Home Jobs Western Railway Recruitment 2022 | ಒಟ್ಟು ಹುದ್ದೆ- 18, ಅರ್ಜಿ ಸಲ್ಲಿಸಲು ಕೊನೆ ದಿನ-ಅ.4

Western Railway Recruitment 2022 | ಒಟ್ಟು ಹುದ್ದೆ- 18, ಅರ್ಜಿ ಸಲ್ಲಿಸಲು ಕೊನೆ ದಿನ-ಅ.4

Hindu neighbor gifts plot of land

Hindu neighbour gifts land to Muslim journalist

ರೈಲ್ವೆ ಇಲಾಖೆಯು ಪಶ್ಚಿಮ ರೈಲ್ವೆ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ದಿನಾಂಕ 01-04-2020 ರಿಂದ 30-08-2022 ರ ಅವಧಿಯಲ್ಲಿ ಚಾಂಪಿಯನ್‌ ಶಿಪ್ ಪಡೆದ ಹಾಗೂ ಕ್ರೀಡೆಗಳಲ್ಲಿ ಪ್ರಸ್ತುತ ಆಕ್ಟಿವ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ಹೆಸರು: ಪಶ್ಚಿಮ ರೈಲ್ವೆ ನೇಮಕಾತಿ ಗ್ರೂಪ್ ಸಿ ಹುದ್ದೆಗಳು
ಒಟ್ಟು ಹುದ್ದೆಗಳು :  18

ಪಶ್ಚಿಮ ರೈಲ್ವೆ ಹುದ್ದೆಗಳ ವಿವರ (ವಿವಿಧ ಕ್ರೀಡಾವಾರು ಸಾಧನೆ ಪ್ರಕಾರ):

ಕುಸ್ತಿ (ಪುರುಷ) ಫ್ರೀ ಸ್ಟೈಲ್ : 2
ಶೂಟಿಂಗ್ : 1
ಕಬ್ಬಡಿ : 4
ಹಾಕಿ: 3
ತೂಕ ಎತ್ತುವಿಕೆ: 2 ಪವರ್‌ಲಿಫ್ಟಿಂಗ್ (ಪುರುಷ): 1 ಕ್ರಿಕೆಟ್ (ಮಹಿಳೆ): 01
ಪವರ್‌ಲಿಫ್ಟಿಂಗ್ (ಮಹಿಳೆ): 1 ಜಿಮ್ನಾಸ್ಟಿಕ್ (ಪುರುಷ): 02
ಕ್ರಿಕೆಟ್ (ಪುರುಷ): 02
ಬಾಲ್ ಬ್ಯಾಡ್ಮಿಂಟನ್ (ಪುರುಷ): 01

ವಿದ್ಯಾರ್ಹತೆ ಮತ್ತು ವೇತನ :
ಲೆವೆಲ್ 4 ಹುದ್ದೆಗೆ :
*ವೇತನ ರೂ.25,500-81,100. ಲೆವೆಲ್ 5 ಹುದ್ದೆಗೆ ವೇತನ ರೂ.29,200-92,300.
*ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಪದವಿ ಪಾಸ್ ಮಾಡಿರಬೇಕು. ಹಾಗೂ ಅಗತ್ಯ ಕ್ರೀಡಾ ಸಾಧನೆ ಮಾಡಿರಬೇಕು.

ಲೆವೆಲ್ 2 ಹುದ್ದೆಗೆ:
* ರೂ.19,900-63,200. ಲೆವೆಲ್ 3 ಹುದ್ದೆಗೆ ರೂ.21,700-69,100.
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿ ಪಾಸ್ ಅಥವಾ ತತ್ಸಮಾನ. ಜತೆಗೆ ಅಗತ್ಯ ಕ್ರೀಡಾ ಸಾಧನೆ.

ವಯೋಮಿತಿ:
ದಿನಾಂಕ 01-01-2022 ಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ದಿನಾಂಕ 02-01-1998 ಹಾಗೂ 01-01-2005 ರ ನಡುವೆ ಜನಿಸಿರಬೇಕು. ಇತರೆ ಯಾವುದೇ ರೀತಿಯ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗುವುದಿಲ್ಲ.

ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04-10-2022

ಅರ್ಜಿ ಸಲ್ಲಿಸಲು : https://www.rrc-wr.com/Sports/Login

ಅಧಿಕೃತ ವೆಬ್ ಸೈಟ್ : http://www.rrc-wr.com/