Home latest ಅನುಮಾನ ಪಟ್ಟು ಪತ್ನಿಯನ್ನು ಕೊಂದು ಹೊಲದಲ್ಲಿ ಹೂತ ಪಾಪಿ ಪತಿ ! ಅನುಮಾನ ಬಾರದಿರಲೆಂದು ಉಪ್ಪು...

ಅನುಮಾನ ಪಟ್ಟು ಪತ್ನಿಯನ್ನು ಕೊಂದು ಹೊಲದಲ್ಲಿ ಹೂತ ಪಾಪಿ ಪತಿ ! ಅನುಮಾನ ಬಾರದಿರಲೆಂದು ಉಪ್ಪು ಹಾಕಿ ತರಕಾರಿ ಬೆಳೆದ!

Hindu neighbor gifts plot of land

Hindu neighbour gifts land to Muslim journalist

ಸಂಸಾರಗಳಲ್ಲಿ ಕಲಹಗಳಿರುವುದು ಸಾಮಾನ್ಯ. ಅದು ಸ್ವಲ್ಪದರಲ್ಲೇ ಬಗೆಹರಿದುಬಿಡುತ್ತದೆ. ಆದರೆ ಈ ಅನುಮಾನ ಎಂಬ ಭೂತ ಇದೆಯಲ್ಲ, ಇದೇನಾದರೂ ಅನ್ಯೋನ್ಯ ದಂಪತಿಗಳ ನಡುವೆ ಸುಳಿಯಿತು ಎಂದರೆ ಅದರಷ್ಟು ದುರಂತ ಮತ್ತೊಂದಿಲ್ಲ. ಯಾಕೆಂದರೆ ಇತ್ತೀಚೆಗಂತೂ ಇಂತಹ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಷ್ಟೋ ಸುಂದರ ಸಂಸಾರಗಳು ಬೀದಿಪಾಲಾಗಿವೆ. ಈ ಅನುಮಾನದಿಂದಲೇ ತಮ್ಮ ಹೆಂಡತಿಯನ್ನು ಕೊಲ್ಲೋದು, ಹಿಂಸಿಸೋದು ನಡೆಯುತ್ತಿದ್ದೆ. ಸದ್ಯ ಇದೀಗ ಅಂತಹುದೆ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಹೀಗೂ ನಡೆಯಬಹುದಾ ಎಂದು ಯೋಚಿಸುವಂತೆ ಮಾಡಿದೆ. ಅಷ್ಟಕ್ಕೂ ಹೆಂಡತಿಯ ಮೇಲೆ ಅನುಮಾನ ಪಟ್ಟ ಈ ಪಾಪಾ ಗಂಡ ಮಾಡಿದ್ದೇನು ಗೊತ್ತ?

ಹೌದು, ಉತ್ತರ ಪ್ರದೇಶದ ಗಾಜೀಯಾಬಾದ್ ಎಂಬಲ್ಲಿ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ದಿನೇಶ್ ಎಂಬಾತ ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ದಿನೇಶ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಒಂದು ದಿನ ಮನೆಯಲ್ಲಿಟ್ಟು, ಕೆಲವು ಸಮಯದ ಬಳಿಕ ಹೊಲದಲ್ಲಿ ಹೂತಿದ್ದಾನೆ.

ಅಷ್ಟೇ ಅಲ್ಲದೇ ಶವ ಬೇಗನೇ ಕೊಳೆಯಲಿ ಎಂದು 30 ಕೆ.ಜಿ ಉಪ್ಪನ್ನು ದೇಹದ ಮೇಲೆ ಹಾಕಿದ್ದ. ಅದಾದ ಬಳಿಕ ಕೊಲೆ ಮಾಡಿ, ಹೂತು ಹಾಕಿರುವುದು ಯಾರಿಗೂ ಅನುಮಾನ ಬರಬಾರದೆಂದು ಹೆಂಡತಿಯ ಶವವನ್ನು ಹೂತು ಹಾಕಿದ್ದ ಸ್ಥಳದಲ್ಲಿ ತರಕಾರಿಗಳನ್ನು ಬೆಳೆದಿದ್ದಾನೆ. ನಂತರ ಕೆಲ ದಿನಗಳ ಬಳಿಕ ದಿನೇಶ್ ತಾನಾಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ಕಾಣೆ ಆಗಿದ್ದಾಳೆ ಎಂದು ದೂರು ನೀಡಿದ್ದ.

ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೊನೆಗೆ ಅನುಮಾನ ಬಂದು ದಿನೇಶ್ ನನ್ನೇ ವಿಚಾರಿಸಿದಾಗ, ಆತ ನಡೆದ ವಿಚಾರವನ್ನೆಲ್ಲ ಬಾಯಿ ಬಿಟ್ಟಿದ್ದಾನೆ. ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ, ತಾನೇ ಆಕೆಯನ್ನು ಕೊಲೆ ಮಾಡಿರುವುದಾಗಿ ಅವನು ಒಪ್ಪಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರು ದಿನೇಶ್‍ನನ್ನು ಬಂಧಿಸಿದ್ದು, ತರಕಾರಿ ಬೆಳೆದಾತ ಅದನ್ನು ಮಾರುವ ಬದಲು ಜೈಲಲ್ಲಿ ಕಂಬಿ ಎಣಿಸುತ್ತಿದ್ದಾನೆ.