು ಗಂಟೆ ಬ್ರೇಕ್ ತಗೊಂಡು ವಿವಿಧ ಗೇಮ್ ಗಳನ್ನು ಆಟವಾಡಿಸಿ ಅಲ್ಲಿದ್ದವರಿಗೆ ದುಬಾರಿ ಗಿಫ್ಟ್ ಕೂಡಾ ನೀಡಿದ್ದಾರೆ. ಈ ಸಮಯದಲ್ಲಿ ಅವರ ಸಬ್ಸ್ಕ್ರೈಬರ್ಸ್ ಒಂದು ಲಕ್ಷಕ್ಕೂ ಹೆಚ್ಚಾಗಿದ್ದಾರೆ.

ಇದೆಲ್ಲಾ ಆಗುವಾಗ ಸಂಜೆ ಹೊತ್ತಿಗೆ ಜಗಳ ಮಾಡುತ್ತಿದ್ದ ಇಬ್ಬರಿಗೂ ಈ ವಿಷಯ ತಿಳಿದು ತಮ್ಮಿಂದಾಗಿ ಎಲ್ಲರಿಗೂ ಫ್ರೀ ಪೆಟ್ರೋಲ್ ಸಿಗುತ್ತಿದೆ ಎಂದು ಗೊತ್ತಾಗಿ ಪೆಟ್ರೋಲ್ ಬಂಕ್ ಗೆ ಬಂದಿದ್ದಾರೆ. ನಂತರ ಅವರ ಬಳಿ ಮಾತನಾಡಿದ ಹರ್ಷ ಅವರಿಗೆ ದುಬಾರಿ ಗಿಫ್ಟ್ ಕೊಟ್ಟು 5 ಸ್ಟಾರ್ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಮುಂದೆ ಜಗಳ ಆಡಬಾರದೆಂದು ಹೇಳಿ ವಿದ್ಯುತ್ ಚಾಲಿತ ಬೈಕ್ ನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.