Home latest Uri- Nanje Gowda: ಉರಿ-ನಂಜೇಗೌಡರ ವಿಚಾರಕ್ಕೆ ರೋಚಕ ಟ್ವಿಸ್ಟ್ : ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸುಳ್ಳು...

Uri- Nanje Gowda: ಉರಿ-ನಂಜೇಗೌಡರ ವಿಚಾರಕ್ಕೆ ರೋಚಕ ಟ್ವಿಸ್ಟ್ : ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

Uri- Nanje Gowda

Hindu neighbor gifts plot of land

Hindu neighbour gifts land to Muslim journalist

Uri- Nanje Gowda :ರಾಜ್ಯದಲ್ಲಿ ಉರಿಗೌಡ, ನಂಜೇಗೌಡರ (Uri- Nanje gowda) ವಿಚಾರ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇವರ ದಾಖಲೆ ಇರುವ ಪುಸ್ತಕ ಕೂಡ ಲಭ್ಯವಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಗೌಡರಿಬ್ಬರ ಕುರಿತು ಸಿನಿಮಾ ತಯಾರಾಗಲಿದ್ದು ಮುಹೂರ್ತ ಕೂಡ ಫಿಕ್ಸ್ ಆಗಿದೆ. ನಿರರ್ಮಲಾನಂದನಾಥ ಸ್ವಾಮಿಗಳು(Nirmalanandhanatha Swamy) ಸಿನಿಮಾ ನಿರ್ದೇಶಕರು, ಬಿಜೆಪಿ(BJP) ಶಾಸಕರೂ ಆದ ಮುನಿರತ್ನ(Muni Rtna) ಅವರನ್ನು ತಮ್ಮಲ್ಲಿಗೆ ಕರೆಸಿ ಬುಲಾವ್ ನೀಡಿದ್ದಾರೆ. ಆದರೆ ಇದರ ನಡುವೆ ಈ ಗೌಡರ ವಿಚಾರ ಕುರಿತು ರಾಜ್ಯ ಒಕ್ಕಲಿಗರ ಸಂಘ ಮೌನ ಮುರಿದಿದ್ದು, ಉರಿಗೌಡ, ನಂಜೇಗೌಡ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ ಎಂದು ಹೇಳಿದೆ.

ಹೌದು, ಉರಿಗೌಡ ಮತ್ತು ನಂಜೇಗೌಡ (Urigowda-Nanjegowda) ಎಂಬ ಒಕ್ಕಲಿಗರ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ (C.N.Balakrishna) ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತಿಹಾಸದಲ್ಲಿ ಎಲ್ಲಿಯೂ ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ ಈಗ ಪ್ರಚಾರ ಮಾಡುತ್ತಿರುವುದರ ಹುನ್ನಾರವೇನು ಎಂದು ಅವರು ಪ್ರಶ್ನಿಸಿದ್ದಾರೆ. ಇತಿಹಾಸ ತಜ್ಞರು ಹೇಳಿದಂತೆ ತಾವೂ ಕೂಡ ಇವರಿಬ್ಬರು ಕಾಲ್ಪನಿಕ ವ್ಯಕ್ತಿಗಳು ಎಂಬುದಾಗಿ ಮಾತನಾಡಿದ್ದಾರೆ. ಅಧ್ಯಕ್ಷರ ನಡೆ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಮುಂದೆ ಏನೆಲ್ಲಾ ಬೆಳವಣಿಗೆಗಳಾಗಬಹುದು ಎಂದು ಕಾದು ನೋಡಬೇಕಿದೆ.

ಬಳಿಕ ಮಾತನಾಡಿದ ಅವರು “ಈ ರೀತಿಯ ಸುಳ್ಳಿನ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸುವ ಪ್ರಯತ್ನವನ್ನು ಒಕ್ಕಲಿಗ ಸಮುದಾಯ ಸಹಿಸುವುದಿಲ್ಲ. ಬಹುಶಃ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಅದರ ಲಾಭ ಗಳಿಸುವ ಉದ್ದೇಶದಿಂದ ನಮ್ಮ ಸಮುದಾಯವನ್ನು ಅನಗತ್ಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸ್ವಾಭಿಮಾನಿ ಒಕ್ಕಲಿಗ ಸಮುದಾಯ ಸುಳ್ಳುಗಳಿಗೆ ಮಾರುಹೋಗುವುದಿಲ್ಲ. ಈ ಸುಳ್ಳು ಪ್ರಚಾರದ ಮೂಲಕ ಒಕ್ಕಲಿಗರನ್ನು ಅವಮಾನಿಸುವ ಕುತಂತ್ರದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಸರ್ಕಾರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು” ಆಗ್ರಹಿಸಿದ್ದಾರೆ.

ಅಲ್ಲದೆ “ರಾಜ್ಯ ಸರ್ಕಾರವು ಈ ರೀತಿ ಸುಳ್ಳು ಸುದ್ದಿ ಹಬ್ಬುವಿಕೆಯನ್ನು ತಡೆಯದಿದ್ದರೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಸ್ಪಟಿಕಪುರಿ ಸ್ವಾಮೀಜಿ ಶ್ರೀ ನಂಜಾವಧೂತ ಸ್ವಾಮೀಯವರ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.

ಆದರೆ ಇಲ್ಲಿ ಈ ಉರಿಗೌಡ ಹಾಗೂ ನಂಜೇಗೌಡರ ಸಿನಿಮಾ ವಿಚಾರ ಪ್ರಸ್ತಾಪ ಆಗುತ್ತಿದ್ದಂತೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ನಿರ್ದೇಶಕ ಮುನಿರತ್ನರನ್ನು ಕರೆಸಿ ಅವರಲ್ಲಿ ಸಿನಿಮಾ ಬಗ್ಗೆ ಚರ್ಚಿಸಿಲಿದ್ದಾರೆ ಎಂಬ ಸುದ್ದಿ ನಿನ್ನೆ ದಿನ ಬಾರಿ ಸದ್ದು ಮಾಡಿತ್ತು. ಆದರೆ ಇದರ ಬೆನ್ನಲ್ಲೇ ಒಕ್ಕಲಿಗ ಸಂಘದ ಅಧ್ಯಕ್ಷರು ಈ ರೀತಿ ಹೇಳಿಕೆ ನೀಡಿದ್ದು ವಿಚಿತ್ರವೆನಿಸಿದೆ.